ಮೂರು ಸೀರಿಯಲ್ಗಳಲ್ಲಿ ಸುಳ್ಳುಗಳ ಮುಖವಾಡ ಕಳಚುವ ಹೊತ್ತು... ವಿಲನ್ಗಳು ವಿಲವಿಲ: ಇದೇನಿದು ಧಾರಾವಾಹಿಗಳಲ್ಲಿನ ಟ್ವಿಸ್ಟ್?
ಸೀತಾರಾಮ ಸೀರಿಯಲ್ ವೀಕ್ಷಕರಿಗೆ ತಿಳಿದಿರುವಂತೆ, ಸೀರಿಯಲ್ನ ಕ್ಲೈಮ್ಯಾಕ್ಸ್ ಭಾಗ ಶುರುವಾಗಿದೆ. ಇನ್ನೇನು ಭಾರ್ಗವಿಯ ಕಿತಾಪತಿ, ರಾಮ್ಗೆ ಗೊತ್ತಾಗುವುದು ಒಂದು ಬಾಕಿ ಇದೆ. ಸುಬ್ಬಿಗೆ ಇದಾಗಲೇ ಸಿಹಿಯಿಂದ ಎಲ್ಲಾ ಗೊತ್ತಾಗಿರುವ ಹಿನ್ನೆಲೆಯಲ್ಲಿ, ಅವಳೇ ಸತ್ಯ ಹೇಳುವ ಹಾಗಿದೆ. ಸಿಹಿ ತನಗೆ ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ವಿಷಯಗಳನ್ನು ಹೇಳಿದ್ದಾಳೆ ಎಂದು ಸುಬ್ಬಿ ಹೇಳಿದರೆ ಹಾಗೂ ಸುಬ್ಬಿಯೇ ಸೀತಾಳ ಮಗಳು ಎಂದು ಸುಬ್ಬಿಯನ್ನು ಸಾಕಿರುವ ತಾತ ಹೇಳಿದರೆ ಅಲ್ಲಿಗೆ ಕಥೆ ಮುಗಿಯಿತು. ಭಾರ್ಗವಿಯ ಎಲ್ಲಾ ವಿಷಯಗಳೂ ಅಶೋಕ್ಗೆ ಗೊತ್ತಿರುವ ಕಾರಣ, ಆತನೂ ವಿಷಯ ಹೇಳಿದರೆ ಅಲ್ಲಿಗೆ ಸೀರಿಯಲ್ ಮುಗಿಯತ್ತೆ. ಇದೀಗ ಸೀತಾಳಿಗೂ ವಾಣಿಯ ಸಾವಿನ ರಹಸ್ಯ ತಿಳಿದಿದೆ. ಅಲ್ಲಿ ಇರುವ ಫೋಟೋಗಳ ನೆಗೆಟಿವ್ ತೆಗೆದುಕೊಂಡು ಬಂದಿದ್ದಾಳೆ. ವಾಣಿಯನ್ನು ಕೊಲೆ ಮಾಡಿದ ಜಾಗದಲ್ಲಿ ಭಾರ್ಗವಿ ಇರುವುದು ತಿಳಿದಿದೆ. ಇದನ್ನು ಆಕೆ ರಾಮ್ಗೆ ಫೋನ್ನಲ್ಲಿ ಹೇಳಿಲ್ಲ, ಬದಲಿಗೆ ಆತನಿಗೆ ಕರೆ ಮಾಡಿ ವಿಷಯ ತಿಳಿಸಲು ಮುಂದಾಗಿದ್ದಾಳೆ.
ವಿಷಯ ತಿಳಿದರೆ ಭಾರ್ಗವಿಯ ಸುಳ್ಳುಗಳ ಮುಖವಾಡ ಕಳಚುತ್ತದೆ. ಅಷ್ಟಕ್ಕೂ ಈ ಸೀರಿಯಲ್ ಇನ್ನೂ ಸ್ವಲ್ಪ ದಿನ ಓಡುವ ಕಾರಣ, ಭಾರ್ಗವಿ ಸೀತಾಳ ಕಿಡ್ನ್ಯಾಪ್ ಮಾಡಿಸುತ್ತಾಳೆ. ಅಲ್ಲಿ ಕೊಲೆ ಮಾಡಲು ಸಂಚು ರೂಪಿಸುತ್ತಾಳೆ. ಮುಂದೇನಾಗುತ್ತದೆ ಎನ್ನುವುದು ಸೀರಿಯಲ್ ವೀಕ್ಷಕರು ಇದಾಗಲೇ ಊಹಿಸಿಕೊಂಡಿದ್ದಾರೆ ಬಿಡಿ. ಇದು ಸೀತಾರಾಮ ಸೀರಿಯಲ್ ಸ್ಟೋರಿಯಾದ್ರೆ, ಅದೇ ಇನ್ನೊಂದೆಡೆ ಅಮೃತಧಾರೆ ಸೀರಿಯಲ್. ಇಲ್ಲಿ ಈಗ ಶಾಕುಂತಲಾ ಮತ್ತು ಪಂಕಜಾ ಒಂದೇ ಎನ್ನುವುದು ಭೂಮಿಕಾಗೆ ತಿಳಿದಿದೆ. ವಿಷಯ ತಿಳಿದಿರುವ ಆನಂದ್ ಕೊಲೆಗೆ ಶಕುಂತಲಾ ಸಂಚು ರೂಪಿಸಿದ್ದಳು. ಆದರೆ ಆತ ಬದುಕಿಕೊಂಡಿದ್ದಾನೆ. ಗೌತಮ್ ಅವನ ಬಳಿ ಏನಾಯ್ತು ಎಂದು ಕೇಳಿದ್ದಾನೆ. ಅವನು ವಿಷಯ ಹೇಳುವ ಹಾಗಿದೆ. ಹಾಗೆ ಹೇಳಿದರೆ ಅಲ್ಲಿಗೆ ಶಕುಂತಲಾ ಕಥೆ ಮುಗಿದಂತೆ. ಆನಂದ್ಗೆ ಹೀಗೆ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದಿದ್ದಾನೆ ಗೌತಮ್. ಆದರೆ ಅದನ್ನು ಇನ್ನೆಷ್ಟು ಎಳೆಯುತ್ತಾರೋ ತಿಳಿದಿಲ್ಲ.
ಜೀ ಕನ್ನಡದ ಈ ಎರಡೂ ಸೀರಿಯಲ್ಗಳಲ್ಲಿ ವಿಲನ್ಗಳು ವಿಲವಿಲ ಎನ್ನುತ್ತಿದ್ದರೆ, ಕಲರ್ಸ್ ಕನ್ನಡದ ದೃಷ್ಟಿಬೊಟ್ಟು ಸೀರಿಯಲ್ನಲ್ಲಿಯೂ ಈಗ ಟ್ವಿಸ್ಟ್ ಬಂದಿದೆ. ದೃಷ್ಟಿಯನ್ನು ಶರಾವತಿ ಕಿಡ್ನ್ಯಾಪ್ ಮಾಡಿಸಿದ್ದಾಳೆ. ಆಕೆಯನ್ನು ಸಾಯಿಸಲು ಆರ್ಡರ್ ಮಾಡಿದ್ದಾಳೆ. ಆದರೆ ದೃಷ್ಟಿ ಬದುಕಿಕೊಂಡಿದ್ದಾಳೆ. ದೃಷ್ಟಿಯನ್ನು ಹುಡುಕಿ ದತ್ತಾಭಾಯಿ ಬಂದಿದ್ದಾನೆ. ಅಷ್ಟರಲ್ಲಿಯೇ ಶರಾವತಿ ಕಾಲ್ ಬಂದಿದೆ. ಅಲ್ಲಿ ಬಂದ ದನಿಯನ್ನು ದತ್ತಾ ಕೇಳುವ ರೀತಿಯ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಈ ಸೀರಿಯಲ್ ಇಷ್ಟು ಬೇಗ ಅಂತೂ ಮುಗಿಯದಿದ್ದರೂ ಇಷ್ಟು ಬೇಗನೇ ಶರಾವತಿಯ ಕಿತಾಪತಿ ಗೊತ್ತಾಗುವಂತೆ ಮಾಡಿರುವುದು ಅಚ್ಚರಿಯ ವಿಷಯವೇ. ಸದ್ಯ ಈ ಮೂರೂ ಸೀರಿಯಲ್ಗಳಲ್ಲಿ ವಿಲನ್ಗಳು ವಿಲವಿಲ ಎನ್ನುವಂತಾಗಿದೆ.
ಸೀತಾರಾಮ ಸೀರಿಯಲ್ ಮುಗಿಯುವುದು ಇದಾಗಲೇ ತಿಳಿದಿದೆ. ಇನ್ನೊಂದು ವಾರದಲ್ಲಿ ಇದು ಮುಗಿಯಲಿದೆ ಎಂದು ತಂಡವೇ ಘೋಷಣೆ ಮಾಡಿದೆ. ಆದರೆ ಅಮೃತಧಾರೆ ಮತ್ತು ದೃಷ್ಟಿಬೊಟ್ಟು ಸೀರಿಯಲ್ಗಳಲ್ಲಿ ಇನ್ನೂ ಹಲವು ವಿಷಯಗಳು ತಿಳಿಯುವುದು ಬಾಕಿ ಇರುವ ಹಿನ್ನೆಲೆಯಲ್ಲಿ ವಿಲನ್ಗಳ ಬಗ್ಗೆ ಹೀರೋಗಳಿಗೆ ಇಷ್ಟು ಬೇಗ ತಿಳಿಯುವಂತೆ ಮಾಡುವುದಿಲ್ಲ ಎನ್ನುವುದು ನಿಜವಾದರೂ, ಮುಂದೇನು ಎನ್ನುವುದು ವೀಕ್ಷಕರಿಗೆ ಕುತೂಹಲವಿದೆ. ಏನೇ ಆದರೂ ಬೇಗ ಬೇಗ ಸೀರಿಯಲ್ ಮುಗಿಸಲಿ ಎನ್ನುವುದೇ ಬಹುತೇಕ ವೀಕ್ಷಕರ ಅಭಿಮತ.
