ರಚಿತಾ ರಾಮ್ ಏಪ್ರಿಲ್’ನಲ್ಲಿ ಸಸ್ಪೆನ್ಸ್ ಕೊಡಲಿದ್ದಾರೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 3:39 PM IST
Rachita Ram upcoming movie Suspense will release soon
Highlights

ರಚಿತಾ ರಾಮ್ ಮತ್ತೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ‘ರುಸ್ತುಂ’ಗೆ ಎಂಟ್ರಿಯಾದ ಈ ಡಿಂಪಲ್ ಕ್ವೀನ್, ಈಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. 

ಬೆಂಗಳೂರು (ಜು. 31): ರಚಿತಾ ರಾಮ್ ಮತ್ತೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ‘ರುಸ್ತುಂ’ಗೆ ಎಂಟ್ರಿಯಾದ ಈ ಡಿಂಪಲ್ ಕ್ವೀನ್, ಈಗ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಚಿತ್ರದ ಹೆಸರು ‘ಏಪ್ರಿಲ್’. ನಿರ್ದೇಶಕರು ಸತ್ಯ ರಾಯಲ.

ರೀಡರ್ಸ್ ಡೈಜೆಸ್ಟ್ ಪುಸ್ತಕದಲ್ಲಿ ಓದಿದ ಕತೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ‘ಎರಡು ತಿಂಗಳ ಹಿಂದೆಯೇ ರಚಿತಾ ರಾಮ್ ಅವರು ಕತೆ ಕೇಳಿ ತುಂಬಾ ಥ್ರಿಲ್ಲಾಗಿದ್ದರು. ಈ ಚಿತ್ರದಲ್ಲಿ ರಚಿತಾ ರಾಮ್ ಅವರ ಪಾತ್ರದ ಹೆಸರು ಏಪ್ರಿಲ್ ಡಿಸೋಜಾ. ಈ ಕ್ಯಾರೆಕ್ಟರ್‌ಗೆ ಎರಡನೇ ಬಾರಿಗೆ ಬದುಕುವ ಅವಕಾಶ ಸಿಗುತ್ತದೆ. ವಸಂತಕಾಲದ ಎರಡನೇ ತಿಂಗಳು ಕೂಡ ಏಪ್ರಿಲ್. ಅದೇ ತಿಂಗಳಲ್ಲಿ ಬದುಕು ಛಾನ್ಸ್ ತೆಗೆದುಕೊಳ್ಳುವ ಕ್ಯಾರೆಕ್ಟರ್ ಇರುವ ಕಾರಣಕ್ಕೆ ಚಿತ್ರಕ್ಕೆ ಏಪ್ರಿಲ್ ಎಂದು ಹೆಸರಿಟ್ಟಿದ್ದೇನೆ’ ಎನ್ನುತ್ತಾರೆ ಸತ್ಯ ರಾಯಲ. ನಾರಾಯಣ ಬಾಬು ‘ಏಪ್ರಿಲ್’ ಚಿತ್ರದ ನಿರ್ಮಾಪಕರು. 

loader