'ರಾಮಾಯಣ' ಸಿನಿಮಾದ 'ರಾವಣ' ಪಾತ್ರದ ಮೂಲಕ ರಾಕಿಂಗ್ ಸ್ಟಾರ್ 05 ನವೆಂಬರ್ 2026ರಂದು ಮತ್ತೆ ಜಗತ್ತಿನ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ವೇಳೆ, ನಟ ಕಿರಣ್ ಶ್ರೀನಿವಾಸ್ ನಟ ಯಶ್ ಅವರ ಬಗ್ಗೆ ಹಂಚಿಕೊಂಡಿದ್ದ ಹಳೆಯ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದೇನು ನೋಡಿ..

ಗ್ಲೋಬಲ್ ಐಕಾನ್ ಯಶ್ ಹಳೆಯ ಸೀಕ್ರೆಟ್ ರಿವೀಲ್! ನೋಡಿ ಅದೇನು ಅಂತ!

ಇಡೀ ವಿಶ್ವವೇ 'ರಾಕಿ ಭಾಯ್' ಎಂದು ಗುರುತಿಸುವ ಕನ್ನಡದ ನಟ ಯಶ್ (Rocking Star Yash) ಅವರು ಇಮದು ಏರಿರುವ ಎತ್ತರ, ಪಡೆದಿರುವ ಜನಪ್ರಿಯತೆ ಎಂತದ್ದು ಎಂಬುದು ಎಲ್ಲರಿಗೂ ಗೊತ್ತು. ಕನ್ನಡ ಹಾಗೂ ಭಾರತದ ಗಡಿಯನ್ನು ದಾಟಿ ನಟ ಯಶ್ ಅವರು ಇಂದು ಗ್ಲೋಬಲ್ ಐಕಾನ್ ಆಗಿ ಮಿಂಚುತ್ತಿದ್ದಾರೆ. 'ಟಾಕ್ಸಿಕ್‌' ಸಿನಿಮಾಗೆ ಬಂದ ಮಿಶ್ರ ಪ್ರತಿಕ್ರಿಯೆ ಏನೇ ಆಗಿದ್ದರೂ, ಇಂದು ಇಡೀ ವಿಶ್ವವೇ ಯಶ್ ಅವರನ್ನು ಗುರುತಿಸಿ ಗೌರವಿಸುತ್ತದೆ, ಅವರು ಬೆಳೆದಿರುವ ಎತ್ತರಕ್ಕೆ 'ಸಲಾಂ; ಎನ್ನುತ್ತದೆ. ಇಂಥ ನಟ ಯಶ್ ಬಗ್ಗೆ ಇದೀಗ ಅಪರೂಪದ ಸಂಗತಿಯೊಂದು ಹೊರಬಿದ್ದಿದೆ. ಅದೇನು ಅಂತ ಮುಂದೆ ನೋಡಿ..

ಮೊಗ್ಗಿನ ಮನಸ್ಸು ಅಲ್ಲ, ರಾಕಿ!

ಯಶ್ ಅವರು ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿರುವ ಸಿನಿಮಾ 'ರಾಕಿ' ಬಗ್ಗೆ ಎಲ್ಲಾ ಕನ್ನಡಿಗರಿಗೆ ಗೊತ್ತಿದೆ. 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ನಟ ಯಶ್ ಅವರು ಕ್ಲೈಮ್ಯಾಕ್ಸ್ ಹಾಡಿನಲ್ಲಿ ಆ ಚಿತ್ರದ ನಾಯಕಿ ನಟಿ ರಾಧಿಕಾ ಪಂಡಿತ್ ಅವರೊಂದಿಗೆ ಹೆಜ್ಜೆ ಹಾಕಿ ಫೇಮಸ್ ಆಗಿದ್ದರೂ ಅವರನ್ನು ಆ ಚಿತ್ರದಲ್ಲಿ ನಾಯಕರು ಎನ್ನಲಾಗುವುದಿಲ್ಲ. 'ರಾಕಿ' ಚಿತ್ರದ ಮೂಲಕ ಕನ್ನಡದಲ್ಲಿ ನಾಯಕರಾಗಿ ಯಶ್ ಅವರು ಹವಾ ಸೃಷ್ಟಿಸಿದ್ದನ್ನು ಯಾರೂ ಅಲ್ಲಗೆಳೆಯಲಾಗದು. ಅದೇ ಸಿನಿಮಾ ಬಿಡುಗಡೆ ಸಮಯದಲ್ಲಿ ನಡೆದಿರುವ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಕನ್ನಡದ ಮತ್ತೊಬ್ಬ ನಟ, 'ಹಾಗೇ ಸುಮ್ಮನೆ' ಸಿನಿಮಾದ ಖ್ಯಾತಿಯ ಕಿರಣ್ ಶ್ರೀನಿವಾಸ್ ಅವರು ಹಂಚಿಕೊಂಡಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

'ರಾಕಿ' ಯಶ್ ಬಗ್ಗೆ 'ಹಾಗೇ ಸುಮ್ಮನೇ' ಕಿರಣ್ ಶ್ರೀನಿವಾಸ್ ಹೇಳಿದ್ದು:- ಯಶ್ ಫೋನ್ ಮಾಡಿದ ನಂಗೆ.. ಹೊಸ ನಟ ಅಂತ ಗೊತ್ತಿದೆ ನಂಗೆ.. ಮೀಟ್ ಮಾಡಿರ್ಲಿಲ್ಲ ಯಾವತ್ತೂ, ನಂಬರ್ ಕೂಡ ಇರ್ಲಿಲ್ಲ ನನ್ ಹತ್ರ.. ಕಾಲ್ ಬಂತು ಎತ್ತಿದೆ.. 'ಕಿರಣ್ ಅಣ್ಣಾ, ನಾನು ಯಶ್ ಮಾತಾಡ್ತಾ ಇರೋದು.. ಎಲ್ಲಿದಿಯಾ?' ಅಂದ.. ನಂಗೆ ಶಾಕ್ ಆಯ್ತು.. ನಮಗಿಬ್ಬರಿಗೂ ಪರಸ್ಪರ ಪರಿಚಯ ಇತ್ತು, ಆದ್ರೆ ಯಾವತ್ತೂ ಭೇಟಿ ಅಗಿರ್ಲಿಲ್ಲ ಅಷ್ಟೇ.. ನಾನು 'ಮನೆಲ್ಲೇ ಇದೀನಿ ಅಂದೆ'.. ಅದಕ್ಕೆ, 'ಒಂದ್ ಕೆಲ್ಸ ಮಾಡು, ಇನ್ನು ಒಂದ್ ಗಂಟೆಲಿ ಕಬ್ಬನ್ ಪಾರ್ಕ್ ಹತ್ರ ಬಾ, ಓಲ್ಡ್ ಹೈಕೋರ್ಟ್ ಹತ್ರ ಬಾ..' ಅಂದ.. ನಾನು 'ಯಾಕೆ?' ಅಂದಿದ್ದಕ್ಕೆ 'ನಾನು ಹೇಳ್ತಿನಿ, ಬಾ..' ಅಂದ..

ಫಸ್ಟ್ ಸಿನಿಮಾ ಬೇರೆ!

ನಾನು ಫಸ್ಟ್‌ ಆಪ್‌ ಆಲ್ ಅವ್ನ ಯಾವತ್ತೂ ಮೀಟ್ ಮಾಡಿಯೇ ಇಲ್ಲ.. ಜೊತೆಗೆ, ಫಸ್ಟ್ ಸಿನಿಮಾ ಬೇರೆ.. ಆದ್ರೂ ಸರಿ, ಮೀಟ್ ಮಾಡೋಣ ಅಂತ ಹೋದೆ.. ಅಲ್ಲಿ ಹೋಗಿ ನೋಡಿದ್ರೆ, ಯಾವುದೋ ಮೀಡಿಯಾದವ್ರನ್ನ ಕರೆಸಿ 2 ಕ್ಯಾಮೆರಾ ಸೆಟ್‌ಅಪ್ ಮಾಡ್ಸಿ ಇಟ್ಟಿದಾನೆ.. ನನ್ ನೋಡಿದ ತಕ್ಷಣ, 'ನೋಡು ಕಿರಣ್‌.. ನಾನು ನಿನ್ನ 'ಹಾಗೇ ಸುಮ್ಮನೇ' ಸಿನಿಮಾ ಪ್ರಮೋಟ್ ಮಾಡ್ತೀನಿ, ನೀನು ನನ್ನ 'ರಾಕಿ' ಸಿನಿಮಾ ಪ್ರಮೋಟ್ ಮಾಡು.. ನಾವಿಬ್ರೂ ಇಲ್ಲಿ ಕೂತ್ಕೊಂಡು, ನೀನು ನನ್ನ ರಾಕಿ ಸಿನಿಮಾ ಬಗ್ಗೆ ಮಾತಾಡು, ನಾನು ನಿನ್ನ ಹಾಗೇ ಸುಮ್ಮನೇ ಸಿನಿಮಾ ಬಗ್ಗೆ ಮಾತಾಡ್ತೀನಿ' ಅಂದ.. ನಂಗೆ ಏನೂ ಅಂದ್ರೆ ಏನೂ ಗೊತ್ತಿಲ್ಲ.. ಆದ್ರೂ ಇಬ್ರೂ ಮಾತಾಡಿದ್ವಿ..

ಕ್ಲಾರಿಟಿ ಅದ್ರಲ್ಲೇ ಇದೆ ನೋಡಿ.. 'ನಾನು ನನ್ ಸಿನಿಮಾ ರಿಲೀಸ್ ಆಗಿರೋ ಖುಷಿನಲ್ಲಿ ಫ್ಯಾಮಿಲಿ, ಫ್ರೆಂಡ್ಸ್‌, ಪಾರ್ಟಿ ಅಂತ ಮಜಾ ಮಾಡ್ತಾ ಇದೀನಿ.. ಆದ್ರೆ ಅವ್ನು? ನಾನು ಈ ಸಿನಿಮಾನ ಜನರಿಗೆ ಮುಟ್ಟಿಸಬೇಕು, ಇದ್ರಿಂದ ಬೆಳೀಬೇಕು ನಾನು ಅನ್ನೊ ಕ್ಲಾರಿಟಿ, ಮೆಂಟಾಲಿಟಿ, ಪ್ರಬುದ್ಧತೆ ಯಶ್‌ಗೆ ಆಗ್ಲೇ ಇತ್ತು..' ಎಂದಿದ್ದಾರೆ ನಟ ಕಿರಣ್ ಶ್ರೀನಿವಾಸ್.

ಹೌದು, ನಟ ಯಶ್ ಅವರು ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಸೋಲು-ಗೆಲುವು ಎರಡನ್ನೂ ನೋಡಿದ್ದಾರೆ. ಆದ್ರೆ ಅವರಿಗೊಂದು ಕ್ಲಿಯರ್ ವಿಷನ್ ಇದೆ ಅನ್ನೋ ಮಾತನ್ನ ಅವರ ಆಪ್ತರು, ಸಹನಟರಲ್ಲಿ ಬಹಳಷ್ಟು ಜನರು ಹೇಳುತ್ತಾರೆ. ಇಂದು ನಟ ಯಶ್ ಅವರು ಜಾಗತಿಕ ನಟ ಪಟ್ಟವನ್ನು ಅಲಂಕರಿಸಿದ್ದಾರೆ. ಕನ್ನಡದ ನಟರೊಬ್ಬರು ಇಷ್ಟು ಎತ್ತರಕ್ಕೆ ಏರಿದ್ದು, ಇಡೀ ಭಾರತದ ಪ್ರತಿನಿಧಿಯಾಗಿ ಪ್ರಪಂಚದ ತುಂಬೆಲ್ಲಾ ಕನ್ನಡನಾಡಿನ, ಭಾರತದ ಹಿರಿಮೆಯನ್ನು ಪಸರಿಸುತ್ತಿದ್ದಾರೆ ನಟ ಯಶ್ ಎಂಬ ಮಾತನ್ನು ಹೇಳಲೇಬೇಕು.

ಯಶ್ ಕನಸಿನ ಸಿನಿಮಾ 'ಟಾಕ್ಸಿಕ' ಅಂದುಕೊಂಡಷ್ಟು ಸೂಪರ್ ಹಿಟ್ ದಾಖಲಿಸಿಲ್ಲ ಎಂಬ ಮಾತು ಇದ್ದರೂ, ಇದೀಗ ಮತ್ತೆ 'ರಾಮಾಯಣ' ಸಿನಿಮಾದ 'ರಾವಣ' ಪಾತ್ರದ ಮೂಲಕ ರಾಕಿಂಗ್ ಸ್ಟಾರ್ 05 ನವೆಂಬರ್ 2026ರಂದು ಮತ್ತೆ ಜಗತ್ತಿನ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಯಶ್ ರಾವಣನ ಪಾತ್ರವನ್ನು ಸಿನಿಪ್ರೇಕ್ಷಕರು ಈಗಾಗಲೇ ಮೆಚ್ಚಿದ್ದು, 'ರಾವಣಾಸುರ'ನಾಗಿ ತೆರೆಯ ಮೇಲೆ ಅಬ್ಬರಿಸುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಯಶ್ 'ವಿಷನ್ ಕ್ಲಾರಿಟಿ' ಅವರನ್ನು ಇನ್ನೂ ಎಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಬಹುದು ಎಂಬುದನ್ನು ಇಡೀ ಜಗತ್ತು ಅಚ್ಚರಿಯಿಂದ ನೋಡುತ್ತಿದೆ!