ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತೂ ಮೋಹನ್‌ದಾಸ್ ಅವರು ವೇದಿಕೆಯಲ್ಲಿಯೇ ಭಾವುಕರಾಗಿದ್ದಾರೆ. ನನ್ನನ್ನು ಯಾರೂ ನಂಬಲಿಲ್ಲ, ಆದರೆ ನೀವು ನಂಬಿಕೆ ಇಟ್ಟಿರಿ.. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ..' ಎಂದು ಕನ್ನಡದಲ್ಲೇ ಮಾತನ್ನಾಡಿದ್ದಾರೆ. ಇದು ಓಕೆ, ಅತ್ತಿದ್ದು ಏಕೆ? ಈ ಸ್ಟೋರಿ ನೋಡಿ..

Toxic Fairy Tale for Grown-Ups Movie- Toxic Trailer Launch: ಟಾಕ್ಸಿಕ್ ಟ್ರೇಲರ್ ಲಾಂಚ್ ಈವೆಂಟ್:

ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್‌ ಲಾಂಚ್ ಈವೆಂಟ್‌ ಇಂದು, 08 ಆಗಸ್ಟ್ 2026ರಂದು ಬೆಂಗಳೂರಿನಲ್ಲಿ ನಡೆದಿದೆ, ಈ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ನಟ ಶಿವರಾಜ್‌ಕುಮಾರ್ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. 'ಯಶ್ ನನ್ನ ತಮ್ಮ, ತುಂಬಾ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾರೆ' ಎಂದು ಹೇಳಿ ಖುಷಿ ವ್ಯಕ್ತಪಡಿಸಿದ್ದಾರೆ ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್.

ಟಾಕ್ಸಿಕ್ ಚಿತ್ರದ ನಿರ್ದೇಶಕಿ ಗೀತೂ ಮೋಹನ್‌ದಾಸ್ ಅವರು ವೇದಿಕೆಯಲ್ಲಿಯೇ ಭಾವುಕರಾಗಿದ್ದಾರೆ. ನನ್ನನ್ನು ಯಾರೂ ನಂಬಲಿಲ್ಲ, ಆದರೆ ನೀವು ನಂಬಿಕೆ ಇಟ್ಟಿರಿ.. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ..' ಎಂದು ಕನ್ನಡದಲ್ಲೇ ಮಾತನ್ನಾಡಿದ್ದಾರೆ.

ಇನ್ನು, ಈ ಟ್ರೇಲರ್‌ ಈವೆಂಟ್‌ನಲ್ಲಿ ಟಾಕ್ಸಿಕ್ ಚಿತ್ರದ ನಾಯಕಿಯಾದ ರುಕ್ಮಿಣಿ ವಸಂತ್, ನಯನತಾರಾ, ಕಿಯಾರಾ ಅಡ್ವಾನಿ ಮಾತನ್ನಾಡಿದ್ದಾರೆ.

ರುಕ್ಮಿಣಿ ವಸಂತ್- 'ಇವತ್ತಿಂದ ಟಾಕ್ಸಿಕ್ ಸಿನಿಮಾದ ಪ್ರಚಾರ ಶುರುವಾಗ್ತಿದೆ.. ಯಶ್ ಅವರ ಬಗ್ಗೆ ಹೇಳೋದಕ್ಕೆ ಸಾಕಷ್ಟಿದೆ.. ನಾನು ಫ್ಯಾನ್ ಗರ್ಲ್ ಆಗಿ ಸಿನಿಮಾ ಸೆಟ್ಗೆ ಕಾಲಿಟ್ಟಿದ್ದೆ.. ಅವರಿಂದ ಸಾಕಷ್ಟು ಕಲಿತಿದ್ದೀನಿ..' ಎಂದಿದ್ದಾರೆ.

ಕಿಯಾರಾ ಅಡ್ವಾಣಿ:-

'ಈ ಸಿನಿಮಾದಲ್ಲಿ ಬರೋಕೆ ಯಶ್, ಗೀತು ಮ್ಯಾನಿಫೆಸ್ಟ್ ಮಾಡಿದ್ರು ಅನ್ನಿಸುತ್ತೆ.. ಮುಂದೆ ಟಾಕ್ಸಿಕ್ ಹಿಂದಿನ ಕಿಯಾರಾ.. ಟಾಕ್ಸಿಕ್ ನಂತರದ ಕಿಯಾರಾ ಅಂತಾ ಆಗುತ್ತೆ.. ಪ್ರತಿ ಕಲಾವಿದರನ್ನು ನೋಡೋಕೆ ಖುಷಿ ಆಗುತ್ತೆ..' ಎಂದಿದ್ದಾರೆ.

ನಯನತಾರಾ:-

ಟಾಕ್ಸಿಕ್ ಸ್ಪೆಷಲ್ ಸಿನಿಮಾ.. ಯಶ್ಗಾಗಿ ನಾನು ಇಲ್ಲಿ ತನಕ ಬಂದಿದ್ದೀನಿ.. ನಾನು ಸಾಮಾನ್ಯವಾಗಿ ಸಿನಿಮಾ ಪ್ರಮೋಷನ್ಗಾಗಿ ಬರಲ್ಲ.. ಯಶ್ ಸಲುವಾಗಿ ಬಂದಿದ್ದೀನಿ.. ಎಲ್ಲರನ್ನೂ ಒಟ್ಟಾಗಿ ತಂದಿರೋದಕ್ಕೆ ಧನ್ಯವಾದ ಯಶ್.. ಕಿಯಾರಾ, ನಿಮ್ಮ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಆಗುತ್ತೆ.. ರುಕ್ಮಿಣಿ ನಿಮ್ಮ ಜರ್ನಿಯನ್ನು ನೋಡಿದ್ದೀನಿ..‌ ಒಳ್ಳೆಯ ಪಾತ್ರಗಳನ್ನ ಮಾಡ್ತಿದ್ದೀರಿ‌.. ಹುಮಾ ಜೊತೆ ಸಾಕಷ್ಟು ದೃಶ್ಯಗಳಿವೆ..

ನಾನು- ಗೀತೂ ಕಲಾವಿದೆಯರಾಗಿ ಒಟ್ಟಿಗೆ ಕೆಲಸ ಮಾಡಿದ್ದೀವಿ, 20 ವರ್ಷಗಳ ಹಿಂದೆ.. ಗೀತು ಟಾಕ್ಸಿಕ್ ಸಿನಿಮಾಗಾಗಿ ಕರೆ ಮಾಡಿದಾಗ ಶಾಕ್ ಆಯ್ತು.. ನಾನು ಮೊದಲು ಸಿನಿಮಾ ಮಾಡಲ್ಲ ಅಂದಿದ್ದೆ.. ಇದು ಟ್ರೈಲರ್ ಅಷ್ಟೇ.. ಸಿನಿಮಾ ನೋಡಿದ್ರೆ ನೀವು ಕಳೆದು ಹೋಗ್ತೀರ.. ಒಬ್ಬ ಮಹಿಳೆಯಾಗಿ ಗೀತು ಎಲ್ಲಾ ಸಮಸ್ಯೆಗಳಲ್ಲೂ ಜೊತೆಯಾಗಿ ನಿಂತಿದ್ರು...

ರಾಕಿ ಭಾಯ್... ಯಶ್‌ ಅವರನ್ನ ಮೊದಲ ಬಾರಿ ಭೇಟಿ ಆದಾಗ, ಅವರ ಆಸೆ, ಕನಸುಗಳು ಆಶ್ಚರ್ಯ ಅನ್ನಿಸಿತ್ತು.. ಯಶ್ ಅಷ್ಟು ಹಾರ್ಡ್ ವರ್ಕಿಂಗ್ ನಟನ ನಾನು ನೋಡಿಲ್ಲ.. ನಾನು ಸಾಕಷ್ಟು ಹೀರೋಗಳ ಜೊತೆ ನಟಿಸಿದ್ದೀನಿ.. ನಾಲ್ಕುವರೆ ವರ್ಷಗಳಿಂದ ಎಲ್ಲಾ ತ್ಯಾಗ ಮಾಡಿದ್ದಾರೆ.. ಯಶ್ ಅವರ ಕೆಲಸದ ಮೇಲೆ ಮಾತ್ರ ಫೋಕಸ್ ಮಾಡ್ತಾರೆ... ಯಶ್ ನಿಮ್ಮ ಮೇಲೆ ಪ್ರೀತಿ ಮತ್ತು ಗೌರವ ಎರಡೂ ಇದೆ‌...

ಯಶ್ ನೀವು ಅದ್ಭುತ ವ್ಯಕ್ತಿತ್ವವಿರೋ ನಟ.. ರಾಧಿಕಾ ಯಶ್ ಅವರ ದೊಡ್ಡ ಶಕ್ತಿ..' ಎಂದಿದ್ದಾರೆ ನಟಿ ನಯನತಾರಾ.