ಬಾಲಿವುಡ್ ನಟಿ ಕಿಯಾರಾ ಅಡ್ವಾನಿ, ನಟ ವಿಜಯ್ ದೇವರಕೊಂಡ ಮೇಲೆ ತಮಗೆ ಕ್ರಶ್ ಇತ್ತು ಎಂದು ರಾಣಾ ದಗ್ಗುಬಾಟಿ ಅವರೊಂದಿಗಿನ ಚಿಟ್‌ಚಾಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಇದಲ್ಲದೆ, ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ನಟಿಸಿದ್ದು, ಅದರ ಬಿಡುಗಡೆ ದಿನಾಂಕದ ಬಗ್ಗೆಯೂ ಲೇಖನದಲ್ಲಿ ಮಾಹಿತಿ ಇದೆ.

ಮುಂಬೈ: ಕೆಲದಿನಗಳ ಹಿಂದಷ್ಟೆ ದಕ್ಷಿಣ ಭಾರತದ ತಾರಾ ಜೋಡಿಯಾದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಭರ್ಜರಿಯಾಗಿಯೇ ಈಗ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ವಿಜಯ್ ದೇವರಕೊಂಡ ಜತೆ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಕಿಯಾರ ಅಡ್ವಾನಿಗೆ, ವಿಜಯ್ ದೇವರಕೊಂಡ ಮೇಲೆ ಸೀರಿಯರ್ ಆಗಿ ಕ್ರಶ್ ಆಗಿತ್ತು ಎಂದು ಒಂದು ಚಿಟ್‌ಚಾಟ್‌ನಲ್ಲಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು.

Add Asianetnews Kannada as a Preferred SourcegooglePreferred

ರಾಣಾ ದಗ್ಗುಬಾಟಿ ಎದುರು ಬಹಿರಂಗವಾಗಿಯೇ ಕ್ರಶ್ ವಿಚಾರ ಒಪ್ಪಿಕೊಂಡ ಕಿಯಾರ ಅಡ್ವಾನಿ:

ಹೌದು, ರಾಣಾ ದಗ್ಗುಬಾಟಿ ಅವರ ಕ್ಯಾಂಡಿಡ್ ಚಿಟ್‌ಚಾಟ್‌ ವೇಳೆ ಕಿಯಾರ ಅಡ್ವಾನಿ, ಬಹಿರಂಗವಾಗಿಯೇ ವಿಜಯ್ ದೇವರಕೊಂಡ ಮೇಲೆ ತಮಗೆ ಸಾಫ್ಟ್ ಕಾರ್ನರ್ ಇತ್ತು. ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ. ನಾನು ಅವರನ್ನು ತುಂಬಾನೆ ಇಷ್ಟಪಡುತ್ತಿದ್ದೆ. ಇದು ಉಳಿದವರ ಹುಬ್ಬೇರಿಸುವಂತೆ ಮಾಡಿತ್ತು ಎಂದು ಪ್ರಾಮಾಣಿಕವಾಗಿ ವಿಜಯ್ ದೇವರಕೊಂಡ ಅವರ ಮೇಲಿದ್ದ ಕ್ರಶ್ ಬಗ್ಗೆ ಮಾತನಾಡಿದ್ದಾರೆ.

ಇನ್ನು ಗೇಮ್‌ ಚೇಂಜರ್ ಸಿನಿಮಾದಲ್ಲಿ ಕಿಯಾರ ಅಡ್ವಾನಿ, ರಾಮ್ ಚರಣ್‌ ಅವರ ಜತೆ ನಟಿಸಿದ್ದರು. ಆಗಾಗ ಕಿಯಾರ, ವಿಜಯ್ ದೇವರಕೊಂಡ ಅವರ ಬಗ್ಗೆ ವಿಚಾರಿಸುತ್ತಿದ್ದರು ಎಂದು ರಾಮ್ ಚರಣ್ ಹೇಳಿದ್ದಾರೆ.

ಹೀಗೆ ವಿಜಯ್ ದೇವರಕೊಂಡ ವಿಚಾರವಾಗಿ ಹರಟೆ ಮಂದುವರೆಯುತ್ತಿದ್ದಂತೆಯೇ, ಮಾತಿಗೆ ಜತೆಯಾದ ಕಿಯಾರ, ತಮಾಷೆಯಾಗಿಯೇ ರಾಣಾ ಬಳಿ ತಮ್ಮನ್ನು ವಿಜಯ್‌ಗೆ ಪರಿಚಯಿಸಿ ಎಂದು ಕೇಳುತ್ತಾರೆ. ಆಗ ಎಲ್ಲರು ಜೋರಾಗಿ ನಗುತ್ತಾರೆ. ಅಂದಹಾಗೆ ವಿಜಯ್ ದೇವರಕೊಂಡ ಹಾಗೂ ಕಿಯಾರ ಅಡ್ವಾನಿ ಹಲವು ಕಮರ್ಷಿಯಲ್ ಇವೆಂಟ್‌ಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಈ ಕ್ಯಾಂಡಿಡ್ ಚಿಟ್‌ಚಾಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕಿಯಾರ ಅಡ್ವಾನಿ ಮುಂದಿನ ಪ್ರಾಜೆಕ್ಟ್ ಏನು?

ಇದೀಗ ಯಶ್ ನಾಯಕ ನಟನಾಗಿ ನಟಿಸಿರುವ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ನಟಿಸಿದ್ದು, ಜೂನ್ 04ರಂದು ತೆರೆಗೆ ಅಪ್ಪಳಿಸಲಿದೆ. ಈ ಮೊದಲು ಮಾರ್ಚ್ 19ರಂದು ಧುರಂಧರ್-2 ಸಿನಿಮಾ ರಿಲೀಸ್ ದಿನದಂದೇ ಟಾಕ್ಸಿಕ್ ಬಿಡುಗಡೆಗೆ ಡೇಟ್ ಫಿಕ್ಸ್‌ ಆಗಿತ್ತು. ಆದರೆ ಮಧ್ಯಪ್ರಾಚ್ಯ ಯುದ್ದದಿಂದಾಗಿ ಈ ಸಿನಿಮಾ ರಿಲೀಸ್ ಜೂನ್ 04ಕ್ಕೆ ಮುಂದೂಡಲಾಗಿದೆ.

ಟಾಕ್ಸಿಕ್ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಯಶ್ ಜತೆಗೆ ನಯನತಾರಾ, ಕಿಯಾರ ಅಡ್ವಾನಿ, ಹುಮಾ ಖುರೇಶಿ, ರುಕ್ಮಿಣಿ ವಸಂತ ಹಾಗೂ ತಾರಾ ಸುತಾರಿಯಾ ಅವರು ನಟಿಸಿದ್ದಾರೆ.