ನಟಿಸಲು ಆಫರ್ ಬಂದಾಗ ಭಯವಿತ್ತು! 

ಧಾರಾವಾಹಿಯಲ್ಲಿ ನಟಿಸಲು ಆಫರ್ ಬಂದಾಗ ಖುಷಿಯಾದರೂ ಒಳಗೊಳಗೆ ರಶ್ಮಿ ಅವರಿಗೆ ಭಯವಿತ್ತು. ಅದಕ್ಕೆ ಕಾರಣ ಇಷ್ಟೆ. ಏನೆಂದರೆ ಲಚ್ಚಿಯ ಪಾತ್ರ ಈಗಾಗಲೇ ಜನರ ಮನೆ ಮನ ಮುಟ್ಟಿದೆ. ಹೀಗಿರುವಾಗ ತನಗೆ ಆ ಪಾತ್ರ ನಿಭಾಯಿಸಲು ಸಾಧ್ಯವೇ, ತನ್ನನ್ನು ಜನ ಸ್ವೀಕರಿಸುತ್ತಾರಾ ಎಂಬ ಆಲೋಚನೆ ರಶ್ಮಿಯವರನ್ನು ಕಾಡಿತ್ತು. ಆದರೆ ಕೆಲವೇ ದಿನಗಳಲ್ಲಿ ಅವರ ಆತಂಕ ದೂರವಾಗಿದೆ. ಜನ ಅವರನ್ನು ಲಚ್ಚಿ ಎಂದು ಸ್ವೀಕರಿಸಿಯಾಗಿದೆ. ಕವಿತಾಗೆ ನೀಡಿದ ಸ್ಥಾನವನ್ನು ಜನ ರಶ್ಮಿಗೆ ನೀಡಿದ್ದಾರೆ. ಇದರಿಂದ ರಶ್ಮಿ ಅವರ ಆತಂಕ ದೂರವಾಗಿದೆ. 

ಪೋಟೋ ಕ್ರೇಜ್‌ನಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಮಂಗಳೂರು ಹುಡುಗಿ !

ಕಲಿತದ್ದು ಸಾಫ್ಟ್‌ವೇರ್, ಬಯಸಿದ್ದು ನ್ಯೂಸ್ ರೀಡರ್

ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಶ್ಮಿಗೆ ನ್ಯೂಸ್ ರೀಡರ್ ಆಗಬೇಕೆಂಬ ಬಯಕೆ. ಅಂತೆಯೇ ಚಾನೆಲ್ ಗೆ ಸೇರಿದ ಅವರು ಅಲ್ಲಿ ತುಂಬಾ ಸಮಯ ಇರಲಿಲ್ಲ. ಚಾನೆಲ್ ಬಿಡುವ ಸಮಯದಲ್ಲಿ ಶುಭವಿವಾಹ ಧಾರಾವಾಹಿಯಿಂದ ಆಫರ್ ಬಂತು. ಆಡಿಶನ್ ಕೊಟ್ಟ ರಶ್ಮಿ ಸೆಲೆಕ್ಟ್ ಆಗಿದ್ದರು. ಶುಭವಿವಾಹದಲ್ಲಿ ನಾಯಕಿಯ ತಂಗಿಯ ಪಾತ್ರದಲ್ಲಿ ನಟಿಸಿದರು. ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಮಹಾಭಾರತ, ಜೀವನ ಚೈತ್ರ ಧಾರಾವಾಹಿಗಳಲ್ಲಿ ಅಭಿನಯಿಸಿರುವ ರಶ್ಮಿಗೆ ಹೆಸರು ತಂದು ಕೊಟ್ಟದ್ದು ಲಚ್ಚಿ ಪಾತ್ರ.

ತಮಿಳು ಧಾರಾವಾಹಿ ಅರುಂಧತಿಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ಛಾಪು ಮೂಡಿಸಿರುವ ಅವರು ತೆಲುಗು ಭಾಷೆಯ ಪೌರ್ಣಮಿ ಧಾರಾವಾಹಿಯಲ್ಲೂ ನಟಿಸಿದ್ದಾರೆ.  
ಇಂದಲ್ಲ ನಾಳೆ ಒಂದು ಒಳ್ಳೆ ಪಾತ್ರ ತನಗೆ ಸಿಗುತ್ತದೆ ಎಂದು ತಾಳ್ಮೆಯಿಂದ ಕಾಯುತ್ತಿದ್ದ ರಶ್ಮಿಗೆ ಇದೀಗ ಉತ್ತಮ ಪ್ರತಿಫಲ ದೊರೆತಿದೆ. 

‘ಯಾರೇ ನೀ ಮೋಹಿನಿ’ ಯಲ್ಲಿ ಕಾಡುವ ನಟನ ನೆಗೆಟಿವ್ ಶೇಡ್ ಇದು!

“ಈ ಮೊದಲು ಎರಡು ಬಾರಿ ಬದಲಾಗಿದ್ದ ಲಚ್ಚಿ ಪಾತ್ರ ಮೂರನೇ ಬಾರಿ ಬದಲಾದಾಗ ನನಗೆ ಆಫರ್ ಬಂತು. ಸಂತಸ ಎಂದರೆ ನಾನು ಆ ಧಾರಾವಾಹಿಯನ್ನು ನೋಡುತ್ತಿದ್ದೆ. ಅದು ನನ್ನ ಕನಸಿನ ಪಾತ್ರವಾಗಿತ್ತು. ಕನಸಿನ ಪಾತ್ರವೇ ಅರಸಿ ಬಂದಾಗ ತುಂಬಾ ಖುಷಿಯಾಯಿತು. ಮೊದಲಿಗೆ ನನಗೆ ಲಚ್ಚಿ ಪಾತ್ರವನ್ನು ನಿಭಾಯಿಸಲು ಸಾಧ್ಯವೇ ಎಂಬ ಆತಂಕವಿತ್ತು. ಎಲ್ಲರ ಪ್ರೋತ್ಸಾಹದಿಂದ ಮುಂದುವರಿಯಲು ಸಾಧ್ಯವಾಯಿತು" ಎನ್ನುತ್ತಾರೆ ರಶ್ಮಿ. 

ಕಿರುತೆರೆಯಲ್ಲಿ ಮನೆ ಮಾತಾಗಿರುವ ಮುದ್ದು ಮುಖದ ಚೆಲುವೆ ಈಗಾಗಲೇ ಬೆಳ್ಳಿ ತೆರೆಗೆ ಕಾಲಿಟ್ಟಾಗಿದೆ. ಬಿಬಿ5 ಎಂಬ ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿ ಪ್ರಭಾಕರ್ ಮಹಾ ಕಾವ್ಯ ಎಂಬ ಕಲಾತ್ಮಕ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ನಟನೆಯ ಹೊರತಾಗಿ ರಶ್ಮಿ 

ಫೇಸ್‌ಬುಕ್ ಪೋಸ್ಟ್‌ನಿಂದ ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟಿ!

- ಅನಿತಾ ಬನಾರಿ