ನವದೆಹಲಿ (ಆ. 17): ಪ್ರಿಯಾಂಕ ಚೋಪ್ರಾ- ನಿಕ್ ಜೋನ್ಸ್ ನಿಶ್ಚಿತಾರ್ಥದ ಉಂಗುರವನ್ನು ರಿವೀಲ್ ಮಾಡಿದ್ದಾರೆ. ಪಿಗ್ಗಿ ಆತ್ಮೀಯ ಗೆಳತಿ ರವಿನಾ ಟಂಡನ್ ಜೊತೆ ಉಂಗುರದ ಸೆಲ್ಫಿ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಶೇರ್  ಮಾಡಿಕೊಂಡಿದ್ದಾರೆ. 

 

 

Peecee and I getting our pouts in order ! 😂 #potraitlighting💡 #shotoniphonex

A post shared by Raveena Tandon (@officialraveenatandon) on Aug 14, 2018 at 1:08pm PDT

ನಿಕ್ ಜೋನ್ಸ್ ದುಬಾರಿ ಬೆಲೆಯ ಉಂಗುರವನ್ನು ಪ್ರಿಯಾಂಕಗೆ ತೊಡಿಸಿದ್ದಾರೆ. ಉತ್ತಮ ಕುಶನ್ ಕಟ್ ಹೊಂದಿದ್ದು 4 ಕ್ಯಾರೇಟ್ ತೂಗುತ್ತದೆ. ಉಂಗುರದ ಬೆಲೆ 2.1 ಕೋಟಿ ಎನ್ನಲಾಗಿದೆ. 

ಪ್ರಿಯಾಂಕ- ಜೋನ್ಸ್ ನಿಶ್ಚಿತಾರ್ಥದ ಸುದ್ದಿಯನ್ನು ನಾಳೆ ಅಧಿಕೃತವಾಗಿ ಘೋಷಿಸಲಿದ್ದಾರೆ. ಕುಟುಂಬದ ಆಪ್ತರು, ಆತ್ಮೀಯ ಸ್ನೇಹಿತರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಎಲ್ಲಿ ನಡೆಯುತ್ತದೆ ಎಂಬುವ ಮಾಹಿತಿಯನ್ನು ಇನ್ನು ಹೊರಗೆಡವಿಲ್ಲ.