ಬೆಂಗಳೂರು (ಡಿ.24): ಪ್ರೇಕ್ಷಕರ ಮನ ಗೆಲ್ಲುವಲ್ಲಿ ಕೆಜಿಎಫ್ ಯಶಸ್ವಿಯಾಗಿದೆ. ಚಿತ್ರ ನೋಡಿ ಬಂದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಬಿಡುಗಡೆ ಆದ ದಿನದಿಂದ ಎಲ್ಲಾ ಚಿತ್ರಮಂದಿರಗಳು ಫುಲ್ ರಶ್. ಯಶ್ ಅಭಿನಯ ಸ್ಯಾಂಡಲ್ ವುಡ್ಡನ್ನು ಇನ್ನಷ್ಟು ಎತ್ತರಕ್ಕೇರಿಸಿದೆ. 

ನಟಿ ಸುಮಲತಾ ಅಂಬರೀಶ್ ಕೆಜಿಎಫ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

 

‘ ಕೆಜಿಎಫ್ ಅಪ್ಪಟ ಬಂಗಾರ. ಸ್ಯಾಂಡಲ್ ವುಡ್ ಹಿಂದೆಂದೂ ಕಂಡಿರದ ಅದ್ಭುತ ಚಿತ್ರ ಇದು. ಸತತ 2 ವರ್ಷ ಶ್ರದ್ಧೆಯಿಂದ, ನಂಬಿಕೆಯಿಂದ ಕಷ್ಟಪಟ್ಟು ಮಾಡಿದ ಯಶ್ ಶ್ರಮಕ್ಕೆ ನನ್ನದೊಂದು ಸಲಾಂ.  ಚಿತ್ರದ ಬಗ್ಗೆ ಪ್ರೇಕ್ಷಕರ ಮೆಚ್ಚುಗೆ ಮಾತುಕೇಳಿ ಬಹಳ ಸಂತೋಷವಾಗುತ್ತಿದೆ. ಇದರ ಯಶಸ್ಸು ಯಶ್ ಗೆ ಸಲ್ಲಬೇಕು.  2 ವರ್ಷದ ಬೆವರಿನ ಫಲವನ್ನು ಈಗ ಎಂಜಾಯ್ ಮಾಡಿ ಎಂದು ಸುಮಲತಾ ಟ್ವೀಟಿಸಿದ್ದಾರೆ.