Queen Movie: ನಟಿ ರಮ್ಯಾ ಕೃಷ್ಣನ್ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಬಲ್ಲ ನಟಿ. ಗ್ಲಾಮರ್ ಪಾತ್ರಗಳಿಂದ ಹಿಡಿದು, 'ಬಾಹುಬಲಿ'ಯ ಶಿವಗಾಮಿಯಂತಹ ಬಲವಾದ ಪಾತ್ರಗಳಲ್ಲೂ ಮಿಂಚಿದ್ದಾರೆ.
ಹಿರಿಯ ನಟಿ ರಮ್ಯಾ ಕೃಷ್ಣನ್ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಹೌದು, ಅವರು ಆಂಧ್ರಪ್ರದೇಶದ ಸಿಎಂ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 'ಕ್ವೀನ್' ಚಿತ್ರದಲ್ಲಿ ಸಿಎಂ ಲಕ್ಷ್ಮಿ ಪ್ರಣತಿ ಪಾತ್ರದ ಮೂಲಕ, ಅವರು ಆಂಧ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಲಿದ್ದಾರೆ.
ರಮ್ಯಾ ಕೃಷ್ಣನ್ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಬಲ್ಲ ನಟಿ. ಗ್ಲಾಮರ್ ಪಾತ್ರಗಳಿಂದ ಹಿಡಿದು, 'ಬಾಹುಬಲಿ'ಯ ಶಿವಗಾಮಿಯಂತಹ ಬಲವಾದ ಪಾತ್ರಗಳಲ್ಲೂ ಮಿಂಚಿದ್ದಾರೆ. ಈ ಹಿಂದೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಜೀವನ ಆಧರಿಸಿದ 'ಕ್ವೀನ್' ವೆಬ್ ಸಿರೀಸ್‌ನಲ್ಲೂ ನಟಿಸಿ ಮೆಚ್ಚುಗೆ ಗಳಿಸಿದ್ದರು.
ಈಗ ಮತ್ತೊಮ್ಮೆ ರಮ್ಯಾ ಕೃಷ್ಣನ್ 'ಕ್ವೀನ್' ಆಗಿ, ಅದೂ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಇನ್‌ಫ್ಲುಯೆನ್ಸರ್ ಯಾಮಿನಿ ಇಆರ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವನ್ನು ರತನ್ ರಿಷಿ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ರಮ್ಯಾ ಕೃಷ್ಣನ್, ಲಕ್ಷ್ಮಿ ಪ್ರಣತಿ ಎಂಬ ಸಿಎಂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.
ಕಾಲ್ಪನಿಕ ಕಥೆ
ಒನ್ ಸರ್ಕಲ್ ಫಿಲಂಸ್ ಬ್ಯಾನರ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು, 2006-2010ರ ಹಿನ್ನೆಲೆಯಲ್ಲಿ ಕಾಲ್ಪನಿಕ ಕಥೆಯನ್ನು ನಿರ್ದೇಶಕ ರತನ್ ರಿಷಿ ಹೆಣೆದಿದ್ದಾರೆ. ಚಿತ್ರದಲ್ಲಿ ಸಾಯಿಕುಮಾರ್, ಅಜಯ್ ಘೋಷ್, ತನಿಕೆಳ್ಳ ಭರಣಿ, ಕಾಳಕೇಯ ಪ್ರಭಾಕರ್ ಮತ್ತು ನವೀನ್ ಬೇತಿಗಂಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸದ್ಯ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.


