ಬಾಲಿವುಡ್‌ನ 'ಧುರಂಧರ್ 2' ಸಿನಿಮಾ 1000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಕಥೆ ಪಾಕಿಸ್ತಾನದ ಲೈಯಾರಿ ಎಂಬ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದ್ದು, ಇದೀಗ ಅಲ್ಲಿನ ಜನ ತಮ್ಮೂರಿನ ಅಭಿವೃದ್ಧಿಗೆ ಲಾಭದಲ್ಲಿ ಪಾಲು ಕೇಳುತ್ತಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಬಾಲಿವುಡ್ ಸಿನಿಮಾ 'ಧುರಂಧರ್', ವಿಶ್ವಾದ್ಯಂತ ಬರೋಬ್ಬರಿ 1400 ಕೋಟಿ ರೂಪಾಯಿ ಬಾಚಿತ್ತು. ಈಗ, ಕೇವಲ ಮೂರು ತಿಂಗಳ ಅಂತರದಲ್ಲಿ ಅದರ ಸೀಕ್ವೆಲ್ ಕೂಡ ರಿಲೀಸ್ ಆಗಿದೆ. ಬಹುಶಃ ಭಾರತೀಯ ಚಿತ್ರರಂಗದಲ್ಲಿ ಇಷ್ಟು ಬೇಗ ಸೀಕ್ವೆಲ್ ಬಂದಿದ್ದು ಇದೇ ಮೊದಲಿರಬೇಕು. 'ಧುರಂಧರ್: ದಿ ರಿವೆಂಜ್' ಅಂತ ಹೆಸರಿಟ್ಟಿರೋ ಈ ಎರಡನೇ ಭಾಗ, ಮೊದಲ ಭಾಗಕ್ಕಿಂತಲೂ ದೊಡ್ಡ ಹಿಟ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಡುಗಡೆಯಾದ ಒಂದೇ ವಾರದಲ್ಲಿ ಜಾಗತಿಕವಾಗಿ 1000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಪಾಕಿಸ್ತಾನದ ಲೈಯಾರಿ ನಿವಾಸಿಗಳು ಒಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ. 'ಧುರಂಧರ್' ಸಿನಿಮಾದ ಎರಡೂ ಭಾಗಗಳ ಕಥೆ ನಡೆಯೋದು ಕರಾಚಿ ಸಮೀಪದ ಲೈಯಾರಿ ಅನ್ನೋ ಪ್ರದೇಶದಲ್ಲಿ. ಆದರೆ, ಚಿತ್ರತಂಡ ಅಲ್ಲಿ ಶೂಟಿಂಗ್ ಮಾಡಿಲ್ಲ, ಬದಲಾಗಿ ಬೇರೆ ಕಡೆ ಸೆಟ್ ಹಾಕಿ ಲೈಯಾರಿಯನ್ನು ಮರುಸೃಷ್ಟಿಸಿದೆ.

ಈಗ ಅಲ್ಲಿನ ಜನ, 'ನಮ್ಮೂರಿನ ಹೆಸರಲ್ಲಿ ಸಿನಿಮಾ ಮಾಡಿ ಸಾವಿರಾರು ಕೋಟಿ ಗಳಿಸಿದ್ದೀರಿ, ಅದರಲ್ಲಿ ನಮಗೂ ಪಾಲು ಕೊಡಿ' ಅಂತಿದ್ದಾರೆ. ತಮ್ಮ ಪ್ರದೇಶದಲ್ಲಿ ರಸ್ತೆಯಂತಹ ಮೂಲಸೌಕರ್ಯಗಳೇ ಇಲ್ಲ, ಆ ಹಣ ಸಿಕ್ಕರೆ ಅಭಿವೃದ್ಧಿ ಮಾಡಬಹುದು ಎಂಬುದು ಅವರ ವಾದ. 'ಕಂಪ್ಯಾರಿಸನ್ ಟಿವಿ' ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಲೈಯಾರಿ ನಿವಾಸಿಗಳು ನೀಡಿರುವ ಈ ಹೇಳಿಕೆಗಳು, ಈಗ ಭಾರತದಲ್ಲೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Scroll to load tweet…

"ಈ ಸಿನಿಮಾ ಲೈಯಾರಿ ಬಗ್ಗೆ ಇದೆ. ಇದೊಂದು ವಿಐಪಿ ಸಿನಿಮಾ. ತುಂಬಾ ದುಡ್ಡು ಮಾಡಿದೆ. ಈ ರಸ್ತೆಗಳನ್ನು ಸರಿ ಮಾಡಿದರೆ, ನಮ್ಮ ಏರಿಯಾ ತುಂಬಾ ಡೆವಲಪ್ ಆಗುತ್ತೆ," ಎಂದು ವಿಡಿಯೋದಲ್ಲಿ ಒಬ್ಬರು ಹೇಳಿದ್ದಾರೆ. "ನೀವು 1000 ಕೋಟಿ ಗಳಿಸಿದ್ದರೆ, ದಯವಿಟ್ಟು ಅದರಲ್ಲಿ 500 ಕೋಟಿಯನ್ನು ಲೈಯಾರಿ ಜನರಿಗೆ ಕೊಡಿ. ನೀವು ಕೊಟ್ಟ ಅರ್ಧ ಹಣದಲ್ಲಿ ಈ ರಸ್ತೆಗಳನ್ನು ಚೆನ್ನಾಗಿ ಕಟ್ಟಬಹುದು. ಮಕ್ಕಳು ಸೇಫ್ ಆಗಿ ಓಡಾಡಬಹುದು," ಎಂದು ಮತ್ತೊಬ್ಬರು ಮನವಿ ಮಾಡಿದ್ದಾರೆ.

ದಯವಿಟ್ಟು ಏನಾದ್ರೂ ಕೊಡಿ

"ನಮ್ಮ ಏರಿಯಾ ಡೆವಲಪ್‌ಮೆಂಟ್ ಬಗ್ಗೆ ನಾವು ತುಂಬಾ ದಿನಗಳಿಂದ ಕೇಳ್ತಾನೇ ಇದ್ದೀವಿ. ಆದರೆ ಲೈಯಾರಿ ಜನರಿಗೆ ಏನೂ ಸಿಗ್ತಿಲ್ಲ. ದಯವಿಟ್ಟು ಏನಾದ್ರೂ ಕೊಡಿ," ಎಂಬುದು ಇನ್ನೊಬ್ಬರ ಅಳಲು. 'ಧುರಂಧರ್ 2' ಗಳಿಕೆಯಲ್ಲಿ ಎಷ್ಟು ಪಾಲು ಬೇಕು ಎಂದು ಕೇಳಿದಾಗ, ಮತ್ತೊಬ್ಬ ಸ್ಥಳೀಯರು "70-80% ಬೇಕು" ಎಂದು ಉತ್ತರಿಸಿದ್ದಾರೆ. ಸದ್ಯ, 'ಧುರಂಧರ್ 2' ಸಿನಿಮಾ 1000 ಕೋಟಿ ಕ್ಲಬ್ ಸೇರಿದ ಮೇಲೂ, ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಮುಂದುವರಿಸಿದೆ.