ರಾಜ್-ವಿಷ್ಣು ಜಗಳಕ್ಕೆ 'ಗಂಧದ ಗುಡಿ'ಯೇ ಮೂಲ. ರಾಜ್ ನಾಯಕನಾಗಿ ನಿರ್ಧಾರವಾಗಿದ್ದರಿಂದ ವಿಷ್ಣುವರ್ಧನ್ ಖಳನ ಪಾತ್ರ ಮಾಡಿದರು ಎಂದು ನಿರ್ಮಾಪಕರು ಸ್ಪಷ್ಟಪಡಿಸಿದ್ದಾರೆ. ಆದರೆ, ಉದ್ದೇಶಪೂರ್ವಕವಾಗಿ ವಿಷ್ಣುವನ್ನು ಖಳನನ್ನಾಗಿ ಮಾಡಲಾಯಿತು ಎಂಬ ವದಂತಿ ಹಬ್ಬಿತ್ತು. ಚಿತ್ರೀಕರಣದ ಗುಂಡಿನ ಘಟನೆಯೂ ವಿವಾದಕ್ಕೆ ಕಾರಣವಾಯಿತು. ಇದರಿಂದ ವಿಷ್ಣು ಜೀವನಪರ್ಯಂತ ರಾಜ್ ಅಭಿಮಾನಿಗಳ ದ್ವೇಷ ಅನುಭವಿಸಬೇಕಾಯಿತು.
ಡಾ ರಾಜ್‌ಕುಮಾರ್ ಹಾಗು ವಿಷ್ಣುವರ್ಧನ್ ಅವರಿಬ್ಬರೂ ಕೂಡ ಕನ್ನಡದ ಮೇರು ನಟರೇ. ಅವರಿಬ್ಬರ ಕಾಲಘಟ್ಟ ನಿಜವಾಗಿಯೂ ಬೇರೆಬೇರೆ. ವಿಷ್ಣುವರ್ಧನ್ (Vishnuvardhan) ಚಿತ್ರರಂಗಕ್ಕೆ ಬರುವಷ್ಟರಲ್ಲೇ ಡಾ ರಾಜ್‌ಕುಮಾರ್ (Dr Rajkumar) ಅವರು 150 ಸಿನಿಮಾಗಳನ್ನು ಮುಗಿಸಿದ್ದರು. ಅವರಿಬ್ಬರಿಗೂ ವಯಸ್ಸಿನಲ್ಲಿ ಕೂಡ ಬಹಳಷ್ಟು ಅಂತರವಿತ್ತು. ಆದರೂ ಕನ್ನಡ ಚಿತ್ರರಂಗವೂ ಸೇರಿದಂತೆ, ಅಭಿಮಾನಿಗಳು ಹಾಗೂ ಪ್ರೇಕ್ಷಕವರ್ಗ ಕೂಡ ಅವರಿಬ್ಬರ ಮಧ್ಯೆ ಹೋಲಿಕೆ ಮಾಡಿ ಜಗಳ, ಮನಸ್ತಾಪ ಕಾಣಲು ಕಾರಣವಾಯಿತು. ಡಾ ರಾಜ್ ಹಾಗೂ ವಿಷ್ಣು ಅವರಿಬ್ಬರ ಮಧ್ಯೆ ನಿಜವಾಗಿಯೂ ವಾರ್ ಇರಲಿಲ್ಲ. ಆದರೆ, ಅವರಿಬ್ಬರ ಅಭಿಮಾನಿಗಳ ಮಧ್ಯೆ ನಿಜವಾಗಿಯೂ ವಾರ್ ಇತ್ತು ಅಂತಾರೆ ಅವರಿಬ್ಬರನ್ನು ಹಾಗೂ ಆ ಕಾಲದಲ್ಲಿ ಜೀವಿಸಿರುವ ಹಿರಿಯರು.
ಹಾಗಿದ್ದರೆ, ಡಾ ರಾಜ್‌ಕುಮಾರ್ ಹಾಗು ವಿಷ್ಣುವರ್ಧನ್ ಅಭಿಮಾನಿಗಳ ಮಧ್ಯೆ ಮನಸ್ತಾಪಕ್ಕೆ ಕಾರಣವಾದ ಅಂಶ ನಿಜವಾಗಿಯೂ ಯಾವುದು ಎಂದರೆ, ಅದು 'ಗಂಧದ ಗುಡಿ' ಸಿನಿಮಾ ಎಂಬುದು ಬಹುತೇಕ ಎಲ್ಲರ ಅಭಿಪ್ರಾಯ. ಆ ಚಿತ್ರದಲ್ಲಿ ನಟ ಡಾ ರಾಜ್‌ಕುಮಾರ್ ಅವರು ಹೀರೋ ಆಗಿ ನಟಿಸಿದರೆ ಡಾ ವಿಷ್ಣುವರ್ಧನ್ ಅವರು ವಿಲನ್ ಆಗಿ ನಟಿಸಿದ್ದರು. ಆದರೆ, ಆ ಚಿತ್ರದಲ್ಲಿ ಡಾ ರಾಜ್ ಅವರೇ ಹೀರೋ ಆಗಲು, ವಿಷ್ಣುವರ್ಧನ್ ಅವರೇ ವಿಲನ್ ಆಗಲು ಕಾರಣವೇನಿತ್ತು ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಅದಾಗಲೇ ನಾಗರಹಾವು ಚಿತ್ರದ ಮೂಲಕ ಕನ್ನಡದಲ್ಲಿ ಸ್ಟಾರ್ ಹೀರೋ ಆಗಿ ಉದಯಿಸಿದ್ದ ನಟ ವಿಷ್ಣುವರ್ಧನ್ ಅವರನ್ನು ಗಂಧದ ಗುಡಿ ಚಿತ್ರಕ್ಕೆ ನಾಯಕರನ್ನಾಗಿ ಮಾಡಿಕೊಳ್ಳಬಹುದಿತ್ತು. ಆದರೆ, ಆ ಚಿತ್ರಕ್ಕೆ ಡಾ ರಾಜ್‌ಕುಮಾರ್ ಅವರನ್ನೇ ಹೀರೋ ಮಾಡಿ ವಿಷ್ಣುವರ್ಧನ್ ಅವರನ್ನು ಯಾಕೆ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ಬಗ್ಗೆ ಸ್ವತಃ ಆ ಚಿತ್ರದ ನಿರ್ಮಾಪಕರಾದ ಎಂ ಪಿ ಶಂಕರ್ ಅವರೇ ಅಂದು ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದರು. ಹಾಗಿದ್ದರೆ ಅವರೇನು ಹೇಳಿದ್ದರು? ಇಲ್ಲಿದೆ ನೋಡಿ ಮಾಹಿತಿ..
ಹೌದು, ಅಂದು ಗಂಧದ ಗುಡಿ ಚಿತ್ರದ ನಿರ್ಮಾಪಕರಾದ ಎಂ ಪಿ ಶಂಕರ್ ಅವರನ್ನು 'ಡಾ ರಾಜ್‌ಕುಮಾರ್ ಅವರೇ ನಿಮ್ಮ ಗಂಧದ ಗುಡಿ ಚಿತ್ರಕ್ಕೆ ಹೀರೋ ಆಗಿದ್ದು ಯಾಕೆ? ಉದಯೋನ್ಮುಖ ನಟ ವಿಷ್ಣುವರ್ಧನ್ ಅವರಿಗೆ ಅಥವಾ ಹೊಸಬರಿಗೆ ಅವಕಾಶ ನೀಡಬಹುದಿತ್ತಲ್ಲ!' ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಹೇಳಲೇ ಬೇಡವೋ ಎಂಬಂತೆ ಎಂಪಿ ಶಂಕರ್ ಅವರೇ ಉತ್ತರಿಸಿದ್ದರು. 'ನಾವು ಗಂಧದ ಗುಡಿ ಸಿನಿಮಾ ಕಥೆ ಮಾಡುವಾಗಲೇ ಈ ಪಾತ್ರಕ್ಕೆ ಡಾ ರಾಜ್‌ಕುಮಾರ್ ಅವರೇ ಸೂಕ್ತ ಎಂದು ತೀರ್ಮಾನಿಸಿ ಆಗಿತ್ತು. ನಾಯಕರು ಅದಾಗಲೇ ಫಿಕ್ಸ್ ಆಗಿದ್ದರು. ನಟ ವಿಷ್ಣುವರ್ಧನ್ ಅವರು ಆಗಷ್ಟೇ ಚಿತ್ರರಂಗಕ್ಕೆ ಬಂದು ಹುಡುಗಾಟದ ಹುಡುಗ ಎಂಬಂತಿದ್ದರು. ಆದರೆ, ವಿಲನ್ ಪಾತ್ರಕ್ಕೆ ಯಂಗ್ ಅಂಡ್ ಎನರ್ಜಿಟಿಕ್ ನಟನ ಅಗತ್ಯವಿತ್ತು. ಹೀಗಾಗಿ ಆ ಪಾತ್ರಕ್ಕೆ ವಿಷ್ಣುವರ್ಧನ್ ಬಂದರು' ಎಂದಿದ್ದರು.
ನಿರ್ಮಾಪಕರೇ ಆ ಬಗ್ಗೆ ಹೇಳಿದ್ದಾರೆ ಎಂದ ಮೇಲೆ ಗಂಧದ ಗುಡಿ ಚಿತ್ರಕ್ಕೆ ಯಾಕೆ ವಿಷ್ಣುವರ್ಧನ್ ಹೀರೋ ಆಗಲಿಲ್ಲ ಎಂಬುದಕ್ಕೆ ಉತ್ತರ ಸಿಕ್ಕಿದೆ. ಆದರೆ, ಅಂದು ಕೆಲವರು ಮಾತ್ರ ಹೇಳುವ ಕಥೆ ಬೇರೆಯೇ ಇದೆ. 'ಡಾ ರಾಜ್‌ಕುಮಾರ್ ಎದುರು ವಿಷ್ಣುವರ್ಧನ್ ಅವರನ್ನು ಉದ್ದೇಶಪೂರ್ವಕವಾಗಿಯೇ ವಿಲನ್ ಮಾಡಲಾಯ್ತು. ಕನ್ನಡ ಚಿತ್ರರಂಗದಲ್ಲಿ ಆಗಷ್ಟೇ ಉದಯಿಸಿದ ನಟ ವಿಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಅವರಿಗೆ ಪರ್ಯಾಯ ನಾಯಕರಾಗಿ ಬೆಳೆಯಬಾರದು ಎಂಬ ಉದ್ಧೇಶದಿಂದಲೇ ಹೀಗೆ ಮಾಡಲಾಯ್ತು' ಎಂದು ಹಲವರು ಹೇಳುತ್ತಾರೆ.
ಪುಟ್ಟಣ್ಣ ಕಣಗಾಲ್ ಸೇರಿದಂತೆ, ಆಗ ಚಿತ್ರರಂಗದಲ್ಲಿದ್ದ ಕೆಲವರು ವಿಷ್ಣುವರ್ಧನ್ ಅವರಿಗೆ ಡಾ ರಾಜ್‌ಕುಮಾರ್ ಎದುರು ವಿಲನ್ ರೋಲ್ ಮಾಡದಂತೆ, ನಟ ವಿಷ್ಣುವರ್ಧನ್ ಅವರಿಗೆ ಸಲಹೆ ನೀಡಿದ್ದರಂತೆ. ಆದರೆ, ಆಗಷ್ಟೇ ಚಿತ್ರರಂಗಕ್ಕೆ ಬಂದ ವಿಷ್ಣುವರ್ಧನ್ ಅವರಿಗೆ ಆಗ ಅಷ್ಟು ಪ್ರಬುದ್ಧತೆಯಾಗಲೀ, ಆಯ್ಕೆಯ ಜ್ಞಾನವಾಗಲೀ ಇರಲಿಲ್ಲ. ಹೀಗಾಗಿ ಹಲವರ ಸಲಹೆಯನ್ನೂ ಮೀರಿ ನಟ ವಷ್ಣುವರ್ಧನ್ ಅವರು ಡಾ ರಾಜ್‌ಕುಮಾರ್ ಅವರ ಎದುರು ಖಳನಾಯಕರಾಗಿ ನಟಿಸಿಬಿಟ್ಟರು. ಆದರೆ, ಅದೊಂದು ಪಾತ್ರ ಎಂಬುದನ್ನೂ ಅರಿಯದೇ ಡಾ ರಾಜ್‌ಕುಮಾರ್ ಅಭಿಮಾನಿಗಳು ನಟ ವಿಷ್ಣುವರ್ಧನ್ ಅವರನ್ನು ಅಣ್ಣಾವ್ರ ಶತ್ರು ಎಂಬಂತೆ ನೋಡತೊಡಗಿದರು.
ಜೊತೆಗೆ, ಸಿನಿಮಾ ಶೂಟಿಂಗ್‌ನಲ್ಲಿ ಡಾ ರಾಜ್‌ಕುಮಾರ್ ಅವರ ಮೇಲೆ ಹಾರಿಸಲಾದ ಒರಿಜಿನಲ್ ಗುಂಡಿನ ವಿವಾದ ಕೂಡ ನಟ ವಿಷ್ಣುವರ್ಧನ್ ಅವರನ್ನು ಅನಾವಶ್ಯಕವಾಗಿ ಸುತ್ತಿಕೊಂಡು ನಟ ವಿಷ್ಣುವರ್ಧನ್ ಅವರನ್ನು ಸಮಸ್ಯೆಯ ಸುಳಿಯಲ್ಲಿ ಸುತ್ತಿಕೊಂಡಿತು. ಅಲ್ಲಿಂದ ಮುಂದೆ ಜೀವನಪರ್ಯಂತ ನಟ ವಿಷ್ಣುವರ್ಧನ್ ಅವರು ಆ 'ಗಂಧದ ಗುಡಿ' ಚಿತ್ರದ ವಿವಾದ ಹಾಗೂ ವಿಲನ್ ರೋಲ್ ಮಾಡಿದ ಕಾರಣಕ್ಕೆ ಡಾ ರಾಜ್‌ಕುಮಾರ್ ಅಭಿಮಾನಿಗಳಿಂದ ದ್ವೇಷ ಎದುರಿಸಬೇಕಾಯ್ತು. ರೀಲ್‌ನಲ್ಲಿ ಪಾತ್ರ ಮಾಡಿ ರಿಯಲ್‌ನಲ್ಲಿ ಪ್ರಾಬ್ಲಂ ಅನುಭವಿಸಿದ ನಟ ವಿಷ್ಣುವರ್ಧನ್ ಅವರು ದುರಂತ ನಾಯಕ ಎನ್ನಬಹುದು!


