ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಪೆಟ್ಟಾ’ ಜನವರಿ 11ರಂದು ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಈಗಾಗಲೇ ಸುದ್ದಿಯಾದಂತೆ ಕನ್ನಡ ಆವೃತ್ತಿ ಬಿಡುಗಡೆಯಾಗುತ್ತಿಲ್ಲ.  ಅದರ ಬದಲಿಗೆ ಎರಡು ವಾರಗಳ ನಂತರ ಪೆಟ್ಟಾ ಕನ್ನಡ ಆವೃತ್ತಿ ಬಿಡುಗಡೆಯಾಗಲಿದೆ.

ಇಂಟರೆಸ್ಟಿಂಗ್ ಅಂದ್ರೆ ಈ ಕನ್ನಡ ಚಿತ್ರಕ್ಕೆ ರಜನಿಕಾಂತ್ ಧ್ವನಿ ನೀಡುವ ಸಾಧ್ಯತೆ ಇದೆ. ಕನ್ನಡ ವರ್ಷನ್ ಕೂಡ ಗುರುವಾರ ತೆರೆಗೆ ಬರಬೇಕಾಗಿತ್ತಾದರೂ, ಸದ್ಯಕ್ಕೀಗ ಅದಕ್ಕೆ ಬ್ರೇಕ್ ಬಿದ್ದಿದೆ. ಅದಕ್ಕೆ ಕಾರಣ ಕನ್ನಡದ ವರ್ಷನ್‌ಗೆ ರಜನಿ ವಾಯ್ಸ್ ಇರಬೇಕೆನ್ನುವುದು. ಕನ್ನಡ ವರ್ಷನ್‌ಗೆ ಯಾವುದೇ ಟೈಟಲ್ ಫೈನಲ್ ಆಗಿಲ್ಲ. ಪೇಟಾ ಅಂತಲೇ ಬರುತ್ತಿದೆ ಅಂತಲೂ ಹೇಳಲಾಗುತ್ತಿದೆ.

ಮಿಸ್ಸಾಗಿದ್ದ ಪೇಟಾ ರಜನಿಗೆ ಸಿಕ್ಕಿದ್ದು ಹೇಗೆ?

ಆದರೆ, ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ‘ಕನ್ನಡದ ವರ್ಷನ್‌ಗೆ ರಜನಿಕಾಂತ್ ಅವರೇ ವಾಯ್ಸ್ ಚೆನ್ನಾಗಿರುತ್ತೆ ಅಂತಲೂ ಮಾತುಕತೆ ನಡೆದಿದೆ. ಅದು ಕೂಡ ಫೈನಲ್ ಆಗಿಲ್ಲ. ಸದ್ಯಕ್ಕೀಗ ಅವರೊಂದಿಗೆ ಮಾತುಕತೆ ನಡೆದಿದೆ’ ಎನ್ನುತ್ತಾರೆ ವಿತರಕ ಜಾಕ್ ಮಂಜು. ಕರ್ನಾಟಕದಲ್ಲಿ ಈ ಚಿತ್ರದ ವಿತರಣೆಯನ್ನು ಮಂಜು ಪಡೆದುಕೊಂಡಿದ್ದಾರೆ.