ನಟನೆ ಬಾಲ್ಯದ ಬಯಕೆ! 

ಅನಿರುದ್ಧ್ ಅವರಿಗೆ ಬಾಲ್ಯದಿಂದಲೂ ನಟನಾಗಬೇಕು ಎಂಬ ಬಯಕೆ. ಹೆತ್ತವರಿಗೆ ಅದು ಯಾವಾಗ ತಮ್ಮ ಮಗನ ಬಯಕೆಯ ಅರಿವಾಯಿತೋ, ಅಂದೇ ಮಗನನ್ನು ಜಿ.ಬಿ.ಕೋಟೆ ಯವರ ಚಿಲಿಪಿಲಿ ಮಕ್ಕಳ ತಂಡಕ್ಕೆ ಸೇರಿಸಿದರು. ರಂಗತಂಡ ಸೇರಿದ ಅನಿರುದ್ಧ್ ಗೆ ನಾಟಕದ ಮೇಲಿನ ಆಸಕ್ತಿ ಇಮ್ಮಡಿಯಾಯಿತು. ಮೊದಮೊದಲು ಫ್ಯಾಂಟಸಿ ಪಾತ್ರಗಳು ಮಾತ್ರ ಅವರಿಗೆ ದೊರೆಯುತ್ತಿತ್ತು. ಆದರೆ ಕ್ರಮೇಣ ಎಲ್ಲಾ ತರಹದ ಪಾತ್ರಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡಿದ್ದರು. ಮುಂದೆ ಇದ್ದಂತೆ ಇರುವುದು ಲೇಸು ನಾಟಕದ ಗಾಳಿರಾಯನ ಪಾತ್ರ, ತುಕ್ಕೋಜಿ ಬುಕೋಜಿ ನಾಟಕದಲ್ಲಿ ಕಟ್ಟೆ ಭೂತು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು. 

ಫೇಸ್‌ಬುಕ್ ಪೋಸ್ಟ್‌ನಿಂದ ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟಿ!

ರಂಗಭೂಮಿಯೇ ನನ್ನುಸಿರು

ರಂಗಸೌರಭ ಮತ್ತು ನವೋದಯ ಎಂಬ ನಾಟಕ ತಂಡಗಳಲ್ಲಿ ಗುರುತಿಸಿಕೊಂಡಿರುವ ಅನಿರುದ್ಧ್ ಮುಂದೆ ಹಲಗಲಿ ಬೇಡರ ದಂಗೆ, ಊರು ಭಂಗ, ಮೈಸೂರು ಮಲ್ಲಿಗೆ, ಗಂಗಾವತರಣ, ಶಸ್ತ್ರ ಪರ್ವ, ಅನ್ನಾವತಾರ,ರೋಮಿಯೋ ಲವ್ಸ್ ಅನಾರ್ಕಲಿ, ಸಿಂಹಾಸಚಲನಂ ಸಂಪಿಗೆ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಕೊನೆ ಪುಟ ಮತ್ತು ಸತ್ವ ಎಂಬ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದ ಚಾಮರಾಜಪೇಟೆಯ ಚಾಕಲೇಟ್ ಹುಡುಗ ಅನಿರುದ್ಧ್ ಜಿಂದಾ ಮತ್ತು ಟೋರಾ ಟೋರಾ ಸಿನಿಮಾಗಳಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ತಮಿಳಿನ ಸ್ವಾಮಿ ವಿವೇಕಾನಂದರ ಸಾಕ್ಷ್ಯ ಚಿತ್ರದಲ್ಲಿ ಜಾರ್ಜ್ ಪಾತ್ರಧಾರಿಯಾಗಿ ಇವರು ಮಿಂಚಿದ್ದಾರೆ. 

ಚಿಕ್ಕ ವಯಸ್ಸಿಗೆ ಕ್ಯಾಮೆರಾ ಎದುರಿಸಿದ ನಟಿಗೆ ಸಿಕ್ತು Bigg Boss, DKD ಅವಕಾಶ!

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರಾವಾಹಿಯ ಭೈರನಾಗಿ ಮಗದೊಮ್ಮೆ ನೆಗೆಟಿವ್ ಪಾತ್ರದಲ್ಲಿ ಸೈ ಎನಿಸಿದ ಅನಿರುದ್ಧ್ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಯಸದೇ ಬಳಿ ಬಂದೆ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.

-  ಅನಿತಾ ಬನಾರಿ