ರಚಿತಾ ರಾಮ್’ಗೆ ಜೋಡಿಯಾಗಲಿದ್ದಾರೆ ವಿವೇಕ್ ಒಬೆರಾಯ್

First Published 25, Jul 2018, 9:23 AM IST
Bollywood actor Vivek Oberoi debut to Sandalwood
Highlights

ಬಾಲಿವುಡ್ ನಟ ವಿವೇಕ್ ಒಬೆರಾಯ್ ಕನ್ನಡಕ್ಕೆ ಬರುತ್ತಿದ್ದಾರೆ ಅನ್ನೋದು ಈಗಾಗಲೇ ಘೋಷಣೆಯಾಗಿದೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ರುಸ್ತುಂ ಚಿತ್ರದಲ್ಲಿ ಶ್ರದ್ದಾ ಶ್ರೀನಾಥ್ ಹಾಗೂ ಶಿವಣ್ಣ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ. 

ಬೆಂಗಳೂರು (ಜು. 25): ರಚಿತಾ ರಾಮ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಅದು ವಿಲನ್‌ಗೆ ಜೋಡಿಯಾಗಿ. ಅಂತಿಂಥಾ ವಿಲನ್ ಅಲ್ಲ, ಬಾಲಿವುಡ್‌ನಿಂದ ಬಂದ ಭಾರಿ ವಿಲನ್ ವಿವೇಕ್ ಒಬೆರಾಯ್. ರವಿವರ್ಮ ನಿರ್ದೇಶನದ ‘ರುಸ್ತುಂ’ ಚಿತ್ರದಲ್ಲಿ ವಿವೇಕ್ ಜೋಡಿಯಾಗಿ ನಟಿಸಲಿದ್ದಾರೆ ರಚಿತಾ.

ಶಿವರಾಜ್‌ಕುಮಾರ್ ಹಾಗೂ ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ  ಹಂತದಲ್ಲಿ ರಚಿತಾ ಚಿತ್ರತಂಡದೊಳಕ್ಕೆ  ಬಲಗಾಲಿಟ್ಟು ಒಳಗೆ ಬಂದಿದ್ದಾರೆ. ಕತೆಗೆ ಬಹು ಮುಖ್ಯವಾದ ತಿರುವು ಕೊಡುವ ಪಾತ್ರ ಇದು ಎನ್ನಲಾಗಿದೆ. ಮೊದಲ ಬಾರಿಗೆ ಬಾಲಿವುಡ್ ನಟನ ಜತೆ ಅಭಿಯಿಸುತ್ತಿರುವ ಖುಷಿಯಲ್ಲಿದ್ದಾರೆ ರಚಿತಾ ರಾಮ್. ನಾಲ್ಕು ಸಿನಿಮಾ, ನಾಲ್ಕು ವಿಧ: ರುಸ್ತುಂ ಸಿನಿಮಾ ಹೊರತುಪಡಿಸಿದರೆ ರಚಿತಾ ರಾಮ್ ಕೈಯಲ್ಲಿ ಈಗ ನಾಲ್ಕು  ಸಿನಿಮಾಗಳಿವೆ.

ಪುನೀತ್‌ರಾಜ್‌ಕುಮಾರ್ ನಟನೆಯ ‘ನಟಸಾರ್ವಭೌಮ’, ಉಪೇಂದ್ರ ಜತೆ ಐ ಲವ್ ಯೂ’, ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಮತ್ತು ಸತೀಶ್ ನೀನಾಸಂ ಜತೆಗೆ ‘ಅಯೋಗ್ಯ’. ಹೀಗೆ ನಾಲ್ಕು ಸಿನಿಮಾಗಳು ನಾಲ್ಕು ರೀತಿಯ ಕತೆಗಳನ್ನು ಒಳಗೊಂಡಿದ್ದು, ಈ ಪೈಕಿ ‘ಅಯೋಗ್ಯ’ ಬಿಡುಗಡೆಗೆ ಸಜ್ಜಾಗಿದೆ.

‘ನಾನು ಸ್ಯಾಂಡಲ್‌ವುಡ್ ಬ್ಯುಸಿ ನಟಿ ಎನ್ನುವುದಕ್ಕಿಂತ ನನಗೆ ಒಪ್ಪುವಂತಹ ಪಾತ್ರ ಮತ್ತು ಕತೆಗಳನ್ನು ಆಯ್ಕೆ ಮಾಡಿಕೊಂಡು ಮಾಡುತ್ತಿದ್ದೇನೆ. ಐದು ಸಿನಿಮಾಗಳ ಜತೆಗೆ ಒಂದು ವಾರದಲ್ಲಿ ಮತ್ತೊಂದು ಸಿನಿಮಾಗೆ ಬುಕ್ ಆಗುತ್ತಿದ್ದೇನೆ. ಈಗ ಬಿಡುಗಡೆಗೆ ಸಜ್ಜಾಗಿರುವ ಅಯೋಗ್ಯ ಚಿತ್ರದ ಹಾಡುಗಳಿಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ಬರುತ್ತಿದೆ. ಏನಮ್ಮಿ ಏನಮ್ಮಿ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಭಾರತದ ಮಟ್ಟಿಗೆ 4 ನೇ ಸ್ಥಾನದಲ್ಲಿದ್ದು, ಕರ್ನಾಟಕದಲ್ಲಿ ನಂ.1 ಸ್ಥಾನದಲ್ಲಿದೆ ಈ ಹಾಡು’ ಎನ್ನುತ್ತಾರೆ ರಚಿತಾ ರಾಮ್.  

loader