ಲತಾ ಮಂಗೇಶ್ಕರ್ ಹಾಡಿರುವ ’ಏಕ್ ಪ್ಯಾರ್ ಕ ನಗ್ಮಾ ಹೇ’ ಹಾಡನ್ನು ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಾ ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂದಲ್ ಸ್ಟಾರ್ ಬದಲಾಗಿದೆ. ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ತೇರಿ ಮೇರಿ ಕಹಾನಿ ಹಾಡನ್ನು ಹೇಳಿಸಿದ ನಂತರ ಇದೀಗ ಸಲ್ಲು ಭಾಯ್ ಕೂಡಾ ಅವರಿಗೆ ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. 

ದಶಕಗಳಿಂದ ದೂರವಾಗಿದ್ದ ಅಮ್ಮ-ಮಗಳನ್ನು ಒಂದುಗೂಡಿಸಿತು ವೈರಲ್ ವಿಡಿಯೋ!

ಸಲ್ಲು ಭಾಯ್, ರಾನು ಮಂದಲ್ ಗೆ 55 ಲಕ್ಷದ ಐಷಾರಾಮಿ ಮನೆಯನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಜೊತೆಗೆ ದಬಾಂಗ್ -3 ಯಲ್ಲಿ ರಾನುಗೆ ಹಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. 

ಹಿಮೇಶ್ ರೇಶಮಿಯಾ ರಾನುಗೆ ಅವಕಾಶ ಕೊಡುವುದರ ಹಿಂದೆ ಸಲ್ಮಾನ್ ಖಾನ್ ಕುಟುಂಬದ ಪಾತ್ರವಿದೆ. ಸಲ್ಮಾನ್ ತಂದೆ ಒಮ್ಮೆ ಹಿಮೇಶ್ ಗೆ ಹೇಳಿದ್ದರಂತೆ, ಪ್ರತಿಭಾನ್ವಿತರನ್ನು ಎಲ್ಲಿಯೇ ಕಂಡರೂ ಅವರಿಗೆ ನಾವು ಅವಕಾಶ ಮಾಡಿಕೊಡಬೇಕು. ಅವರನ್ನು ಹಾಗೇಯೇ ಬಿಡಬಾರದು ಎಂದು’. ಸಲ್ಮಾನ್ ತಂದೆಯ ಮಾತನ್ನು ನೆನೆಸಿಕೊಂಡು ಹಿಮೇಶ್, ರಾನುಗೆ ಅವಕಾಶ ಕೊಟ್ಟಿದ್ದಾರಂತೆ! 

ಹಿಮೇಶ್ ರೇಶಮಿಯಾ ಜೊತೆ ’ತೇರಿ ಮೇರಿ ಕಹಾನಿ’ ಎಂದ ಜೂನಿಯರ್ ಲತಾ ಮಂಗೇಶ್ಕರ್

ಹಿಮೇಶ್ ರೇಶಮಿಯಾ ಜಡ್ಜ್ ಆಗಿರುವ ಸೂಪರ್ ಸ್ಟಾರ್ ಸಿಂಗರ್ ರಿಯಾಲಿಟಿ ಶೋಗೆ ರಾನು ಗೆಸ್ಟ್ ಆಗಿ ಆಗಮಿಸಿದ್ದರು. ಒಟ್ಟಿನಲ್ಲಿ ಯೋಗಾಯೋಗ ಹುಡುಕಿಕೊಂಡು ಬರುವುದು ಎಂದರೆ ಇದೇ ಇರಬೇಕು ನೋಡಿ!