ಇತ್ತೀಚೆಗೆ ಕನ್ನಡ ಸಿನಿಮಾಗಳ ಡಿಜಿಟಲ್‌ ಹಕ್ಕುಗಳು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗುತ್ತಿದೆ. ಆದರೆ ‘ಕೆಜಿಎಫ್‌’ ಚಿತ್ರದ ಮಾರಾಟ ಎಲ್ಲವನ್ನೂ ಮೀರಿಸಿ ಮುಂದೆ ಹೋಗಿದೆ. ಕಂಡುಕೇಳರಿಯದಷ್ಟುಮೊತ್ತಕ್ಕೆ ಮಾರಾಟವಾಗಿರುವುದು ಕನ್ನಡದ ಮತ್ತು ಕನ್ನಡಿಗರ ಶಕ್ತಿಯನ್ನು ಡಿಜಿಟಲ್‌ ಜಗತ್ತಿಗೆ ತೋರಿಸಿದಂತಾಗಿದೆ. ಈ ಚಿತ್ರದಿಂದಾಗಿ ಡಿಜಿಟಲ್‌ ಮಾರಾಟದ ವ್ಯಾಪ್ತಿ ಹಿಗ್ಗಿದಂತಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದರಿಂದ ನಿಚ್ಚಳವಾಗಿದೆ.

ಅಮೆಜಾನ್‌, ನೆಟ್‌ಫ್ಲಿಕ್ಸ್‌ಗಳು ಸಿನಿಮಾ ಖರೀದಿಸುವುದರಿಂದ ಸಿನಿಮಾ ನಿರ್ಮಿಸುವವರಿಗೆ ಹೆಚ್ಚಿನ ಬಲ ಸಿಕ್ಕಿದೆ. ಇದೀಗ ಹೆಚ್ಚು ಮೊತ್ತಕ್ಕೆ ಸಿನಿಮಾ ಮಾರಾಟವಾಗುತ್ತಿರುವುದು ಜಾಸ್ತಿ ಹಣ ಹೂಡಲು ಧೈರ್ಯ ತುಂಬಿದಂತಾಗಿದೆ. ಅಮೆಜಾನ್‌ ಪ್ರೈಮ್‌ ಸಂಸ್ಥೆ ‘ಕೆಜಿಎಫ್‌’ನ ಐದು ಭಾಷೆಯ ಚಿತ್ರಗಳನ್ನೂ ಖರೀದಿಸಿದೆ ಎನ್ನಲಾಗಿದೆ. ಇದು ಕನ್ನಡದ ಮಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಧೈರ್ಯ ತುಂಬುವುದಕ್ಕೂ ಸಹಾಯ ಮಾಡಿದಂತಾಗಿದೆ. ಈ ಎಲ್ಲಾ ಕಾರಣದಿಂದಾಗಿ ವಿಜಯ್‌ ಕಿರಗಂದೂರು ನಿರ್ಮಾಣದ, ಯಶ್‌ ಅಭಿನಯದ ‘ಕೆಜಿಎಫ್‌’ ಚಿತ್ರ ಮಹಾಸಾಧನೆ ಮಾಡಿದೆ ಎನ್ನಬಹುದು.

ಇದರ ನಡುವೆಯೇ ಹಿಂದಿಯಲ್ಲಿ ಐದು ದಿನಕ್ಕೆ ಕೆಜಿಎಫ್‌ 16 ಕೋಟಿ ಗಳಿಸಿದೆ ಎಂದು ಹಿಂದಿನ ಅಧಿಕೃತ ಗಳಿಕಾತಜ್ಞ ತರಣ್‌ ಆದಶ್‌ರ್‍ ಟ್ವೀಟ್‌ ಮಾಡಿದ್ದಾರೆ.

ಬಾಕ್ಸಾಫೀಸ್‌ನಲ್ಲಿ 200 ಕೋಟಿ ಬಾಚುತ್ತಾ ಕೆಜಿಎಫ್?

ಕನ್ನಡದಲ್ಲಿ ಕಲರ್ಸ್‌, ಹಿಂದಿಯಲ್ಲಿ ಸೋನಿ

ಮೊದಲೆಲ್ಲಾ ಡಿಜಿಟಲ್‌ ಹಕ್ಕು ಮತ್ತು ಸ್ಯಾಟಲೈಟ್‌ ಹಕ್ಕು ಒಂದೇ ಸಂಸ್ಥೆಗೆ ನೀಡುವ ಪರಿಪಾಠ ಇತ್ತು. ಅದರಿಂದ ಒಂದೇ ಮೊತ್ತಕ್ಕೆ ಎರಡೂ ಹಕ್ಕುಗಳು ಮಾರಾಟವಾಗುತ್ತಿದ್ದವು. ಆದರೆ ಈಗ ಆ ಪರಿಪಾಠ ಬದಲಾಗಿದೆ. ಡಿಜಿಟಲ್‌ ರೈಟ್‌ ಬೇರೆ, ಸ್ಯಾಟಲೈಟ್‌ ಹಕ್ಕು ಬೇರೆ ಅನ್ನುವ ಥರ ಆಗಿದೆ. ಅಮೆಜಾನ್‌ ಪ್ರೈಮ್‌ ಕೆಜಿಎಫ್‌ನ ಡಿಜಿಟಲ್‌ ಹಕ್ಕು ಪಡೆದುಕೊಂಡಿದೆ. ಕನ್ನಡ ಚಿತ್ರದ ಸ್ಯಾಟಲೈಟ್‌ ಹಕ್ಕನ್ನು ಕಲರ್ಸ್‌ ಕನ್ನಡ ದಾಖಲೆ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗಿದೆ. ಕೆಜಿಎಫ್‌ನ ಹಿಂದಿ ಅವತರಣಿಕೆಯನ್ನು ಸೋನಿ ಚಾನೆಲ್‌ ಖರೀದಿಸಿದೆ. ಅದೂ ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಅಲ್ಲಿಗೆ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕಿನಿಂದಾಗಿಯೇ ಚಿತ್ರದ ಬಜೆಟ್‌ ಮೊತ್ತ ವಾಪಸ್‌ ಬರಲಿದೆ ಎನ್ನಲಾಗಿದೆ. ಆ ಕಾರಣದಿಂದಲೂ ಕೆಜಿಎಫ್‌ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮೈಲಿಗಲ್ಲು.

ಕೆಜಿಎಫ್ ನೋಡಿ ಯಶ್‌ಗೆ ಸುಮಲತಾ ವಿಶ್!