ಅಮೆಝಾನ್ ಪ್ರೈಂ ಜೊತೆ ಪ್ರಿಯಾಂಕ ಚೋಪ್ರಾ ಡೀಲ್..!
ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕ ಚೋಪ್ರಾ ಅಮೆಜಾನ್ ಪ್ರೈಂ ಜೊತೆ ಎರಡು ವರ್ಷದ ಮಲ್ಟಿ ಮಿಲಿಯನ್ ಡಾಲರ್ ಫಸ್ಟ್ ಲುಕ್ ಟಿವಿ ಡೀಲ್ ಮಾಡಿಕೊಂಡಿದ್ದಾರೆ. ಈ ಮೂಲಕ ದೇಶೀಯ ಚಿತ್ರಗಳಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪಿಗ್ಗಿ ಪ್ರಯತ್ನ ನಡೆಸಿದ್ದಾರೆ.
ನಟಿ ಹಾಗೂ ನಿರ್ಮಾಪಕಿ ಪ್ರಿಯಾಂಕ ಚೋಪ್ರಾ ಅಮೆಜಾನ್ ಪ್ರೈಂ ಜೊತೆ ಎರಡು ವರ್ಷದ ಮಲ್ಟಿ ಮಿಲಿಯನ್ ಡಾಲರ್ ಫಸ್ಟ್ ಲುಕ್ ಟಿವಿ ಡೀಲ್ ಮಾಡಿಕೊಂಡಿದ್ದಾರೆ. ಈ ಮೂಲಕ ದೇಶೀಯ ಚಿತ್ರಗಳಿಗೆ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪಿಗ್ಗಿ ಪ್ರಯತ್ನ ನಡೆಸಿದ್ದಾರೆ.
ನಾನೊಬ್ಬ ನಟಿ ಹಾಗೂ ನಿರ್ಮಾಪಕಿಯಾಗಿ ಜಗತ್ತಿನಾದ್ಯಂತ ಭಾಷೆ, ಗಡಿ ದಾಟಿ ಪ್ರತಿಭೆಗಳಿಗೆ ಒಂದು ಮುಕ್ತ ವೇದಿಕೆಯ ಕನಸು ಕಂಡಿದ್ದೆ. ನನ್ನ ಪ್ರೊಡಕ್ಷನ್ ಹೌಸ್ ಪರ್ಪಲ್ ಪೆಬಲ್ ಕಂಪನಿಯ ಉದ್ದೇಶವೂ ಇದೇ ಆಗಿದೆ. ಈ ನಿಟ್ಟಿನಲ್ಲಿ ಅಮೆಜಾನ್ ಜೊತೆಗಿನ ಡೀಲ್‌ನೊಂದಿಗೆ ಹೊಸ ಹೆಜ್ಜೆ ಇಟ್ಟಿದ್ದೇನೆ ಎಂದು ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಪ್ರಿಯಾಂಕ ಚೋಪ್ರಾ ಕಪ್ಪೆಂದು ಬಂಧುಗಳೇ ಹೀಯಾಳಿಸಿದ್ದರು!
ಹೊಸ ಆಲೋಚನೆಗಳಿಗೆ ನನ್ನನ್ನು ನಾನು ತೆರೆದುಕೊಳ್ಳುವುದರ ಜೊತೆಗೆ, ಬರೀ ಮನೋರಂಜನೆ ಮಾತ್ರ ನೀಡದೆ ಅದರ ಜೊತೆಗೇ ಜನರ ದೃಷ್ಟಿ ಹಾಗೂ ಯೋಚನಾ ಲಹರಿಯನ್ನು ನಾವು ತೆರೆಯಬೇಕು. ಕಳೆದ 20 ವರ್ಷದ ಸಿನಿ ಜರ್ನಿಯಲ್ಲಿ, 60 ಸಿನಿಮಾಗಳ ನಂತರ ನನ್ನ ಕನಸು ನನಸು ಮಾಡುತ್ತಿದ್ದೇನೆ ಎಂದೆನಿಸುತ್ತಿದೆ.
ಅಮೆಜಾನ್ ಸ್ಟುಡಿಯೋ ಮುಖ್ಯಸ್ಥೆ ಜೆನ್ನಿಫರ್ ಸಾಲ್ಕ್ ಈ ಬಗ್ಗೆ ಪ್ರತಿಕ್ರಿಯಿಸಿ, ಜಾಗತಿಕವಾಗಿ ವೈವಿಧ್ಯ ವಿಚಾರ ಪ್ರಸೆಂಟ್ ಮಾಡಲು ನಾನು ಹಾಗೂ ಪ್ರಿಯಾಂಕ ಕಾತುರರಾಗಿದ್ದೇವೆ. ಪ್ರಿಯಾಂಕ ಜಾಗತಿಕವಾಗಿ ಪ್ರತಿಧ್ವನಿಸಬಲ್ಲ ಕಂಟೆಂಟ್‌ಗತ್ತ ಗಮನ ನೀಡಲಿದ್ದಾರೆ. ಆಕೆಯೊಂದಿಗೆ ಕೆಲಸ ಮಾಡುವುದಕ್ಕೆ ಉತ್ಸುಕರಗಿದ್ದೇವೆ ಎಂದಿದ್ದಾರೆ.
ಪತಿಯ ಬೆಡ್‌ರೂಂ ಪೇಚು ಬಿಚ್ಚಿಟ್ಟ ಪಿಗ್ಗಿ: ಇಲ್ಲಿವೆ ಫೋಟೋಸ್
ಈಗಾಗಲೇ ಪ್ರಿಯಾಂಕ ಅವರು ಎರಡು ಅಮೆಜಾನ್ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಂಗೀತ್ ಎನ್ನುವ ಡ್ಯನ್ಸ್ ರಿಯಾಲಿಟಿ ಶೋವನ್ನು ಪತಿ ನಿಕ್ ಜೊತೆ ನಿರ್ಮಿಸುತ್ತಿದ್ದು, ಇದು ಅವರದೇ ವಿವಾಹ ಸಮಾರಂಭದ ಸಂಗೀತ ಕಾರ್ಯಕ್ರಮದಿಂದ ಪ್ರೇರೇಪಿತವಾಗಿದೆ. ವಧು ಹಾಗೂ ವರನ ಕುಟುಂಬಸ್ಥರು ವೆಡ್ಡಿಂಗ್ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತಾರೆ.
ಇನ್ನೊಂದು ಆಂಥನಿ & ಜಾಯ್ ರುಸ್ಸೋನ ಚಿಟೆಡಲ್ ಎಂಬ ಪತ್ತೇದಾರಿ ಸಿರೀಸ್ ಆಗಿದೆ. ಇದರಲ್ಲಿ ಪ್ರಿಯಾಂಕ ಗೇಮ್ ಆಫ್ ತ್ರೋನ್ಸ್ ಹಾಗೂ ಬಾಡಿಗಾರ್ಡ್‌ನ ರಿಚಾರ್ಡ್ ಮೆಡನ್ ಜೊತೆ ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾ ಸಂಶೋಧನೆ, ಪ್ರಿಯಾಂಕಾ ಹಳೆ ಅವತಾರ ಜಗಜ್ಜಾಹೀರು!
ಇದು ಜಾಗತಿಕ ಡೀಲ್ ಆಗಿರುವುದರಿಂದ ಪ್ರಿಯಾಂಕ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿಯೂ ಕಂಟೆಂಟ್ ಮಾಡಬೇಕಾಗುತ್ತದೆ. ಸ್ತ್ರೀ ಸಂಬಂಧಿ ಕಥೆಗಳನ್ನು ಹೇಳಬೇಕೆಂಬ ಕನಸಿದೆ. ಜಗತ್ತನ್ನು ಸುಲಭವಾಗಿ ತಲುಪಲು ಅಮೆಜಾನ್ ಉತ್ತಮ ವೇದಿಕೆ. ನಾನು ಮಾಡಿರುವ ಡೀಲ್ ಜಾಗತಿಕ ಡೀಲ್, ಹಾಗಾಗಿ ನಾನು ಹಿಂದಿ, ಇಂಗ್ಲಿಷ್ ಯಾವ ಭಾಷೆಯಲ್ಲಿ ಬೇಕಾದರೂ ಕಂಟೆಂಟ್ ತಯಾರಿಸಬಹುದು ಎಂದಿದ್ದಾರೆ.