ಪ್ರಿಯಾಂಕಾ ಕುಟುಂಬ ಭೇಟಿಗೆ ಮುಂಬೈಗೆ ಬಂದ ನಿಕ್ ಪೋಷಕರು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 18, Aug 2018, 1:23 PM IST
Nick johnas parents visits Priyanka chopra family member before engagment
Highlights

ಪ್ರಿಯಾಂಕಾ ಕುಟುಂಬ ಸದಸ್ಯರನ್ನು ಭೇಟಿಯಾಗುವ ನಿಟ್ಟಿನಲ್ಲಿ ನಿಕ್‌ರ ತಂದೆ ಮತ್ತು ತಾಯಿ ಶುಕ್ರವಾರ ಮುಂಬೈಗೆ ಬಂದಿಳಿದಿದ್ದಾರೆ.

ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಶೀಘ್ರವೇ ತಮ್ಮ ಅಮೆರಿಕ ಮೂಲದ ಗೆಳೆಯ ನಿಕ್‌ ಜಾನ್ಸ್‌ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ, ಉಭಯ ಕುಟುಂಬಗಳ ಮಿಲನಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಿಯಾಂಕಾ ಕುಟುಂಬ ಸದಸ್ಯರನ್ನು ಭೇಟಿಯಾಗುವ ನಿಟ್ಟಿನಲ್ಲಿ ನಿಕ್‌ರ ತಂದೆ ಮತ್ತು ತಾಯಿ ಶುಕ್ರವಾರ ಮುಂಬೈಗೆ ಬಂದಿಳಿದಿದ್ದಾರೆ. ನಗರದ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ನಿಕ್‌ ಪೋಷಕರನ್ನು ಪ್ರಿಯಾಂಕಾ ಚೋಪ್ರಾ ಬರಮಾಡಿಕೊಂಡಿದ್ದು, ನಿಕ್‌ ಸಹೋದರರೂ ಆಗಮಿಸಿದ್ದಾರೆ. ನಿಕ್‌ ಇತ್ತೀಚೆಗೆ ಜುಲೈನಲ್ಲಿ ಪ್ರಿಯಾಂಕಾ ಕುಟುಂಬವನ್ನು ಗೋವಾದಲ್ಲಿ ಭೇಟಿಯಾಗಿ ಕೆಲ ಸಮಯವನ್ನು ಅವರೊಂದಿಗೆ ಕಳೆದಿದ್ದರು. ಬಳಿಕ ಇಬ್ಬರೂ ಲಂಡನ್‌ನಲ್ಲಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದೂ ವರದಿಯಾಗಿತ್ತು.

ಪ್ರಿಯಾಂಕ ಚೋಪ್ರಾ ಎಂಗೇಜ್‌ಮೆಂಟ್ ಉಂಗುರದ ಬೆಲೆ ಎಷ್ಟು ಗೊತ್ತಾ?

ಇದೇನಿದು...ಪಬ್ಲಿಕ್‌ನಲ್ಲೇ ಪ್ರಿಯಾಂಕಾ-ನಿಕ್ ಕಿಸ್ಸಿಂಗ್!?

loader