ಕೋಸ್ಟಲ್ ವುಡ್ ತಾರೆಯೂ ಹೌದು! 

ಪುದರುಗೊಂಜಿ ಸಿನಿಮಾದ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ರಾಧಿಕಾ ಮುಂದೆ ಏಸ ತುಳು ಚಿತ್ರದಲ್ಲೂ ನಾಯಕಿಯಾಗಿ ಗಮನ ಸೆಳೆದರು. ಇಂತಿಪ್ಪ ರಾಧಿಕಾ ರಾವ್ ಕಿರುತೆರೆಗೆ ಕಾಲಿಡಲು ಲೋಕೇಶ್ ಪ್ರೊಡಕ್ಷನ್ ಕಾರಣ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಂಗ್ಳೂರು ಹುಡ್ಗಿ ಹುಬ್ಬಳ್ಳಿ ಹುಡುಗ ಧಾರಾವಾಹಿಯಲ್ಲಿ ಮಂಗಳೂರು ಹುಡುಗಿ ಅಮೂಲ್ಯ ಪಾತ್ರಧಾರಿಯಾಗಿ ನಟಿಸರುವ ರಾಧಿಕಾ ಲೋಕೇಶ್ ಪ್ರೋಡಕ್ಷನ್ ನಡಿಯಲ್ಲಿ ಈ ಧಾರಾವಾಹಿ ನಿರ್ಮಾಣವಾಗುತ್ತಿರುವ ಕಾರಣ ಹಿಂದೆ ಮುಂದೆ ನೋಡದೆ ಧಾರಾವಾಹಿಯಲ್ಲಿ ನಟಿಸಲು ಅಸ್ತು ಎಂದರು‌.

‘ಯಾರೇ ನೀ ಮೋಹಿನಿ’ ಯಲ್ಲಿ ಕಾಡುವ ನಟನ ನೆಗೆಟಿವ್ ಶೇಡ್ ಇದು!

ನಟನೆಯ ಕುರಿತು ಗಂಧ ಗಾಳಿ ಗೊತ್ತಿಲ್ಲದ ರಾಧಿಕಾಗೆ ಮೊದಲ ಬಾರಿ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಾಗ ಮುಂದೆ ಹೇಗಪ್ಪಾ ಎಂದು ಭಯವಾಗಿತ್ತು. ಆದರೆ ಈಗ ನಾನು ನಟನೆಯ ರೀತಿ ನೀತಿಗಳನ್ನು ಕಲಿತಿದ್ದಾರೆ. ಮಾತ್ರವಲ್ಲ ನಟನೆಗೂ ಅವರಿಗೂ ಒಂದು ರೀತಿಯ ಬಾಂಧವ್ಯ ಬೆಳೆದಿದೆ. 

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾರಾಣಿ ಧಾರಾವಾಹಿಯಲ್ಲಿ ನಟಿಸಿರುವ ಮಂಗಳೂರು ಸುಂದರಿ ಯಕ್ಷಗಾನ ಮತ್ತು ಭರತನಾಟ್ಯ ಕಲಿತಿದ್ದಾರೆ. ಜೊತೆಗೆ ಈಗಾಗಲೇ  ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದಾಗಿದೆ. ಅಂದ ಹಾಗೆ ಮಾಡೆಲಿಂಗ್ ಬಗ್ಗೆಯೂ ವಿಶೇಷ ಆಸಕ್ತಿ ಹೊಂದಿಲ್ಲದ ಅವರು ಆ ಮಾಡೆಲಿಂಗ್ ಗೆ ಬರಲು ಕಾರಣ ಅವರೊಳಗೆ ಅಡಗಿದ್ದ ಪೋಟೋ ಕ್ರೇಜ್. ರಾಧಿಕಾಗೆ ಫೋಟೋ ತೆಗೆಸಿಕೊಳ್ಳುವುದು, ಫೋಟೋ ಕ್ಕೆ ನಾನಾ ನಮೂನೆಯ ಫೋಸ್ ಕೊಡುವುದೆಂದರೆ ತುಂಬಾ ಇಷ್ಟ. ಮಾಡೆಲಿಂಗ್ ನಲ್ಲಿ ವಿಭಿನ್ನ ರೀತಿಯ ಪೋಟೋಗಳು ಸಿಗುತ್ತದೆ ಎಂಬ ಕಾರಣಕ್ಕೆ ಅದನ್ನು ಒಪ್ಪಿಕೊಂಡರು. ಜ್ಯುವೆಲ್ಲರಿ ಜಾಹೀರಾತು, ಧಾತ್ರಿ ಹೇರ್ ಆಯಿಲ್, 2016 ರ ಹ್ಯಾಂಗ್ಯೂ ಕ್ಯಾಲೆಂಡರ್ ನಲ್ಲಿ ರೂಪದರ್ಶಿಯಾಗಿಯೂ ಅವರು ಕಾಣಿಸಿಕೊಂಡಿದ್ದಾರೆ. 

ಫೇಸ್‌ಬುಕ್ ಪೋಸ್ಟ್‌ನಿಂದ ಸೀರಿಯಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟಿ!

ಕನ್ನಡ ಜೊತೆಗೆ ತಮಿಳು ಧಾರಾವಾಹಿಯಲ್ಲೂ ನಟಿಸುತ್ತಿರುವ ರಾಧಿಕಾ ಇಂದು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಅಮ್ಮ ವಿಜಯಲಕ್ಷ್ಮಿ ಮತ್ತು ಅಣ್ಣ ರಾಕೇಶ್ ಅವರ ಪ್ರೋತ್ಸಾಹವೇ ಕಾರಣ. ಅಮ್ಮ ಅಣ್ಣನ ಸಹಕಾರದಿಂದಲೇ ಇದೆಲ್ಲಾ ಸಾಧ್ಯವಾಯಿತು ಎಂತಾರೆ ಮಂಗಳೂರು ಸುಂದರಿ

- ಅನಿತಾ ಬನಾರಿ