ಹೀರೋ ಶಶಿಕುಮಾರ್ ಹಾಡನ್ನು ಎಸ್‌ಪಿಬಿ ಹಾಡುವುದೆಂದು ನಿರ್ಧರಿಸಲಾಯಿತು. ಆದರೆ, ಎಸ್‌ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್‌ಕುಮಾರ್. ಆದರೆ, ಹಾಡಲು ಅಣ್ಣಾವ್ರು..
ಕನ್ನಡದ ಮೇರು ನಟ, ಪದ್ಮಭೂಷಣ ಡಾ ರಾಜ್‌ಕುಮಾರ್ (Dr Rajkumar) ಅವರ ಅದ್ಭುತ ಗಾಯನ ಪ್ರತಿಭೆಯ ಬಗ್ಗೆ ಎಲ್ಲರಿಗೂ ಗೊತ್ತು. ಹಾಗೇ, ಎಸ್‌ಪಿ ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರ ಕಂಠಸಿರಿ ಹಾಗೂ ದೈತ್ಯ ಪ್ರತಿಭೆ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ. ಎಸ್‌ಪಿಬಿ ನಟಿಸಿದ್ದ ‘ಮುದ್ದಿನ ಮಾವ’ ಚಿತ್ರಕ್ಕಾಗಿ ರಾಜ್‌ಕುಮಾರ್ ಅವರು ಹಾಡಿದ್ದರು. ಅದ್ಯಾಕೆ ಆ ಚಿತ್ರದಲ್ಲಿ ಎಸ್‌ಪಿಬಿ ಪಾತ್ರಕ್ಕೆ ಡಾ ರಾಜ್‌ಕುಮಾರ್ ಹಾಡಿದ್ದರು ಗೊತ್ತಾ? ಎಸ್‌ಪಿಬಿ ಅವರೇ ಸ್ವತಃ ತಮ್ಮ ಪಾತ್ರದ ಹಾಡನ್ನು ರಾಜ್‌ಕುಮಾರ್ ಹಾಡಬೇಕೆಂದು ಬಯಸಿದ್ದರು. ಅದಕ್ಕೇ ಅಣ್ಣಾವ್ರು ಹಾಡಿದ್ದರು.
ಆದರೆ, ಸ್ವತಃ ಡಾ ರಾಜ್‌ಕುಮಾರ್ ಅವರಿಗೆ, ತಾವು ಹಾಡಿದ ಬಳಿಕ, ಆ ಹಾಡು ಜನರಿಗೆ ಇಷ್ಟವಾಗುತ್ತದೆಯೇ ಎಂಬ ಆತಂಕ ಇತ್ತು. ಈ ಮಾತನ್ನು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆ ಸುದ್ದಿ ಸ್ವತಃ ಎಸ್‌ಪಿಬಿ ಅವರಿಗೂ ತಲುಪಿತ್ತು. ರಾಜ್‌ಕುಮಾರ್ ಕಂಠ ಸಿರಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಅದ್ಭುತವಾಗಿ ಹಾಡುತ್ತಿದ್ದರು. ಅವರ ಕಂಠದಿಂದ ಮೂಡಿ ಬಂದ ಹಾಡನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಾಗೂ, ಇದಕ್ಕೆ ಅವರಿಗೆ ಅವಾರ್ಡ್ಗಳೂ ಕೂಡ ಸಂದಿವೆ. ಒಮ್ಮೆ ಎಸ್‌ಪಿಬಿ ನಟಿಸಿದ್ದ ಸಿನಿಮಾಗಾಗಿ ರಾಜ್‌ಕುಮಾರ್ ಹಾಡಿದ್ದರು.
ಈ ಘಟನೆಯನ್ನು ಎಸ್‌ಪಿಬಿ ಅವರು ಅಂದೊಂದು ದಿನ ನೆನಪಿಸಿಕೊಂಡಿದ್ದರು. ಬಾಲಸುಬ್ರಮಣ್ಯಂ ಅವರ ಜನ್ಮದಿನದ ಸಂದರ್ಭದಲ್ಲಿ ಆ ಘಟನೆಯನ್ನು ನೆನಪಿಸಿಕೊಳ್ಳೋಣ. ಎಸ್‌ಪಿಬಿ ಹಾಗೂ ಶಶಿಕುಮಾರ್ ನಟನೆಯ 'ಮುದ್ದಿನ ಮಾವ' ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಶಶಿಕುಮಾರ್ ಮಾವನ ಪಾತ್ರದಲ್ಲಿ ಎಸ್‌ಪಿಬಿ ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ಈ ಚಿತ್ರದ ತೂಕ ಹೆಚ್ಚಲು ರಾಜ್‌ಕುಮಾರ್ ಹಾಡೂ ಕೂಡ ಕಾರಣ ಆಯಿತು. ಈ ಸಿನಿಮಾಗಾಗಿ ರಾಜ್‌ಕುಮಾರ್ ಅವರು ‘ದೀಪಾವಳಿ.. ದೀಪಾವಳಿ..’ ಹಾಡು ಹಾಗೂ ‘ಶಿವನೆ..’ ಹಾಡನ್ನು ಹಾಡಿದ್ದರು.
ಹೀರೋ ಶಶಿಕುಮಾರ್ ಹಾಡನ್ನು ಎಸ್‌ಪಿಬಿ ಹಾಡುವುದೆಂದು ನಿರ್ಧರಿಸಲಾಯಿತು. ಆದರೆ, ಎಸ್‌ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್‌ಕುಮಾರ್. ಆದರೆ, ಹಾಡಲು ಅವರು ಒಪ್ಪಬೇಕಲ್ಲ..! ಇದೇ ಅಂಜಿಕೆಯಲ್ಲಿ ಚಿತ್ರತಂಡದವರು ರಾಜ್‌ಕುಮಾರ್ ಅವರನ್ನು ಸಂಪರ್ಕಿಸಿದರು.
ಎಸ್‌ಪಿಬಿ ಅವರು ರಾಘವೇಂದ್ರ ರಾಜ್‌ಕುಮಾರ್ ಬಳಿ ತಮ್ಮ ಇಂಗಿತ ಹೊರಹಾಕಿದರು. ಅವರು ಹೋಗಿ ರಾಜ್‌ಕುಮಾರ್ ಬಳಿ ಈ ವಿಚಾರ ಹೇಳಿದರು. ಇದನ್ನು ಕೇಳಿದ ರಾಜ್‌ಕುಮಾರ್ ಅವರು 'ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ' ಅಂತ ಕೇಳಿದ ಹಾಗಾಯ್ತು ಎಂದು ಹೇಳಿಕೊಂಡಿದ್ದರಂತೆ.
ಹಾಡು ಹಾಡಿದ ಬಳಿಕ ಚಿತ್ರತಂಡಕ್ಕೆ ರಾಜ್‌ಕುಮಾರ್ ಕರೆ ಮಾಡಿ ಹಾಡು ಹೇಗಿದೆ? ಎಲ್ಲಾದರೂ ತಪ್ಪಾಗಿದೆಯಾ? ಎಂದೆಲ್ಲ ಕೇಳಿದ್ದರಂತೆ. ಡಾ ರಾಜ್‌ಕುಮಾರ್ ಅವರು ತಾವು ಗಾಯಕರಾಗಿದ್ದೂ ಸಹ ತಮಗಿಂತ ಖ್ಯಾತ ಗಾಯಕರಾಗಿದ್ದ ಎಸ್‌ಪಿಬಿ ಅವರ ಪಾತ್ರಕ್ಕೆ ಹಾಡಿದ್ದರಿಂದ ಜನರು ಇದ್ದನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಭಯ ಅವರಿಗೆ ಇತ್ತು. ಈ ಘಟನೆಯನ್ನು ಎಸ್‌ಪಿಬಿ ಅವರು ಈ ಮೊದಲು ನೆನಪಿಸಿಕೊಂಡಿದ್ದರು.
ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರು ಹಲವು ಭಾಷೆಗಳಲ್ಲಿ ಹಾಡಿರುವ ಒಟ್ಟೂ 50 ಸಾವಿರಕ್ಕೂ ಹಾಡಿರುವ ಹಾಡುಗಳ ಸಂಖ್ಯೆ ಗಿನ್ನಿಸ್ ದಾಖಲೆ ಸೇರಿದೆ. ಅವರಿಗೆ ಇಂದು (ಜೂನ್ 4) ಜನ್ಮದಿನ. ಎಸ್‌ಪಿಬಿ ಅವರ ಹುಟ್ಟುಹಬ್ಬದ ಈ ದಿನ ಅವರ ಹಾಡುಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಎಸ್‌ಪಿಬಿ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇತ್ತು.
