ಯಶ್ ಕರ್ನಾಟಕದ ಹೆಮ್ಮೆ, ಕನ್ನಡ ಸಿನಿಮಾ, ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲುತ್ತದೆ. ಇಡೀ ಜಗತ್ತು ಈಗ ಟಾಕ್ಸಿಕ್ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದೆ. 'ಯಶ್ ಆಡಿರುವ 'ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು' ಮಾತಿನ ಅರ್ಥವೇನು? ನೋಡಿ..
Yash Talk on Toxic Trailer Launch Venue- 'One must walk according to the times and dance to the rhythm' Inner Meaning to know here. ಟಾಕ್ಸಿಕ್ ಟ್ರೇಲರ್ ಲಾಂಚ್ ವೇದಿಕೆಯಲ್ಲಿ ನಟ ಯಶ್ ಆಡಿರುವ ಮಾತಿನ ಗೂಡಾರ್ಥವೇನು?
ನಿನ್ನೆ, ಅಂದರೆ 08 ಆಗಸ್ಟ್ 2026ರಂದು ಬಹುನಿರೀಕ್ಷೆಯ ಟಾಕ್ಸಿಕ್ ಟ್ರೇಲರ್ ಬಿಡುಗಡೆಯಾಗಿ ಜಗತ್ತಿನಾದ್ಯಂತ ಭಾರೀ ಹವಾ ಸೃಷ್ಟಿಸಿರುವುದು ಗೊತ್ತೇ ಇದೆ. ನಿನ್ನೆ ಬೆಂಗಳೂರಿನ ಕಪಾಲಿ ಮಾಲ್‌ನ ಎಎಂಬಿ ಸಿನಿಮಾಸ್ ಹಾಲ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ, ನಟ ಯಶ್ ಅವರು ವೇದಿಕೆಯ ಆಡಿರುವ ಮಾತುಗಳು ಅವರ ಅಪಾರ ಪ್ರಬುದ್ಧತೆಗೆ, ಬುದ್ದಿವಂತಿಕೆಗೆ ಸಾಕ್ಷಿ ಎನ್ನುವಂತಿವೆ. 'ಯಾರೂ ಸುಮ್ಮನೇ ಬೆಳೆಯಲ್ಲ' ಎನ್ನೋ ಮಾತಿಗೆ ಸಾಕ್ಷಿ ಕೊಟ್ಟಂತಿದೆ ಕನ್ನಡದ 'ಪ್ಯಾನ್ ವರ್ಲ್ಡ್' ಸ್ಟಾರ್ ನಟ ಯಶ್ ಅವರ ಮಾತುಗಳು!
ಯಶ್ ಅವರಲ್ಲಿ ಏನೋ ಅಪಾರವಾದ ಪ್ರತಿಭೆ, ಪರಿಶ್ರಮ ಪಡುವ ಗುಣದ ಜೊತೆಗೆ ಬುದ್ದಿವಂತಿಕೆ ಕೂಡ ಹೇರಳವಾಗಿದೆ ಎಂಬ ಮಾತು ಕೆಜಿಎಫ್ ಸಿನಿಮಾ ಬಳಿಕ ಎಲ್ಲೆಲ್ಲೂ ಕೇಳಿಬರುತ್ತಿತ್ತು. ನಿನ್ನೆ ಟಾಕ್ಸಿಕ್ ರಿಲೀಸ್ ವೇಳೆ ಯಶ್ ಅವರು ಆಡಿರುವ ಮಾತು ಅವರಲ್ಲಿರುವ ಬುದ್ಧಿವಂತಿಕೆಗೆ ಸಾಕ್ಷಿಯಾದವು. ವೇದಿಕೆಯ ಮೇಲೆ ನಟ ಯಶ್ ಸಾಕಷ್ಟು ಸಂಗತಿಗಳ ಬಗ್ಗೆ ಮಾತನ್ನಾಡಿದ್ದಾರೆ. ಆದರೆ, ಅವರಾಡಿರುವ ಕೆಲವೊಂದು ಮಾತುಗಳಿಗೆ ಗೂಡಾರ್ಥಗಳೂ ಇವೆ. ಆದರೆ, ಯಾವುದರಲ್ಲೂ ತಪ್ಪಿಲ್ಲ, ವಿವಾದಾತ್ಮಕ ಹೇಳಿಕೆಗಳು ಇಲ್ಲವೇ ಇಲ್ಲ. ಹಾಗಿದ್ದರೆ ಯಶ್ ಆಡಿರುವ ಅಂತಹ ಪ್ರಬುದ್ಧ ಮಾತುಗಳು ಯಾವವು? ಮುಂದೆ ನೋಡಿ...
ನನ್ನ ಸಕ್ಸಸ್ ಕರ್ನಾಟಕದ ಜನರು ನನಗೆ ಕೊಟ್ಟಿರುವ ಜವಾಬ್ದಾರಿ
'ನನ್ನ ಸಕ್ಸಸ್ ಕರ್ನಾಟಕದ ಜನರು ನನಗೆ ಕೊಟ್ಟಿರುವ ಜವಾಬ್ದಾರಿ. ಸಿನಿಮಾ ಉದ್ಯಮದಲ್ಲಿ ನನಗೆ ಕೆಲಸ ಮಾಡಲು ಜನತೆ ಕೊಟ್ಟಿರುವ ಅವಕಾಶ ಹಾಗೂ ಜವಾವ್ದಾರಿ ಇದು.. ನನ್ನ ಪ್ರತಿ ಸಿನಿಮಾ ಮೂಲಕ ನನ್ನ ಜನರು ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಕೊಡುತ್ತಾ ಬಂದಿದ್ದಾರೆ. ಪ್ರತಿ ಸಿನಿಮಾ ಗೆದ್ದಾಗಲೂ ಮುಂದೆ ಇನ್ನೂ ಹೆಚ್ಚಿನ ಕೆಲಸದ ಮೂಲಕ ನನ್ನನಬ್ನು ನೀವು ಗೌರವಿಸಿದ್ದೀರಿ.
ಈಗ ಬರಲಿರುವ ಸಿನಿಮಾ ಟಾಕ್ಸಿಕ್, ನೀವು ನನಗೆ ಕೊಟ್ಟ ಹಳೆಯ ಗೆಲವಿನ ಪ್ರತೀಕ.. ಇನ್ಮುಂದೆ ಈ ಸಿನಿಮಾ ಬಿಡುಗಡೆ ಆಗಲಿದೆ. 'ದಾರಿ ಯಾವುದಾದರೂ ಇರಲಿ, ಗುರಿ ಮುಟ್ಟಬೇಕು.. ಕೆಲವೊಮ್ಮೆ ನಮ್ಮ ದಾರಿಯಲ್ಲಿ ಹೋರಾಟಗಳು ಇರ್ತವೆ, ಹೋರಾಡಿಕೊಂಡು ಗುರಿ ಮುಟ್ಟಬೇಕು.. ಕೆಲವೊಮ್ಮೆ 'ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು' ಎಂದಿದ್ದಾರೆ ನಟ ಯಶ್.
ಹೌದು, 'ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು' ಎಂದು ಹೇಳಿರುವ ಯಶ್ ಮಾತಿನಲ್ಲಿ ಬಹಳಷ್ಟು ಪ್ರಬುದ್ಧತೆ ಹಾಗೂ ಬುದ್ದಿವಂತಿಕೆ ಜೊತೆಗೆ ಕೆಲವರ ಪಾಲಿಗೆ ಗೂಡಾರ್ಥವೂ ಇದೆ. ಕಾರಣ, ಎಲ್ಲವೂ ಎಲ್ಲರಿಗೂ ಅರ್ಥವಾಗಬೇಕಿಲ್ಲ, ಆಗುವುದೂ ಇಲ್ಲ. 'ಹಸಿದವರಿಗೆ ಊಟ ಕೊಡಬೇಕೇ ಹೊರತೂ ಹೊಟ್ಟೆ ತುಂಬಿದವರಿಗೆ ಅಲ್ಲ' ಎಂಬ ಮಾತಿನಂತೆ ಇದು.. ಹಸಿದವಿಗೆ ಕೊಟ್ಟ ಊಟಕ್ಕೆ ಮಾತ್ರ ಬೆಲೆ ಇರುತ್ತದೆಯೇ ಹೊರತೂ ಹೊಟ್ಟೆ ತುಂಬಿದವನಿಗೆ ಕೊಟ್ಟ ಊಟಕ್ಕೆ ಅಲ್ಲ. ಹೌದು, ಜಗತ್ತು ಏನನ್ನು ಬಯಸುತ್ತೋ ಅದನ್ನೇ ಟಾಕ್ಸಿಕ್ ಮೂಲಕ ಕೊಡಲು ಹೊರಟಿದ್ದಾರೆ ಯಶ್ & ಟೀಮ್!
'ಟಾಕ್ಸಿಕ್' ಸಿನಿಮಾ ಸದ್ಯ ಜಗತ್ತು ಕೇಳುತ್ತಿರುವ, ಬಯಸುತ್ತಿರುವ ಪ್ರಾಡಕ್ಟ್
ಆದ್ದರಿಂದ ಮುಂದೆ ಬರಲಿರುವ ಯಶ್ ನಟನೆ, ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಸದ್ಯ ಜಗತ್ತು ಕೇಳುತ್ತಿರುವ, ಬಯಸುತ್ತಿರುವ ಪ್ರಾಡಕ್ಟ್.. ಸಿನಿಮಾ ತೆರೆಗೆ ಬರುವ ಮೊದಲೇ ಅದರಲ್ಲಿ ಏನಿರಬಹುದು ಎಂದು ಯಾರೂ ತುಂಬಾನೇ ತಲೆಕೆಡಿಸಿಕೊಳ್ಳಬೇಕಿಲ್ಲ. ಸಿನಿಮಾ ಬಿಡುಗಡೆ ಬಳಿಕ ನೋಡಿದವರಿಗೇ ಅರ್ಥ ಆಗಿಬಿಡುತ್ತೆ- ಇದು ಸದ್ಯ ಜಗತ್ತು ಬಯಸುವ ಮನರಂಜನೆ ಹಾಗೂ ಜಗತ್ತಿನ ನಡೆಯುತ್ತಿರುವ ದಾರಿ ಎನ್ನುವ ಸಂಗತಿ! ಸೋ, ಸಿನಿಮಾ ತೆರೆಗೆ ಬರುವ ತನಕ ಕಾಯಬೇಕು, ಸಿನಿಮಾ ನೋಡಬೇಕು ಹಾಗೂ ಗೊತ್ತಿಲ್ಲದವರು ಜಗತ್ತು ಈಗ ಏನನ್ನು ಬಯಸುತ್ತಿದೆ ಎಂಬುದನ್ನು ತಿಳಿದುಕೊಂಡು ಲೈಫಲ್ಲಿ ಮುನ್ನಡೆಯಬೇಕು.
“ಇವತ್ತಿನ ಮನಸ್ಸುಗಳು, ಇವತ್ತಿನ ಯುವ ಪೀಳಿಗೆ, ಇವತ್ತಿನ ಗೊಂದಲಗಳು ಏನಿವೆ, ಆ ಎಲ್ಲಾ ಗೊಂದಲಗಳಿಗೆ ರೆಪ್ರೆಸೆಂಟೇಶನ್ ಆಗಿ ಈ ಸಿನಿಮಾ ನಿಮ್ಗೆ ಇರುತ್ತೆ.. ತುಂಬಾ ಡೀಪ್, ತುಂಬಾ ಅದ್ಭುತವಾದ, ಮನುಷ್ಯರಿಗೆ ಬೇಕಾದ ವಿಷಯ ಇರುವಂಥ ಒಂದು ಚಿತ್ರ ಆಗುತ್ತೆ.. ಕನ್ನಡಿಗರು ಹೆಮ್ಮೆಯಿಂದ ಹೇಳಬಹುದು- ಯಾವತ್ತೂ ತಲೆ ತಗ್ಗಿಸೋಕೆ ನಾವು ಬಿಡಲ್ಲ, ತಲೆ ಎತ್ತಿಕೊಂಡು ಓಡಾಡೋ ತರ ಇರುತ್ತೆ, ಹೆಮ್ಮೆಯಿಂದ ನೋಡಿ ಈ ಸಿನಿಮಾ..” ಎಂದಿದ್ದಾರೆ ನಟ ಯಶ್.
ಅಂದಹಾಗೆ, ಯಶ್ ಹೇಳಿರುವ 'ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು' ಈ ಮಾತು ನಿಮಗೆ ಅದೇನು ಅರ್ಥವಾಯ್ತು? ಕಾಮೆಂಟ್ ಮಾಡಿ ತಿಳಿಸಿ.. ಯಶ್ ಅವರು ಕರ್ನಾಟಕದ ಹೆಮ್ಮೆ, ಕನ್ನಡ ಸಿನಿಮಾ, ಕನ್ನಡನಾಡಿನ ಕೀರ್ತಿ ಪತಾಕೆಯನ್ನು ಇಡೀ ಜಗತ್ತಿಗೆ ಪಸರಿಸಿದ ಕೀರ್ತಿ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲುತ್ತದೆ. ಇಡೀ ಜಗತ್ತು ಈಗ ಟಾಕ್ಸಿಕ್ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದೆ. 'ಯಶ್ ಆಡಿರುವ 'ಕಾಲಕ್ಕೆ ತಕ್ಕಂತೆ ನಡಿಬೇಕು, ತಾಳಕ್ಕೆ ತಕ್ಕಂತೆ ಕುಣಿಬೇಕು' ಮಾತನ್ನು ನೀವು ಸರಿಯಾಗಿ ಅರ್ಥ ಮಾಡಿಕೊಂಡರೆ ನೀವು ಲೈಫಲ್ಲಿ ಉದ್ಧಾರ ಆಗ್ತೀರಾ' ಎನ್ನಬಹುದು. ನೀವೇನಂತೀರಾ?


