ಬಾಲಿವುಡ್‌ನಲ್ಲಿ ಅಂದು ಘಟಾನುಗಟಿ ನಾಯಕಿಯರು ಇದ್ದರು. ಆದರೂ ಕೂಡ ನಟಿ ಲಕ್ಷ್ಮೀ ಅವರಿಗೆ ಹಿಂದಿ ಸಿನಿಮಾದ ಅವಕಾಶ ಮನೆಬಾಗಿಲಿಗೇ ಹುಡುಕಿಕೊಂಡು ಬಂದಿತ್ತು. ಜೂಲಿ ಸಿನಿಮಾದ ನಿರ್ಮಾಪಕರಾದ..

ಇಂದು ಹಿರಿಯ ನಟಿ ಎಂದು ಕರೆಯಲ್ಪಡುವ 'ಜೂಲಿ ಲಕ್ಷ್ಮೀ' (Julie Lakshmi) ಅವರನ್ನು ಹೆಚ್ಚಾಗಿ ಲಕ್ಷ್ಮೀ (Lakshmi) ಎಂದೇ ಕರೆಯಲಾಗುತ್ತದೆ. ಅವರನ್ನು ಇತ್ತೀಚೆಗೆ ಸಂದರ್ಶನ ಮಾಡಲಾಗಿದ್ದು. ಅವರು ಬಹಳಷ್ಟು ಸೀಕ್ರೆಟ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿದ್ದು ಜೂಲಿ ಚಿತ್ರದ ಬಗ್ಗೆ ನಟಿ ಲಕ್ಷ್ಮೀ ಹೇಳಿಕೊಂಡಿರುವ ವಿಷಯ. ಆಗ ನಟಿ ಲಕ್ಷ್ಮೀ ಅವರಿಗೆ ಇನ್ನೂ 22-23 ವಯಸ್ಸು. ಅಂಥ ಕಾಲದಲ್ಲಿ ಅವರಿಗೆ ಬಾಲಿವುಡ್ ಆಫರ್ ಬಂದಿದೆ. ಅಷ್ಟರಲ್ಲೇ ಅವರು ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ನಟಿಸಿ ಆಗಿತ್ತು, ಸಾಕಷ್ಟು ಫೇಮಸ್ ಕೂಡ ಆಗಿದ್ದರು. ಆದರೆ, ಅಂದು ಬಾಲಿವುಡ್ ಆಫರ್ ಬುರುವುದು ಎಂದರೆ ಅದೊಂದು ಅತೀ ಮುಖ್ಯವಾದ ಸಂಗತಿ ಆಗಿರುತ್ತಿತ್ತು.

ಬಾಲಿವುಡ್‌ನಲ್ಲಿ ಅಂದು ಘಟಾನುಗಟಿ ನಾಯಕಿಯರು ಇದ್ದರು. ಆದರೂ ಕೂಡ ನಟಿ ಲಕ್ಷ್ಮೀ ಅವರಿಗೆ ಹಿಂದಿ ಸಿನಿಮಾದ ಅವಕಾಶ ಮನೆಬಾಗಿಲಿಗೇ ಹುಡುಕಿಕೊಂಡು ಬಂದಿತ್ತು. ಜೂಲಿ ಸಿನಿಮಾದ ನಿರ್ಮಾಪಕರಾದ 'ಬಿ. ನಾಗಿ ರೆಡ್ಡಿ'ಯವರು ತಮ್ಮ ನಿರ್ಮಾಣದ ಚಿತ್ರಕ್ಕೆ ನಟಿ ಲಕ್ಷ್ಮೀಯವರೇ ಬೇಕೆಂದು ಪಟ್ಟುಹಿಡಿದಿದ್ದರು. ಹೈದ್ರಾಬಾದ್ ಮೂಲದ ನಾಗಿ ರೆಡ್ಡಿಯವರು ಅಂದು ಬಾಲಿವುಡ್‌ನಲ್ಲಿ ಖ್ಯಾತ ನಿರ್ಮಾಪಕರಾಗಿದ್ದರು. ಅವರು ಲಕ್ಷ್ಮೀ ಅವರನ್ನು ಕೇಳಿದಾಗ ಲಕ್ಷ್ಮೀ ತುಂಬಾ ಖುಷಿಯಿಂದ ಅವರ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ.

ನಿರ್ಮಾಪಕ ನಾಗಿ ರೆಡ್ಡಿಯವರು ಸಂಭಾವನೆ ಬಗ್ಗೆ ಕೇಳಿದಾಗ ನಟಿ ಲಕ್ಷ್ಮೀ ಅವರು 'ಅಯ್ಯೋ, ನಿಮ್ಮಂಥವರ ಚಿತ್ರದಲ್ಲಿ ನಟಿಸಲು ನಾನು ಸಂಭಾವನೆ ಡಿಮಾಂಡ್ ಮಾಡೋದಾ? ಸಾಧ್ಯವೇ ಇಲ್ಲ. ಅದೇನೂ ಬೇಡ, ಯಾವತ್ತು ಶೂಟಿಂಗ್ ಅಂತ ಹೇಳಿ ಸಾಕು' ಎಂದಿದ್ದರಂತೆ. ಆಗ ಸುಮ್ಮನಾಗಿದ್ದ ನಿರ್ಮಾಪಕರು ಬಳಿಕ, ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿಯುತ್ತಿದ್ದಂತೆ, ಕೊನೆ ದಿನ ಮನೆಗೆ ದೊಡ್ಡ ಬೆಳ್ಳಿ ಬಟ್ಟಲು ಸಮೇತ, ಅರಿಶಿನ-ಕುಂಕುಮದ ಬೆಳ್ಳಿ ತಟ್ಟೆಯೊಂದಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ಕೊಟ್ಟಿದ್ದರಂತೆ. 'ಅಷ್ಟು ದೊಡ್ಡ ಮೊತ್ತದ ಸಂಭಾವನೆಯನ್ನು ನಾನು ನಿರೀಕ್ಷಿಸಿರಲೇ ಇಲ್ಲ' ಎಂದಿದ್ದಾರೆ ನಟಿ ಲಕ್ಷ್ಮೀ.

ಲಕ್ಷ್ಮೀ ಅವರು ಜೂಲಿ ಚಿತ್ರಕ್ಕೆ ಪಡೆದ ಸಂಭಾವನೆಯನ್ನು ಬಹಿರಂಗ ಪಡಿಸಲಿಲ್ಲ. ಆದರೆ, ಬೆಳ್ಳಿ ಬಟ್ಟಲು, ತಟ್ಟೆಗಳೊಂದಿಗೆ ಬಂದ ಆ ಸಂಭಾವನೆ ಊಹೆಗೂ ನಿಲುಕದಷ್ಟು ಅಂತ ಹೇಳಿದ್ದಾರೆ. ಬಹುಶಃ 1975ರ ಕಾಲಕ್ಕೆ ಅದು ಅನೇಕ ಲಕ್ಷ ರೂಗಳಲ್ಲಿ ಇದ್ದಿರಬಹುದು. ಲಕ್ಷ್ಮೀ ನಟಿಸಿದ ಜೂಲಿ ಸಿನಿಮಾ ಅದೆಷ್ಟು ಸಕ್ಸಸ್ ಆಗಿತ್ತು ಎಂದರೆ, ಲಕ್ಷ್ಮೀ ಅವರ ಹೆಸರೇ ಆ ಚಿತ್ರದಿಂದ ಬದಲಾಗಿಯೋಯ್ತು. ಜೂಲಿ ಚಿತ್ರದ ಬಳಿಕ ತುಂಬಾ ಕಾಲ ಲಕ್ಷ್ಮೀ ಅವರನ್ನು 'ಜೂಲಿ ಲಕ್ಷ್ಮೀ' ಎಂದೇ ಕರೆಯುತ್ತಿದ್ದರು. ಆದರೆ, ನಿಧಾನಕ್ಕೆ ಆ ಹೆಸರು ಹೋಗಿ 'ಲಕ್ಷ್ಮೀ' ಎಂದಷ್ಟೇ ಉಳಿದುಕೊಂಡಿದೆ.