ರಾಮಾಯಣದ ಕೆಲ ಪಾತ್ರಗಳನ್ನು ನಾವು ತಪ್ಪಾಗಿ ಗ್ರಹಿಸಿದ್ದೇವೆ ಎಂದು ನಟಿ ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ. ಶೂರ್ಪಣಖಿ ತಪ್ಪಾಗಿ ಗ್ರಹಿಸಲ್ಪಟ್ಟ ಪಾತ್ರ ಎಂದಿದ್ದಾರೆ. ಏನಿದು ರಕುಲ್ ಪ್ರೀತ್ ಸಿಂಗ್ ಹೇಳಿದ ಕಹಾನಿ

ಮುಂಬೈ (ಅ.30) ರಾಮಾಯಣ ಸಿನಿಮಾಗಾಗಿ ಜನ ಕಾಯುತ್ತಿದ್ದಾರೆ. ಭಕ್ತಿ ಭಾವದಿಂದ ಸಿನಿಮಾ ವೀಕ್ಷಿಸಲು ಈಗಲೇ ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಅತ್ಯಂತ ಭಾರಿ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ರಾಮಾಯಣ ಸಿನಿಮಾ ಭಾರಿ ಕುತೂಹಲಕ್ಕೆ ಕಾರಣಾಗಿದೆ. ರಾಮಾಯಣದಲ್ಲಿ ಶೂರ್ಪಣಖಿ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇದೀಗ ಸಿನಿಮಾದಲ್ಲಿ ಈ ಪಾತ್ರವನ್ನು ರಕುಲ್ ಪ್ರೀತ್ ಸಿಂಗ್ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲು ರಕುಲ್ ಪ್ರಿತ್, ಶೂರ್ಪಣಖಿ ಪಾತ್ರದ ಹಲವು ರೋಚಕ ಘಟನೆ ಬಿಚ್ಚಿಟ್ಟಿದ್ದಾರೆ.

ಭಿನ್ನ ಶೂರ್ಪಣಖಿ ಪಾತ್ರ

ಭಾರತೀಯ ಪೌರಾಣಿಕ ಕಾವ್ಯವಾದ ರಾಮಾಯಣದಲ್ಲಿ ಶೂರ್ಪಣಖಿಯ ಪಾತ್ರವು ಅತ್ಯಂತ ಸಂಕೀರ್ಣವಾದದ್ದು ಹಾಗೂ ಸಮಾಜದಿಂದ ತಪ್ಪಾಗಿ ಗ್ರಹಿಸಲ್ಪಟ್ಟ ಪಾತ್ರ ಎಂದಿದ್ದಾರೆ. ಮಹಾಕಾವ್ಯ ಆಧಾರಿತ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿರುವುದು ಅತೀವ ಸಂತೋಷದ ವಿಚಾರ ಎಂದು ರಕುಲ್ ಪ್ರೀತಿ ಹೇಳಿದ್ದಾರೆ.ರಾಮಾಯಣದಲ್ಲಿ ಶೂರ್ಪಣಖಿ ನೆಗಟೀವ್ ಪಾತ್ರವಲ್ಲ. ಆಕೆಯ ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಂಡ ನಿರ್ಧಾರ, ಭಾವನೆ, ಹಿನ್ನಲೆಯಲ್ಲಿ ನಮಗೆ ನಕರಾತ್ಮಕವಾಗಿ ಕಾಣಿಸುತ್ತದೆ. ಭಿನ್ನ ಪದರ ಹೊಂದಿರುವ ಪಾತ್ರ ಅದು. ನಮಗೆಲ್ಲಾ ಗೊತ್ತಿರುವ ಶೂರ್ಪಣಖಿ ಪಾತ್ರಕ್ಕಿಂತ ಭಿನ್ನ ಹಾಗೂ ಅಸಲಿ, ನೈಜತೆಯ ಚಿತ್ರಣ ರಾಮಾಯಣ ಸಿನಿಮಾದಲ್ಲಿ ಸಿಗಲಿದೆ ಎಂದು ರಕುಲ್ ಪ್ರೀತ್ ಹೇಳಿದ್ದಾರೆ.

ಜಗತ್ತಿಗೆ ಭಾರತದ ಅಧ್ಯಾತ್ಮ, ಸಂಸ್ಕೃತಿ ಪರಿಚಯಿಸುವ ಸಿನಿಮಾ

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ರಾಮಾಯಾಣ ಸಿನಿಮಾ ಭಾರತೀಯ ಪ್ರೇಕ್ಷಕರಿಗೆ, ಸಿನಿಮಾ ಅಭಿಮಾನಿಗಳಿಗೆ ಮಾತ್ರ ಸೀಮಿತವಲ್ಲ ಎಂದು ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ. ಇದು ಭಾರತದ ಭವ್ಯ ಸಂಸ್ಕೃತಿ, ಪರಂಪರೆ, ಆಧ್ಯಾತ್ಮಿಕ ಮೌಲ್ಯ ಹಾಗೂ ಪೌರಾಣಿಕ ಹಿನ್ನಲೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಅತ್ಯಂತ ಶ್ರೇಷ್ಠ ಸಿನಿಮಾ ಆಗಲಿದೆ ಎಂದು ರಕುಲ್ ಪ್ರೀತ್ ಹೇಳಿದ್ದಾರೆ. ವಿಶ್ವ ಸಿನಿರಂಗಕ್ಕೆ ಭಾರತೀಯ ಚಿತ್ರರಂಗದ ಸಾಮರ್ಥ್ಯವನ್ನು ಇದು ತೋರಿಸಿಕೊಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಸೂಪರ್‌ಸ್ಟಾರ್ ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿದ್ದಾರೆ. ಲಾಸ್ ಎಂಜಲೀಸ್‌ನಲ್ಲಿ ನಡೆದ ಸಿನಿಮಾ ಪ್ರಚಾರದಲ್ಲಿ ಯಶ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ರಾಮಾಯಾಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಟೀಸರ್‌ಗಳಲ್ಲಿ ಯಶ್ ತುಂಬಿ ತುಳುಕುತ್ತಿದ್ದಾರೆ. ಪ್ರಪಂಚದಾದ್ಯಂತ ಅಪಾರ ಕುತೂಹಲ ಮೂಡಿಸಿರುವ ಈ ತಾರಾಗಣದಲ್ಲಿ, ಶೂರ್ಪಣಖಿಯಂತಹ ಮಹತ್ವದ ತಿರುವು ನೀಡುವ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಅಭಿನಯಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ