Asianet Suvarna News Asianet Suvarna News

25 ದಿನದಲ್ಲಿ 7 ಕೆಜಿ ತೂಕ ಇಳಿಸಿಕೊಂಡ ರಚಿತಾರಾಮ್

ಅಯೋಗ್ಯ ಚಿತ್ರ ಗೆದ್ದಿದೆ. ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ ಚಿತ್ರಗಳು ಭಾರಿ ಕುತೂಹಲ ಹುಟ್ಟಿಸಿವೆ. ಸಂದರ್ಭ ಹೀಗಿರುವಾಗ ಆ ಚಿತ್ರಗಳ ನಾಯಕಿ ರಚಿತಾರಾಮ್ ಏಳು ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಅದೂ ಕೇವಲ 25 ದಿನದಲ್ಲಿ.

Sandalwood Dimple queen rachitha weight loss in 25 days
Author
Bengaluru, First Published Sep 15, 2018, 10:33 AM IST
  • Facebook
  • Twitter
  • Whatsapp

ಇತ್ತೀಚೆಗೆ ಚೂರು ದಪ್ಪ ಕಾಣಿಸುತ್ತಿದ್ದ ರಚಿತಾ, ಇದೀಗ 65  ಕೆಜಿಯಿಂದ 58 ಕ್ಕೆ ಇಳಿದಿದ್ದಾರೆ. ಹಾಗಂತ ಇದೇನೂ ಸಿನಿಮಾ ಕಾರಣಕ್ಕೆ ಅಲ್ಲ ಎಂದಿದ್ದಾರೆ. ‘ಮೊದಲಿನಿಂದಲೂ ನಾನೇನು ಹೆಚ್ಚು ದಪ್ಪಗಿದ್ದವಳಲ್ಲ. ಸಪೂರವಾಗಿದ್ದಾಗಲೇ ನಟಿಯಾಗಿ ಇಲ್ಲಿಗೆ ಬಂದೆ. ಹೆಚ್ಚು ಕಡಿಮೆ ಕಳೆದ ಈ ಎರಡು ವರ್ಷಗಳವರೆಗೂ ನಾನು ಇದ್ದಿದ್ದೇ ಹಾಗೆ. ಅದ್ಯಾಕೋ ದಪ್ಪಗಿದ್ರೆ ಹೇಗೆ ಕಾಣ್ಬಹುದು ಅಂತೆನೆಸಿತು. ಒಂದಷ್ಟು ವರ್ಕೌಟ್ ಕಡಿಮೆ ಮಾಡಿದೆ. ಊಟ ಜಾಸ್ತಿ ಆಯಿತು. ಛಬ್ಬಿ ಛಬ್ಬಿ ಅಂತಾರಲ್ಲ ಹಾಗಾದೆ. ‘ಅಯೋಗ್ಯ’, ಜತೆಗೆ ‘ಸೀತಾ ರಾಮ ಕಲ್ಯಾಣ’ ಎರಡು ಚಿತ್ರಗಳಲ್ಲೂ ನಾನು ಹಾಗೆಯೇ ಅಭಿನಯಿಸಿದೆ. ಈಗ ದಪ್ಪಗಾಗಿದ್ದು ಸಾಕು ಎಂತೆನಿಸಿತು. ಹಾಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದೇನೆ. ಇದು ಯಾವುದೋ ಹೊಸ ಪ್ರಾಜೆಕ್ಟ್ ಅಂತ ಖಂಡಿತಾ ಅಲ್ಲ. ನನ್ನಷ್ಟಕ್ಕೆ ನಾನೇ ಕಡಿಮೆ ಆಗೋಣ
ಅಂತಷ್ಟೇ’ ಎನ್ನುತ್ತಾರೆ ರಚಿತಾರಾಮ್.

ಇವರ ಟ್ರೈನರ್ ಶ್ರೀನಿವಾಸ್. ಬೆಂಗಳೂರಿನ ಮಸಲ್ 360 ಜಿಮ್‌ನ ಶ್ರೀನಿವಾಸ್ ಅವರು ರಕ್ಷಿತ್ ಶೆಟ್ಟಿ, ಧನಂಜಯ್ ಸೇರಿಕಂದೆ ಅನೇಕ ಸೆಲೆಬ್ರಿಟಿಗಳಿಗೆ ಫಿಟ್‌ನೆಸ್ ಟ್ರೈನರ್. ಅವರಿಂದ ತರಬೇತಿ ಪಡೆದ ರಚಿತಾರಾಮ್ ಕಡಿಮೆ ದಿನದಲ್ಲಿ ಜಾಸ್ತಿ ತೂಕ ಇಳಿಸಿಕೊಂಡಿದ್ದಾರೆ.

ಆರೋಗ್ಯವಾಗಿ ಇರುವವರಿಗೆ ತೂಕ ಕಡಿಮೆ ಮಾಡುವುದು ತುಂಬಾ ಕಷ್ಟವೇನಿಲ್ಲ. ರಚಿತಾ ರಾಮ್ ಅವರು ಬೆಳಿಗ್ಗೆ ಸಂಜೆ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ನಮ್ಮ ಜಿಮ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅವರ ಶ್ರದ್ಧೆಯೇ ಇದಕ್ಕೆಲ್ಲಾ ಕಾರಣ- ಶ್ರೀನಿವಾಸ್ ಮಸಲ್ 360 ಸ್ಥಾಪ

Follow Us:
Download App:
  • android
  • ios