ರಜನಿಕಾಂತ್‌ ಅಭಿನಯ ಹಾಗೂ ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದ ‘ಪೆಟ್ಟಾ’ ಚಿತ್ರ ಇಂದು (ಜ.10) ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಸರಿ ಸುಮಾರು 1500ಕ್ಕೂ ಹೆಚ್ಚು ಪರದೆಗಳಲ್ಲಿ ಅದು ಬಿಡುಗಡೆ ಆಗುತ್ತಿದೆ. ಕರ್ನಾಟಕದಲ್ಲೇ ನೂರಕ್ಕೂ ಹೆಚ್ಚು ಪರದೆಗಳಲ್ಲಿ ಅದು ತೆರೆಗೆ ಬರುತ್ತಿದೆ.

'ಪೆಟ್ಟಾ' ಕನ್ನಡ ಚಿತ್ರಕ್ಕೆ ರಜನಿ ಧ್ವನಿ ನೀಡ್ತಾರಾ?

ಕರ್ನಾಟಕಕ್ಕೆ ಮೈಸೂರು ಟಾಕೀಸ್‌ ಮೂಲಕ ನಿರ್ಮಾಪಕ ಜಾಕ್‌ ಮಂಜು ವಿತರಣೆಯ ಹಕ್ಕು ಪಡೆದಿದ್ದಾರೆ. ಅವರೊಂದಿಗೆ ನಿರ್ಮಾಪಕರಾದ ಎನ್‌. ಕುಮಾರ್‌ ಹಾಗೂ ಸೈಯದ್‌ ಸಲಾಂ ಕೂಡ ಸಾಥ್‌ ನೀಡಿದ್ದಾರೆ. ಬಿಕೆಟಿ ಸೇರಿದಂತೆ ಮೈಸೂರು, ಹಾಸನ, ಮಂಗಳೂರು, ಶಿವಮೊಗ್ಗ, ದಾವಣಗೆರೆ ಭಾಗಗಳಲ್ಲಿ ಜಾಕ್‌ ಮಂಜು ಚಿತ್ರವನ್ನು ವಿತರಿಸುತ್ತಿದ್ದರೆ, ಎನ್‌. ಕುಮಾರ್‌ ಉತ್ತರ ಕರ್ನಾಟಕದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ರಜನಿಕಾಂತ್‌ ಅಭಿನಯದ ಸಿನಿಮಾಗಳು ಒಂದರ ಹಿಂದೆ ಒಂದು ತೆರೆ ಕಾಣುತ್ತಿವೆ. ‘ಕಾಲಾ’ ಬಂದು ಹೋದ ಬೆನ್ನಲೇ ‘2.0’ ತೆರೆಗೆ ಬಂತು. ಈಗ ‘ಪೆಟ್ಟಾ’ ಸರದಿ.