'ರಾಮ್ ಗೋಪಾಲ್ ವರ್ಮಾಗೆ ಧಿಕ್ಕಾರ' ಎಂದು ಟಿ ಸಿ ವೆಂಕಟೇಶ್ ಹಾಗೂ ಗಜಾನಂದ್ ಅಂಡ್ ಟೀಮ್ ಕೂಗಿದೆ. 'ಅಣ್ಣಾವ್ರ ಬಗ್ಗೆ ಸಿಕ್ಕಿ ಸಿಕ್ಕಿದವರೆಲ್ಲ ಮಾತಾಡೋದು ತಪ್ಪು. ಅಂಥವರ ಮೇಲೆ ಕ್ರಮ ಆಗ್ಬೇಕು. ಅಮಿತಾಭ್ ಅವರ ನಟನೆಯಲ್ಲಿ ಮೂಡಿ ಬಂದಿರೋ ಸಿನಿಮಾ 'ಅದೇ ಕಣ್ಣು'

ಕರ್ನಾಟಕದಲ್ಲಿ ಹೊಸದೊಂದು ವಿವಾದ ಶುರುವಾಗಲಿ ಎಂದು ಕಡ್ಡಿ ಗೀರಿದ್ದರು ಸದಾ ವಿವಾದಾತ್ಮಕ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ(Ram Gopal Varma). ಆದರೆ, ಅದನ್ನು ವಿವಾದ ಮಾಡಿ ಅವರಿಗೆ ಇನ್ನಷ್ಟು ಪಬ್ಲಿಸಿಟಿ ಕೊಡುವ ಬದಲು ಅವರನ್ನು ನೆಗ್ಲೆಕ್ಟ್ ಮಾಡೋದು ಒಳ್ಳೇದು ಎಂಬ ಅಭಿಪ್ರಾಯ 'ಕರ್ನಾಟಕ ಫಿಲಂ ಚೇಂಬರ್' ಕಡೆಯಿಂದ ವ್ಯಕ್ತವಾಗಿದೆ. ಹಾಗಿದ್ದರೆ ಅದೇನು ವಿವಾದಕ್ಕೆ ಮುನ್ನುಡಿ? ಯಾರು ಅಂತಹ ಪ್ರಯತ್ನ ಮಾಡಿದ್ರು? ಎಲ್ಲ ಮಾಹಿತಿ ಮುಂದಿದೆ ನೋಡಿ..

ವಿವಾದ ಮಾಡೋದಕ್ಕೆ ಕಾಲು ಕೆರೆದು ನಿಂತಿದ್ದಾರೆ ತೆಲುಗು ಮೂಲದ ಬಾಲಿವುಡ್ ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ. ಇತ್ತೀಚೆಗೆ 'ಥಗ್ ಲೈಫ್' ಬಿಡುಗಡೆಗೆ ಸಂಬಂದಿಸಿದಂತೆ ಒಂದು ಕಡೆ ಮಾತನ್ನಾಡುತ್ತ 'ಬಾಲಿವುಡ್ ಅಮಿತಾಭ್ ಬಚ್ಚನ್ ಸಿನಿಮಾಗಳನ್ನ ರಿಮೇಕ್ ಮಾಡಿ ಡಾ ರಾಜಕುಮಾರ್ (Dr Rajkumar) ಜನಪ್ರಿಯತೆ ಗಳಿಸಿಕೊಂಡ್ರು' ಅನ್ನೋ ಹೇಳಿಕೆ ಕೊಟ್ಟಿದ್ದರು. ಅದನ್ನು ಖಂಡಿಸಿ ಫಿಲ್ಮ್ ಚೇಂಬರ್ ನಲ್ಲಿ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಅದೇ ವೇಳೆ, ರಾಮ್ ಗೋಪಾಲ್ ವರ್ಮಾರನ್ನು ಅಲಕ್ಷ್ಯ ಮಾಡೋದು ಬೆಟರ್ ಅನ್ನೋ ನಿರ್ಧಾರವನ್ನೂ ಮಾಡಲಾಗಿದೆ.

'ರಾಮ್ ಗೋಪಾಲ್ ವರ್ಮಾಗೆ ಧಿಕ್ಕಾರ' ಎಂದು ಟಿ ಸಿ ವೆಂಕಟೇಶ್ ಹಾಗೂ ಗಜಾನಂದ್ ಅಂಡ್ ಟೀಮ್ ಕೂಗಿದೆ. 'ಅಣ್ಣಾವ್ರ ಬಗ್ಗೆ ಸಿಕ್ಕಿ ಸಿಕ್ಕಿದವರೆಲ್ಲ ಮಾತಾಡೋದು ತಪ್ಪು. ಅಂಥವರ ಮೇಲೆ ಕ್ರಮ ಆಗ್ಬೇಕು. ಅಮಿತಾಭ್ ಅವರ ನಟನೆಯಲ್ಲಿ ಮೂಡಿ ಬಂದಿರೋ ಸಿನಿಮಾವನ್ನು 'ಅದೇ ಕಣ್ಣು' ಹೆಸರಿನಲ್ಲಿ ರಿಮೇಕ್ ಮಾಡಿದ್ದು ಬಿಟ್ಟರೆ, ಬೇರೆ ಯಾವುದೇ ಅಮಿತಾಭ್ ರೀಮೇಕ್‌ನಲ್ಲಿ ಡಾ ರಾಜ್‌ಕುಮಾರ್ ಅವರು ನಟಿಸಲೇ ಇಲ್ಲ'. ಜೊತೆಗೆ, 'ಅಣ್ಣಾವ್ರ ತರ ಕಾದಂಬರಿ ಆಧಾರಿತ ಸಿನಿಮಾಗಳು ಮಾಡಿಲ್ಲ, ಬರೀ ಕಮರ್ಷಿಯಲ್ ಸಿನಿಮಾಗಳನ್ನ ಮಾಡಿ ಅವ್ರ ಬಗ್ಗೆ ಮಾತಾಡೋ ಅಷ್ಟು ಯೋಗ್ಯತೇನೆ ಇಲ್ಲ' ಎಂದು ಟಿ ಸಿ ವೆಂಕಟೇಶ್ ಹೇಳಿದ್ದಾರೆ.

ಇನ್ನು ಈ ಬಗ್ಗೆ ಫಿಲ್ಮ್ ಛೇಂಬರ್ ಅಧ್ಯಕ್ಷ ನರಸಿಹುಲು ಹೇಳಿಕೆ ನೀಡಿದ್ದಾರೆ. 'ಡಾ . ರಾಜ್ ಬಗ್ಗೆ ಕೋಟಿ ಕೋಟಿ ಜನರು ಅಭಿಮಾನ ಇಟ್ಕೊಂಡಿದ್ದಾರೆ. ಈ ರಾಮ್‌ ಗೋಪಾಲ್ ವರ್ಮಾ (ಆರ್‌ಜಿವಿ) ಒಬ್ಬ ಹುಚ್ಚ. ತೆಲುಗು, ಹಿಂದಿ ಸಿನಿಮಾದವರು ಅವರನ್ನು ದೂರ ಇಟ್ಟಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟಾದಾಗಿ ಮಾತಾಡೋ ಮೂಲಕ ಕಾಂಟ್ರವರ್ಸಿ ಮಾಡ್ಕೊಂಡಿದ್ದಾರೆ.

ಆರ್ ಜಿ ವಿ ಒಬ್ಬ ಕಾಂಟ್ರವರ್ಸಿ ಪುರುಷ ಹಾಗೂ ನಿರ್ದೇಶಕ. ಅಂಥವರ ಬಗ್ಗೆ ಮಾತಾಡಿ ಅವರನ್ನು ದೊಡ್ಡ ವ್ಯಕ್ತಿ ಮಾಡೋದು ಬೇಡ. ಸದ್ಯ ರಾಮ್ ಗೋಪಾಲ್ ವರ್ಮಾ ಅವರನ್ನು ಚಿತ್ರ ರಂಗ ದೂರವಿಟ್ಟಿದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ ವಿವಾದ ಆಗಲಿದ್ದ ಈ ಸಂಗತಿಗೆ ಫಿಲಂ ಚೇಂಬರ್ 'ಫುಲ್ ಸ್ಟಾಪ್' ಇಟ್ಟಿದೆ ಎನ್ನಬಹುದು. ಸದ್ಯ ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ಸಂಚಲನ ಸೃಷ್ಟಿಸಿದೆ.