ಇದೇನಿದು...ಪಬ್ಲಿಕ್‌ನಲ್ಲೇ ಪ್ರಿಯಾಂಕಾ-ನಿಕ್ ಕಿಸ್ಸಿಂಗ್!?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Aug 2018, 9:15 PM IST
Bollywood Beauty Priyanka Chopra and Nick Jonas spotted getting cozy at a party in Singapore
Highlights

ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ತಮ್ಮ ಗೆಳೆಯ ಗಾಯಕ, ನಟ ನಿಕ್ ಜೊನಾಸ್ ಜೊತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವುದು ಹಳೆ ಸುದ್ದಿ. ಈಗ ಈ ರೋಮ್ಯಾಂಟಿಕ ಜೋಡಿ ಸಿಂಗಪುರ್ ನಲ್ಲಿ ಕೈ ಕೈ ಹಿಡಿದು ಅಡ್ಡಾಡುತ್ತಿದೆ.

ಸಿಂಗಪುರ್ ನ ರೆಸ್ಟೋರೆಂಟ್ ವೊಂದರಲ್ಲಿ ಜೋಡಿ ಕುಳಿತು ಒಬ್ಬರ ಕಿವಿಯಲ್ಲಿ ಒಬ್ಬರು ಏನೋ ಮಾತನಾಡುತ್ತಿರುವ ದೃಶ್ಯ ಸೆರೆಯಾಗಿದೆ. ದೂರದಿಂದ ನೋಡಿದರೆ ಇಬ್ಬರು ಕಿಸ್ ಮಾಡಿಕೊಳ್ಳುತ್ತಿದ್ದಾರೋ ಎಂಬ ಅನುಮಾನವೂ ಮೂಡದೇ ಇರದು.

ಇತ್ತೀಚೆಗಷ್ಟೇ 36ನೇ ವರ್ಷಕ್ಕೆ ಕಾಲಿಟ್ಟ ಪ್ರಿಯಾಂಕಾ ತನ್ನ ಗೆಳೆಯನ ಜೊತೆ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು.  2017 ರ ಅಂತ್ಯದಲ್ಲಿ ಅಮೆರಿಕದಲ್ಲಿ ಪರಿಚಯದವರ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಮತ್ತು ನಿಕ್ ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಅವರ ನಡುವೆ ಪ್ರೇಮಾಂಕುರವಾಗಿತ್ತು.

ಏರ್‌ಪೋರ್ಟ್‌ನಲ್ಲಿ ಖುಲ್ಲಂಖುಲ್ಲಾಗಿ ದೀಪಿಕಾ-ರಣವೀರ್ ಕಿಸ್!

ಬಳಿಕ ಇಬ್ಬರೂ ಹಲವು ಕಡೆಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು.  ಅಲ್ಲದೆ ಪ್ರಿಯಾಂಕಾ ಇತ್ತೀಚೆಗೆ ನಿಕ್‌ರನ್ನು ಮುಂಬೈಗೆ ಕರೆತಂದು ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಕೂಡಾ ಮಾಡಿಸಿದ್ದರು. 

 

 

loader