ಅವರಿಬ್ಬರ ಜೋಡಿಯ ಸಿನಿಮಾ ನೋಡಲು ಕೆಲವರು ಕಾದು ಕುಳಿತಿದ್ದಾರೆ. ಹಲವರು ಈ ಬಗ್ಗೆ ಕಾಮೆಂಟ್ ಮಾಡಿ, 'ನೀವಿಬ್ಬರೂ ಆದಷ್ಟು ಬೇಗ ಒಂದು ಪ್ಯಾನ್ ಇಂಡಿಯಾ ಅಥವಾ ಫ್ಯಾನ್ ವಲ್ಡ್ ಸಿನಿಮಾ ಮಾಡಿ' ಎಂದು ಕಾಮೆಂಟ್ ಹಾಕಿದ್ದರೆ, ಇನ್ನೂ ಕೆಲವರು 'ನಿಮ್ಮಿಬ್ಬರ ದಾರಿ ದೂರ ದೂರ' ಎಂದು ಕಾಮೆಂಟ್ ಮಾಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಈಗ ಹೊಸದಾಗಿ ಹೇಳುವುದಕ್ಕೇನೂ ಇಲ್ಲ. ಅಷ್ಟರಮಟ್ಟಿಗೆ ಅವರೀಗ ಇಡೀ ಇಂಡಿಯಾಗೇ ಫೇಮಸ್. ಯಾರೂ ಕೂಡ ನಟಿ ರಶ್ಮಿಕಾ ಮಂದಣ್ಣ ಗೊತ್ತಿಲ್ಲ ಅಂತ ಹೇಳೋ ಹಾಗೇ ಇಲ್ಲ. ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿ ಕರ್ನಾಟಕ ಕ್ರಶ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಈಗ 'ನ್ಯಾಷನಲ್ ಕ್ರಶ್' ಆಗಿ ಬದಲಾಗಿದ್ದಾರೆ. ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಬಳಿಕ ಬಾಲಿವುಡ್‌ನಲ್ಲಿ ಕೂಡ ನಟಿಸಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. 'ಪ್ಯಾನ್ ಇಂಡಿಯಾ ಸ್ಟಾರ್' ಅನ್ನೋದಕ್ಕಿಂತ 'ಇಂಡಿಯಾ ಫ್ಯಾನ್ ಸ್ಟಾರ್' ಎನ್ನುವುದೇ ಸೂಕ್ತವೇನೋ! ಅಷ್ಟರಮಟ್ಟಿಗೆ ರಶ್ಮಿಕಾ ಮಂದಣ್ಣ ಅವರು ಬೆಳದುನಿಂತಿದ್ದಾರೆ.
ಇನ್ನು, ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಬಗ್ಗೆ ಏನಂತ ಹೇಳೋದು? ಯಶ್ ಅವರು ಕೂಡ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಕನ್ನಡ ಸಿನಿಮಾಗಳ ಮೂಲಕ ನಟನೆಯನ್ನು ಆರಂಭಿಸಿದ ನಟ ಯಶ್, ಬಹುಭಾಷೆಯ 'ಕೆಜಿಎಫ್' ಸರಣಿ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನಟರಾಗಿ ಬೆಳೆದಿದ್ದಾರೆ. ಅಷ್ಟೇ ಅಲ್ಲ, ಇದೀಗ ಬಾಲಿವುಡ್‌ನ 'ರಾಮಾಯಣ' ಹಾಗೂ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ನಲ್ಲಿ ನಟಿಸುತ್ತಿದ್ದಾರೆ. ಇಂಥ ನಟ ಯಶ್ ಹಾಗೂ ಅಂಥ ನಟ ರಶ್ಮಿಕಾ ಜೋಡಿ ಇನ್ನೂ ಒಟ್ಟಿಗೇ ನಟಿಸಿಲ್ಲ.
ನಟಿ ರಶ್ಮಿಕಾ ಭಾಗಿಯಾಗಿದ್ದ ಸಂದರ್ಶನವೊಂದರಲ್ಲಿ ಅವರಿಗೆ ನಟ ಯಶ್ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿದೆ. ಯಶ್ ಜೊತೆ ನೀವು ನಟಿಸಲು ಇಷ್ಟಪಡುತ್ತೀರಾ ಎಂದು ಸಹ ಪ್ರಶ್ನೆ ಮಾಡಲಾಗಿದೆ. ಅದಕ್ಕೆ ಉತ್ತರಿಸಿರುವ ನಟಿ ರಶ್ಮಿಕಾ 'ಮೊಟ್ಟಮೊದಲು 'ಡೆಫಿನೆಟ್ಲೀ.. ' ಎಂದಿದ್ದಾರೆ. ಜೊತೆಗೆ, ಯಶ್ ಸರ್.. ಅದು ಅವರ ಪಕ್ಕಾ ಹಾರ್ಡ್‌ವರ್ಕ್.. ಅವರ ಕೆಲಸದಲ್ಲಿನ ಪರಿಶ್ರಮದ ಜೊತೆ ಡ್ರೀಮ್ ಕೂಡ ಇದೆ. ಅವರ ಡ್ರೀಮ್ ಸಪೋರ್ಟ್ ಮಾಡೋದೇ ನಮ್ಮ ಕೆಲಸ. ಲೆಟ್ ದೆಮ್ ಗೋ ಆಲ್‌ದ ವೇ ಅಂಡ್ ನಾನು ಸಪೋರ್ಟ್ ಮಾಡ್ತೀನಿ..' ಎಂದಿದ್ದಾರೆ ನಟಿ ರಶ್ಮಿಕಾ.
ಅವರಿಬ್ಬರ ಜೋಡಿಯ ಸಿನಿಮಾ ನೋಡಲು ಕೆಲವರು ಕಾದು ಕುಳಿತಿದ್ದಾರೆ. ಹಲವರು ಈ ಬಗ್ಗೆ ಕಾಮೆಂಟ್ ಮಾಡಿ, 'ನೀವಿಬ್ಬರೂ ಆದಷ್ಟು ಬೇಗ ಒಂದು ಪ್ಯಾನ್ ಇಂಡಿಯಾ ಅಥವಾ ಫ್ಯಾನ್ ವಲ್ಡ್ ಸಿನಿಮಾ ಮಾಡಿ' ಎಂದು ಕಾಮೆಂಟ್ ಹಾಕಿದ್ದರೆ, ಇನ್ನೂ ಕೆಲವರು 'ನಿಮ್ಮಿಬ್ಬರ ದಾರಿ ದೂರ ದೂರ' ಎಂಬ ಅರ್ಥದಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು, ಸೋಷಿಯಲ್ ಮೀಡಿಯಾ ಪಂಡಿತರು ನಟಿ ರಶ್ಮಿಕಾ ಮಂದಣ್ಣ ಅವರನ್ನು ಟೀಕಿಸಿ ಮೆಸೇಜ್ ಮಾಡಿದ್ದಾರೆ. ಅದೇನೇ ಆಗಿರಲಿ, ಈ ಇಬ್ಬರು ಕನ್ನಡ ನೆಲದಿಂದ ನಟನೆ ಶುರುಮಾಡಿ ಈಗ ನ್ಯಾಷನಲ್ ಲೆವಲ್‌ಗೆ ಬೆಳೆದು, ಜಾಗತಿಕ ಮಟ್ಟದಲ್ಲಿ ಸದ್ದು-ಸುದ್ದಿ ಮಾಡಿತ್ತಿರುವುದಂತೂ ಸುಳ್ಳಲ್ಲ.
