- Home
- Entertainment
- Sandalwood
- ಸ್ಪೆಷಲ್ ಡೇಟ್ ಮಿಸ್ ಮಾಡ್ಕೊಂಡ ಶ್ರೀಮುರಳಿ…. ಪತ್ನಿಗಾಗಿ ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಆದ ನಟ
ಸ್ಪೆಷಲ್ ಡೇಟ್ ಮಿಸ್ ಮಾಡ್ಕೊಂಡ ಶ್ರೀಮುರಳಿ…. ಪತ್ನಿಗಾಗಿ ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಆದ ನಟ
SriMurali-Vidya Love : ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಪತ್ನಿ ವಿದ್ಯಾ ಪ್ರೀತಿಗೆ 26ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಜೋಡಿ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದು, ಪತ್ನಿಗಾಗಿ ಸ್ಟಾರ್ ನಟ ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಆಗಿ ಕೂಡ ಬದಲಾಗಿದ್ದಾರೆ.

ಶ್ರೀಮುರಳಿ ಲವ್ ಸ್ಟೋರಿ
ಸ್ಯಾಂಡಲ್’ವುಡ್ ಸ್ಟಾರ್ ನಟ ಶ್ರೀಮುರಳಿ ಅವರ ಲವ್ ಸ್ಟೋರಿ ಹೆಚ್ಚಿನ ಕನ್ನಡಿಗರಿಗೆ ಗೊತ್ತೇ ಇದೆ. ಇದೀಗ ಶ್ರೀಮುರಳಿ -ವಿದ್ಯಾ ಪ್ರೀತಿಗೆ 26ವರ್ಷ ತುಂಬಿದ ಸಂಭ್ರಮದಲ್ಲಿದ್ದಾರೆ. ಹಾಗಾಗಿ ಜೋಡಿ ಮುದ್ದಾದ ಫೋಟೊಗಳನ್ನು ಶೇರ್ ಮಾಡಿ ಪರಸ್ಪರ ವಿಶ್ ಮಾಡಿದ್ದಾರೆ.
ವಿದ್ಯಾ ಪೋಸ್ಟ್ ಹೀಗಿದೆ
ಇಬ್ಬರ ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ ವಿದ್ಯಾ ಶ್ರೀಮುರಳಿ 26 years in... Still Spoiled, Still Pampered, Still Winning... Consistency is Key. ಹ್ಯಾಪಿ 26 ಕಂದ ಎಂದು ವಿಶ್ ಮಾಡಿದ್ದಾರೆ.
ಶ್ರೀಮುರಳಿ ಪೋಸ್ಟ್ ವಿಶೇಷವಾಗಿತ್ತು
ಅಂದ ಹಾಗೇ ಶ್ರೀಮುರಳಿ ಮತ್ತು ವಿದ್ಯಾ ಅವರ ಪ್ರಪೋಸ್ ಆನಿವರ್ಸರಿ 30 ಡಿಸೆಂಬರ್. ಆದರೆ ಆ ದಿನ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದುದರಿಂದ ಶ್ರೀಮುರಳಿಗೆ ಪತ್ನಿ ಜೊತೆ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಇದೀಗ ಪತ್ನಿ ನೀಡಿದ ಮುದ್ದಾದ ಪನಿಶ್ಮೆಂಟ್ ಅನುಭವಿಸಿದ್ದಾರೆ ನಟ.
ಏನು ಹೇಳಿದ್ರು ಶ್ರೀಮುರಳಿ
ನೆನ್ನೆ ಶೂಟಿಂಗ್ ಲೇಟ್ ಆಯ್ತು,ನಮ್ಮ 26th ಪ್ರಪೋಸಲ್ ಆನಿವರ್ಸರಿ ಡಿನ್ನರ್ ಡೇಟ್ ಮಿಸ್ ಆಯ್ತು, ನನ್ನ ಸಾರಿ ಕ್ರಿಯೇಟಿವ್ ಆಯ್ತು. ನಾನು ಒಂದೇ ದಿನದಲ್ಲಿ ಫ್ಲೋರಿಸ್ಟ್, ಸ್ಪಾ ಥೆರಪಿಸ್ಟ್, ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಎಲ್ಲಾನೂ ಆದೆ ಎಂದು ಶ್ರೀಮುರಳಿ ಬರೆದುಕೊಂಡಿದ್ದಾರೆ.
ಮುದ್ದಾದ ಆನಿವರ್ಸರಿ ನೋಟ್
ಜೊತೆಯಾಗಿ 26 ವರ್ಷಗಳು ಕಳೆದಿದೆ. ನಾನು ಒಂದೋ ಅಥವಾ ಎರಡೋ ಡಿನ್ನರ್ ಡೇಟ್ ಮಿಸ್ ಮಾಡಿಕೊಂಡಿರಬಹುದು. ಆದರೆ ಯಾವತ್ತೂ ನನ್ನ ಫಾರೆವರ್ ಸಂಗಾತಿಯನ್ನು ಮುದ್ದು ಮಾಡೋದನ್ನು ಮಾತ್ರ ಮಿಸ್ ಮಾಡಿಲ್ಲ ಎಂದು ಬರೆದುಕೊಂಡಿದ್ದಾರೆ.
ವಿದ್ಯಾ ಶ್ರೀಮುರಳಿ ಲವ್ ಸ್ಟೋರಿ
ಶ್ರೀಮುರಳಿ ಶ್ರೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮೊದಲನೇ ದಿನವೇ , ವಿದ್ಯಾ ಮೆಟ್ಟಿಲು ಇಳಿದು ಬರುವುದನ್ನು ಕಂಡು ಅಲ್ಲೇ ಲವ್ ಅಟ್ ಫರ್ಸ್ಟ್ ಸೈಟ್ ಆಯ್ತಂತೆ! ವಿದ್ಯಾ ನೋಡಿದಾಕ್ಷಣ 'ಮದುವೆ ಆದ್ರೆ ಇವಳನ್ನೇ ಆಗಬೇಕು' ಎಂದು ಸ್ನೇಹಿತರಿಗೆ ಹೇಳಿದರಂತೆ.
ಪ್ರಪೋಸ್ ಮಾಡಿದ್ದು ಹೀಗೆ
1999 ಡಿಸೆಂಬರ್ 30 ರಂದು 'ನಾನು ನಿನ್ನ ಲವ್ ಮಾಡ್ತಿದೀನಿ. ನಿನ್ನ ಮದ್ವೆ ಮಾಡಿಕೊಳ್ಳುತ್ತೇನೆ. ಹೊಸ ವರ್ಷ ಶುರುವಾಗೋಕೆ ಇನ್ನೂ ಸಮಯ ಇದೆ. ನಾನು ಮನೆಗೆ ಹೋಗಿ ಕಾಲ್ ಮಾಡ್ತೀನಿ ನೀನು ಪಿಕ್ ಮಾಡಿದ್ರೆ ನಿನ್ನ ಒಪ್ಪಿಗೆ ಇದೆ' ಎಂದು ಅರ್ಥ ಮಾಡಿಕೊಳ್ಳುತ್ತೀನಿ ಎಂದು ಹೇಳಿ ಹೊರಟರಂತೆ! ಅದರಂತೆ ವಿದ್ಯಾ ಕಾಲ್ ರಿಸೀವ್ ಮಾಡಿದ್ರು, ಲವ್ ಸ್ಟೋರಿ ಶುರುವಾಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

