ಪುಟ್ಟಕ್ಕನ ಮಕ್ಕಳು ಸೀರಿಯಲ್​ ಸ್ನೇಹಾ, ನಂಜಮ್ಮ ಮತ್ತು ರಾಜಿ ಸೇರಿ ಸಕತ್​ ರೀಲ್ಸ್ ಮಾಡಿದ್ದಾರೆ. ಪಕ್ಕದ ಮನೆಯ ಕೋಳಿ ಮಾತ್ರ ತಿನ್ನೋ ಕಳ್ಳಿಯರ ಬಗ್ಗೆ ಹೇಳಿದ್ದಾರೆ ನೋಡಿ!

ಸದ್ಯ ಪುಟ್ಟಕ್ಕನ ಮಕ್ಕಳು ಮುಗಿಯುವ ಹಂತದಲ್ಲಿದೆ. ವಿಲನ್​ ಯಾರು ಎಂದು ತಿಳಿದಿದೆ. ಆ ಸ್ನೇಹಾಳ ಹಾರ್ಟ್​ ಹಾಕಿದ್ದು ಈ ಸ್ನೇಹಾಳಿಗೆ ಎನ್ನುವ ವಿಷಯವೂ ಕಂಠಿ ಸೇರಿದಂತೆ ಎಲ್ಲರಿಗೂ ತಿಳಿದಿದೆ. ರಾಧಾ ಹೇಗಾದರೂ ಮಾಡಿ ಕಂಠಿಯನ್ನು ಮೋಸದಿಂದ ಮದುವೆಯಾಗಲು ಹೋಗಿದ್ದಳು. ಅವಳೂ ಪೊಲೀಸ್​ ವಶಕ್ಕೆ ಸೇರಿದ್ದಾರೆ. ಸ್ನೇಹಾ ಮತ್ತು ಕಂಠಿಯ ಮದುವೆಯಾಗಿದ್ದು, ಮೊದಲ ರಾತ್ರಿಯೂ ಆಗಿದೆ. ಕಂಠಿ ಮತ್ತು ಸ್ನೇಹಾಳ ಮದುವೆಯಾದ ಮೇಲೆ ಕಂಠಿ ಸಿಟ್ಟುಮಾಡಿಕೊಂಡು ಮನೆಬಿಟ್ಟು ಹೋದ ಹಾಗೆ ತೋರಿಸಲಾಗಿತ್ತು. ಅಯ್ಯೋ ಸೀರಿಯಲ್​ ಅನ್ನು ಮತ್ತಷ್ಟು ಎಳೆಯುತ್ತಾರಾ ಎಂದುಕೊಳ್ಳುವಾಗಲೇ ಇದಕ್ಕೆ ಸುಖಾಂತ್ಯವನ್ನೂ ಹಾಡಲಾಗಿದೆ.

ಸ್ನೇಹಾ ನಾಚಿಕೆ ಬಿಟ್ಟು ಫಸ್ಟ್​ನೈಟ್​ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ ಎಂದಿದ್ದಾಳೆ. ಅದರಂತೆ ಮನೆಯವರು ಎಲ್ಲರೂ ಒಪ್ಪಿದ್ದಾರೆ. ಈ ಸಮಯದಲ್ಲಿಯೂ ಕಂಠಿ ಸ್ನೇಹಾಳ ಮೇಲೆ ಕೋಪ ತೋರಿದ್ದ. ಕೊನೆಗೆ ಅದು ಹುಸಿ ಮುನಿಸು ಎಂದು ತಿಳಿದಿದೆ. ಅಷ್ಟರಲ್ಲಿಯೇ ಜೈಲಿನಲ್ಲಿರೋ ರಾಧಾ ಕಂಠಿಯ ಕೊಲೆಗೆ ಸ್ಕೆಚ್​ ಹಾಕಿದ್ದಾಳೆ. ಕಂಠಿಯನ್ನು ಮುಗಿಸಲು ರೌಡಿಗಳು ಬಂದಿದ್ದು, ಆತನನ್ನು ಹೊಡೆದಿದ್ದಾರೆ. ಸೀರಿಯಲ್​ ಇನ್ನಷ್ಟು ಎಳೆಯುವ ಸೂಚನೆಗಳೂ ಇದರಲ್ಲಿ ಕಾಣುತ್ತಿರುವ ನಡುವೆ ಅದಕ್ಕೂ ಒಳ್ಳೆಯ ಟಚ್​ ನೀಡಲಾಗಿದೆ.

ಸೀರಿಯಲ್​ ವಿಷ್ಯ ಹೀಗಿರುವಾಗ, ಅದರ ನಡುವೆಯೇ ಸ್ನೇಹಾ, ರಾಜಿ ಮತ್ತು ನಂಜಮ್ಮ ಸೇರಿ ರೀಲ್ಸ್​ ಮಾಡಿದ್ದಾರೆ. ಓಪನ್​ ದಿ ಡೋರ್​ ಡಾರ್ಲಿಂಗ್​ ಓಪನ್​ ಡೋರ್​ ಹಾಡು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಟ್ರೆಂಡಿಂಗ್​ನಲ್ಲಿ ಇದೆ. ಇದರಲ್ಲಿ ತುಂಬಾ ಒಳ್ಳೆಯವರು ನಾವು ಕೋಳಿ ತಿನ್ನಲ್ಲ, ಪಕ್ಕದ್​ ಮನೆ ಕೋಳಿ ಬಂದ್ರೆ ಸುಮ್ನೆ ಬಿಡಲ್ಲ ಎನ್ನುವ ಲಿರಿಕ್ಸ್​ ಇದ್ದು, ಅದಕ್ಕೆ ಈ ಮೂವರೂ ಸಕತ್​ ಸ್ಟೆಪ್​ ಹಾಕಿದ್ದು, ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸೀರಿಯಲ್​ ಮುಗಿಯುವ ಲಕ್ಷಣಗಳು ಕಾಣಿಸ್ತಿವೆ. ಮೊದಲ ಸ್ನೇಹಾ ಸತ್ತು ಹೋದ ಸಮಯದಲ್ಲಿ ಪುಟ್ಟಕ್ಕನ ಮಕ್ಕಳು ಟಿಆರ್​ಪಿ ಕಡಿಮೆಯಾಗುತ್ತಾ ಬಂದಿತ್ತು. ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಯಿತು. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬಂದಿತ್ತು. ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು. ಕೊನೆಯ ಬಂದ ಸ್ನೇಹಾಳನ್ನೂ ತೆಗೆದು ಆ ಜಾಗಕ್ಕೆ ಮತ್ತೊಬ್ಬ ಸ್ನೇಹಾಳನ್ನು ತಂದರು. ಒಟ್ಟಿನಲ್ಲಿ ಸೀರಿಯಲ್​ ಸಾಕು, ಮುಗಿಸಿ ಎನ್ನುತ್ತಿದ್ದಾರೆ ವೀಕ್ಷಕರು.

View post on Instagram