ಬುಲ್‌ಬುಲ್ ಹುಡುಗಿ ರಚಿತಾ ರಾಮ್ ಈಗ ಫುಲ್ ಬ್ಯುಸಿ | ಶಿವರಾಜ್ ಕುಮಾರ್ ಜೊತೆ ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ | ಡಿಸಂಬರ್’ನಲ್ಲಿ ಚಿತ್ರೀಕರಣ ಆರಂಭ | ಪ್ರಸಿದ್ಧ ನಿರ್ದೇಶಕ ಪಿ.ವಾಸು ಆ್ಯಕ್ಷನ್ ಕಟ್ ಹೇಳಲಿದ್ದಾರೆ 

ಬೆಂಗಳೂರು (ಸೆ. 26): ದ್ವಾರಕೀಶ್ ನಿರ್ಮಾಣ ಹಾಗೂ ಪಿ.ವಾಸು ನಿರ್ದೇಶನದ ಹೊಸ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೋಡಿ ಆಗಿ ರಚಿತಾರಾಮ್ ಅಭಿನಯಿಸುತ್ತಿದ್ದಾರೆ. ‘ಚೌಕ’ ಯಶಸ್ಸಿನ ನಂತರ ಯೋಗಿ ದ್ವಾರಕೀಶ್ ಬಿಗ್‌ಸ್ಟಾರ್ ಹಾಗೂ ಬಿಗ್ ಬಜೆಟ್‌ನಲ್ಲೇ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಚಿತಾ ರಾಮ್ ಏಪ್ರಿಲ್’ನಲ್ಲಿ ಸಸ್ಪೆನ್ಸ್ ಕೊಡಲಿದ್ದಾರೆ!

ಈ ಚಿತ್ರಕ್ಕೆ ಪ್ರಸಿದ್ಧ ನಿರ್ದೇಶಕ ಪಿ.ವಾಸು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಡಿಸೆಂಬರಲ್ಲಿ ಆರಂಭವಾಗಲಿದೆ.

25 ದಿನದಲ್ಲಿ 7 ಕೆಜಿ ತೂಕ ಇಳಿಸಿಕೊಂಡ ರಚಿತಾರಾಮ್

‘ತಮ್ಮ ಸಿನಿಜರ್ನಿಯಲ್ಲಿ ಇದೊಂದು ವಿಶೇಷವಾದ ಸಿನಿಮಾ. ಶಿವರಾಜ್ ಕುಮಾರ್ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿದೆ. ಉದಯ ಟಿವಿಯ ಕಿಕ್ ರಿಯಾಲಿಟಿ ಶೋನಲ್ಲಿ ಅವರೊಂದಿಗೆ ತೀರ್ಪುಗಾರರಾಗಿ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕ ನಂತರ ನಾನು ಅವರನ್ನು ಹೆಚ್ಚು ಅರ್ಥ ಮಾಡಿಕೊಂಡೆ. ಅವರೊಬ್ಬ ಆ್ಯಕ್ಟರ್, ಸ್ಟಾರ್ ಎನ್ನುವುದಕ್ಕಿಂತ ಒಳ್ಳೆಯ ಹ್ಯೂಮನ್ ಬೀಯಿಂಗ್.

ಆಗಲೇ ನನಗನಿಸಿದ್ದು ಅಂತಹ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಗಬೇಕು ಅಂತ. ಹಾಗಂದುಕೊಂಡ ಕೆಲವೇ ದಿನಗಳಲ್ಲಿ ಅವರದೇ ಅಭಿನಯದ ‘ರುಸ್ತುಂ’ ಚಿತ್ರಕ್ಕೆ ಆಯ್ಕೆ ಆದೆ. ಕೆಲವೇ ದಿನಗಳ ನಂತರವೀಗ ಅವರ ಜೋಡಿಯಾಗಿಯೇ ಅಭಿನಯಿಸುವ ಅವಕಾಶ ಬಂತು. ಇದೆಲ್ಲ ಲಕ್ ಅಂತಾರಲ್ಲ ಹಾಗೆ’ ಎನ್ನುವುದು ರಚಿತಾ ರಾಮ್ ಅನಿಸಿಕೆ.

ರಚಿತಾ ರಾಮ್’ಗೆ ಜೋಡಿಯಾಗಲಿದ್ದಾರೆ ವಿವೇಕ್ ಒಬೆರಾಯ್