'ಪೆದ್ದಿ' ಸಿನಿಮಾ ರಾಮ್ ಚರಣ್ ಅಭಿಮಾನಿಗಳಿಗೆ ಹಬ್ಬ ಎನಿಸಿದರೂ, ಜಾನ್ವಿ ಅಭಿಮಾನಿಗಳಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ. ಬಾಲಿವುಡ್‌ನಲ್ಲಿ ಗ್ಲಾಮರ್ ಗೊಂಬೆಯಾಗಿದ್ದ ಜಾನ್ವಿ, ಸೌತ್ ಸಿನಿಮಾದಲ್ಲಿ ಒಂದು ಗಟ್ಟಿ ಪಾತ್ರ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ.
ಪೆದ್ದಿ' ಸಿನಿಮಾದಲ್ಲಿ 'ಅಚ್ಚಿಯಮ್ಮ'ನಿಗೆ ಅನ್ಯಾಯ? ನಿರ್ದೇಶಕ ಬುಚ್ಚಿಬಾಬುಗೆ ನೆಟ್ಟಿಗರ ಕ್ಲಾಸ್! ಇದು ಭಾರತೀಯ ಸಿನಿಮಾದ 'ದುಬಾರಿ ಅಗೌರವ'ವೇ?
ಟಾಲಿವುಡ್‌ನ ‘ಮೆಗಾ ಪವರ್ ಸ್ಟಾರ್’ ರಾಮ್ ಚರಣ್ ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಕಾಂಬಿನೇಷನ್ ಅಂದಾಕ್ಷಣ ಅಭಿಮಾನಿಗಳಲ್ಲಿ ನಿರೀಕ್ಷೆಗಳು ಗಗನಕ್ಕೇರಿದ್ದವು. ಆದರೆ, 'ಪೆದ್ದಿ' (Peddi) ಚಿತ್ರದ ಪ್ರದರ್ಶನ ಕಾಣುತ್ತಿದ್ದಂತೆಯೇ ಈಗ ಸಿನಿರಂಗದಲ್ಲಿ ಕೇಳಿಬರುತ್ತಿರುವುದು ಸಂಭ್ರಮದ ಸದ್ದಲ್ಲ, ಬದಲಾಗಿ ಆಕ್ರೋಶದ ಕಿಡಿ! ಹೌದು, ಚಿತ್ರದಲ್ಲಿ ಜಾನ್ವಿ ಕಪೂರ್ (Janhvi Kapoor) ನಿರ್ವಹಿಸಿರುವ 'ಅಚ್ಚಿಯಮ್ಮ' ಪಾತ್ರವನ್ನು ತೋರಿಸಿರುವ ರೀತಿ ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ.

ಏನಿದು 'ದುಬಾರಿ ಅಗೌರವ'ದ ಪೋಸ್ಟ್?
ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಒಂದು ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ, "ಪೆದ್ದಿ: ಭಾರತೀಯ ಸಿನಿಮಾದಲ್ಲಿ ಪ್ರಮುಖ ಮಹಿಳಾ ನಟಿಗೆ ಇದುವರೆಗೆ ನೀಡಲಾದ ಅತ್ಯಂತ ದುಬಾರಿ ಅಗೌರವ" ಎಂಬ ಶೀರ್ಷಿಕೆ ನೀಡಲಾಗಿದೆ. ಅಚ್ಚರಿಯ ವಿಷಯವೆಂದರೆ, ಖುದ್ದು ಜಾನ್ವಿ ಕಪೂರ್ ಅವರೇ ಈ ಪೋಸ್ಟ್ ಅನ್ನು 'ಲೈಕ್' ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಚಿತ್ರರಂಗದಲ್ಲಿ ಗಾಸಿಪ್ ಹಕ್ಕಿಗಳು ರೆಕ್ಕೆ ಬಿಚ್ಚಲು ಕಾರಣವಾಗಿದೆ. ನಟಿಯೊಬ್ಬರು ತಾನು ನಟಿಸಿದ ಸಿನಿಮಾದ ಬಗ್ಗೆಯೇ ಇಂತಹ ಪೋಸ್ಟ್ ಲೈಕ್ ಮಾಡಿದ್ದಾರಾ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕ್ಯಾಮರಾ ಆಂಗಲ್ ಬಗ್ಗೆ ನೆಟ್ಟಿಗರ ಕೆಂಗಣ್ಣು!
ವಿವಾದದ ಅಸಲಿ ಕೇಂದ್ರಬಿಂದು ಇರುವುದು ನಿರ್ದೇಶಕ ಬುಚ್ಚಿಬಾಬು ಸನಾ ಅವರ ಮೇಕಿಂಗ್ ಶೈಲಿಯಲ್ಲಿ. ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಎಂಟ್ರಿ ಸೀನ್ ಆಗಲಿ ಅಥವಾ ಇತರ ದೃಶ್ಯಗಳಾಗಲಿ, ನಾಯಕಿಯ ಮುಖವನ್ನು ತೋರಿಸುವ ಮೊದಲೇ ಕ್ಯಾಮರಾ ಆಕೆಯ ಸೊಂಟದ ಮೇಲೆ ಫೋಕಸ್ ಮಾಡುತ್ತದೆ. "ಊರಿನ ದೊಡ್ಡ ರಾಜಕಾರಣಿಯ ಮಗಳು ಮೈಮಾಟ ಪ್ರದರ್ಶಿಸುತ್ತಾ ಹೀಗೆ ತಿರುಗಾಡಲು ಸಾಧ್ಯವೇ?" ಎಂಬುದು ವಿಮರ್ಶಕರ ಪ್ರಶ್ನೆ. ಕೇವಲ ಗ್ಲಾಮರ್ ಅಸ್ತ್ರವಾಗಿ ಜಾನ್ವಿ ಅವರನ್ನು ಬಳಸಿಕೊಳ್ಳಲಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಸಮ್ಮತಿ ಇಲ್ಲದ ಮುತ್ತು 'ಹೀರೋಯಿಸಂ' ಆಯಿತೇ?
ಸಿನಿಮಾದಲ್ಲಿ ನಾಯಕ 'ಪೆದ್ದಿ', ನಾಯಕಿ ಅಚ್ಚಿಯಮ್ಮನ ಒಪ್ಪಿಗೆಯಿಲ್ಲದೆಯೇ ಆಕೆಗೆ ಮುತ್ತು ಕೊಡುತ್ತಾನೆ. ಇದನ್ನು ಸಿನಿಮಾದಲ್ಲಿ ಒಂದು ಮಾಸ್ ಅಥವಾ ಹೀರೋಯಿಸಂನಂತೆ ಬಿಂಬಿಸಲಾಗಿದೆ. ಇಂದಿನ ಕಾಲಘಟ್ಟದಲ್ಲಿ ಇಂತಹ ದೃಶ್ಯಗಳು ಮಹಿಳೆಯರ ಘನತೆಗೆ ಧಕ್ಕೆ ತರುತ್ತವೆ ಎಂಬ ವಾದ ಜೋರಾಗಿದೆ. ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ಇದೇ ರೀತಿ ಅಸಹಾಯಕವಾಗಿ ತೋರಿಸಲಾಗಿತ್ತು, ಈಗ ಜಾನ್ವಿ ಸರದಿ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಜಾನ್ವಿ ಕಪೂರ್ ಕೂಡ ಅಸಮಾಧಾನಗೊಂಡಿದ್ದಾರಾ?
ವರದಿಗಳ ಪ್ರಕಾರ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಜಾನ್ವಿ ಕಪೂರ್ ಸ್ವತಃ ಈ ಕೆಲವು ಶಾಟ್‌ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮಹಿಳೆಯರನ್ನು ಅತಿಯಾಗಿ ಲೈಂಗಿಕವಾಗಿ ಬಿಂಬಿಸುವ (Objectification) ದೃಶ್ಯಗಳು ಅವರಿಗೆ ಇಷ್ಟವಿರಲಿಲ್ಲವಂತೆ. ಆದರೆ, ನಿರ್ದೇಶಕರು ಕಮರ್ಷಿಯಲ್ ದೃಷ್ಟಿಯಿಂದ ಈ ಬದಲಾವಣೆ ಮಾಡಿಲ್ಲ ಎಂಬ ಗುಸುಗುಸು ಕೇಳಿಬರುತ್ತಿದೆ.
ಒಟ್ಟಿನಲ್ಲಿ, 'ಪೆದ್ದಿ' ಸಿನಿಮಾ ರಾಮ್ ಚರಣ್ ಅಭಿಮಾನಿಗಳಿಗೆ ಹಬ್ಬ ಎನಿಸಿದರೂ, ಜಾನ್ವಿ ಅಭಿಮಾನಿಗಳಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ. ಬಾಲಿವುಡ್‌ನಲ್ಲಿ ಗ್ಲಾಮರ್ ಗೊಂಬೆಯಾಗಿದ್ದ ಜಾನ್ವಿ, ಸೌತ್ ಸಿನಿಮಾದಲ್ಲಿ ಒಂದು ಗಟ್ಟಿ ಪಾತ್ರ ಮಾಡುತ್ತಾರೆ ಎಂದು ನಿರೀಕ್ಷಿಸಿದ್ದವರಿಗೆ ನಿರಾಸೆಯಾಗಿದೆ. ಈ ಟ್ರೋಲ್‌ಗಳಿಗೆ ಮತ್ತು ಆಕ್ರೋಶಕ್ಕೆ ನಿರ್ದೇಶಕ ಬುಚ್ಚಿಬಾಬು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ!


