ಕರ್ಣ ಸೀರಿಯಲ್ನಲ್ಲಿ ನಿತ್ಯಾ ಪಾತ್ರ ಅಂತ್ಯಕಂಡಿದ್ದು, ಇದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಸಾವನ್ನು ನೆನಪಿಸಿದೆ. ನಟಿ ನಮ್ರತಾ ಗೌಡ ಅಸಮಾಧಾನದಿಂದ ಪ್ರಾಜೆಕ್ಟ್ನಿಂದ ಹೊರಬಂದ ಕಾರಣ ಕಥೆಯಲ್ಲಿ ಈ ಹಠಾತ್ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಕರ್ಣ ಸೀರಿಯಲ್ನಲ್ಲಿ (Karna Serial)ನಲ್ಲಿ ನಿತ್ಯಾ ಸಾವಾಗಿದೆ. ಯಾರೂ ಊಹಿಸದ ರೀತಿಯಲ್ಲಿ ನಿತ್ಯಾಳನ್ನು ಸಾಯಿಸಲಾಗಿದೆ. ಈ ಮೂಲಕ ಪುಟ್ಟಕ್ಕನ ಮಕ್ಕಳು ಸೀರಿಯಲ್ ಅನ್ನು ಕರ್ಣ ಸೀರಿಯಲ್ ನೆನಪಿಸಿದೆ. ಅಲ್ಲಿ ಸ್ನೇಹಾ ಅಲ್ಲಿ ನಿತ್ಯಾ. ಹೌದು. ಕೆಲವೊಮ್ಮೆ ಸೀರಿಯಲ್ನಲ್ಲಿ ಲೀಡ್ ರೋಲ್ ಮಾಡುವವರಿಗಾಗಿ ಕಥೆಯನ್ನೇ ಉಲ್ಟಾ ಮಾಡುವ ಸಾಧ್ಯತೆಯೂ ಇದೆ. ಅದೇ ರೀತಿ ಕರ್ಣ ಸೀರಿಯಲ್ನಲ್ಲಿಯೂ ಆಗಿದೆ ಎನ್ನಲಾಗಿದೆ.
ಪುಟ್ಟಕ್ಕನ ಮಕ್ಕಳು ಸ್ನೇಹಾ
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಶಿಕ್ಷಣದ ಕಾರಣ ಕೊಟ್ಟು ಸೀರಿಯಲ್ ಬಿಟ್ಟು ಹೋಗಿದ್ದರು. ಆ ಬಳಿಕ ಅವರು ಗಂಧದ ಗುಡಿ ಸೀರಿಯಲ್ನಲ್ಲಿ ಕಾಣಿಸಿಕೊಂಡರು. ಆ ಸೀರಿಯಲ್ ಕೂಡ ಬಿಟ್ಟು ಮದುವೆಯಾದರು. ಆದರೆ ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರಧಾರಿಯೇ ನಾಯಕಿ. ಬಡತನದಲ್ಲಿ ಹುಟ್ಟಿ ಹಲವಾರು ಕಷ್ಟ ಸಂಕೋಲೆಗಳನ್ನು ಮೆಟ್ಟಿ ಬಂದು ಡಿಸಿಯಾದ ಗಟ್ಟಿಗಿತ್ತಿ ಸ್ನೇಹಾ ನಿಜ ಬದುಕಿನಲ್ಲಿ ಹಲವರಿಗೆ ಮಾದರಿಯಾಗಿದ್ದಳು. ಆದರೆ ದಿಢೀರನೆ ಆಕೆಯನ್ನು ಸಾಯಿಸುವ ಪರಿಸ್ಥಿತಿ ನಿರ್ದೇಶಕರಿಗೆ ಬಂತು. ಅದಕ್ಕೆ ಕಾರಣ, ನಟಿ ಸ್ನೇಹಾ ಬುರ್ಲಿ (Sneha Burli) ಸೀರಿಯಲ್ ಬಿಟ್ಟು ಹೋಗಿರುವುದು.
ಇದೀಗ ಕರ್ಣ ಸೀರಿಯಲ್ನಲ್ಲಿಯೂ ಅದೇ ರೀತಿ ಆಗಿದೆ. ನಿತ್ಯಾ ಪಾತ್ರ ಇನ್ನೂ ಇತ್ತು ಎನ್ನಲಾಗಿದೆ. ಆದರೆ ನಿತ್ಯಾ ಪಾತ್ರದ ಬಗ್ಗೆ ನಟಿ ನಮ್ರತಾ ಗೌಡ (Namratha Gowda) ಅವರಿಗೆ ಅಸಮಾಧಾನ ಉಂಟಾಗಿತ್ತು. ಈ ಪಾತ್ರವು ಸಕತ್ ಸ್ಟ್ರಾಂಗ್ ಎಂದು ಬಿಂಬಿಸಲಾಗಿತ್ತು. ಆದರೆ ಕೊನೆಯಲ್ಲಿ ತಮಗೆ ಹೇಳಿದ್ದೇ ಒಂದು, ಅಲ್ಲಿ ಪಾತ್ರವೇ ಇನ್ನೊಂದು ಆಗಿರುವ ಕಾರಣ, ನಾನು ಒಳ್ಳೆಯ ರೀತಿಯಲ್ಲಿ ಪ್ರಾಜೆಕ್ಟ್ನಿಂದ ಹೊರಬಂದೆ ಎಂದು ನಟಿ ನಮ್ರತಾ ಗೌಡ ಈಚೆಗೆ ಹೇಳಿಕೊಂಡಿದ್ದರು.
ನಿತ್ಯಾ ಪಾತ್ರ ಸಾವಿಗೆ ಕಾರಣ
ಇದೇ ಕಾರಣಕ್ಕೆ ಆ ಪಾತ್ರವನ್ನೇ ಸಾಯಿಸಲಾಗಿದ್ದು, ಪುಟ್ಟಕ್ಕನ ಮಕ್ಕಳು ಸೀರಿಯಲ್ ನೆನಪು ಮಾಡಿದೆ. ನಮ್ರತಾ ಗೌಡ ಕ್ಯಾರೆಕ್ಟರ್ ಆರಂಭದಲ್ಲಿ ಎಲ್ಲರೂ ದ್ವೇಷಿಸುತ್ತಿದ್ದರು. ಒಳ್ಳೆಯ ಕರ್ಣನನ್ನು ನಿತ್ಯಾ ದ್ವೇಷಿಸುತ್ತಿದ್ದ ಪರಿಗೆ ಖುದ್ದು ನಮ್ರತಾ ಗೌಡ ಅವರ ಮೇಲೆಯೇ ಅಭಿಮಾನಿಗಳು ಹರಿಹಾಯ್ದದ್ದೂ ಇದೆ. ಇದನ್ನು ಕೇವಲ ಒಂದು ಕ್ಯಾರೆಕ್ಟರ್ ಆಗಿ ನೋಡದೇ ನಿಜ ಜೀವನದ ರೀತಿಯಲ್ಲಿ ನಟಿ ನಮ್ರತಾ ಗೌಡ ಅವರಿಗೆ ಸಿಕ್ಕಾಪಟ್ಟೆ ಕೆಟ್ಟ ಮೆಸೇಜ್ ಬರ್ತಿರುವ ಬಗ್ಗೆ ಆ ನಟಿ ನೊಂದು ನುಡಿದಿದ್ದರು. ಕೊನೆಗೆ ನಮ್ರತಾ ಗೌಡ ಕ್ಯಾರೆಕ್ಟರ್ ಬದಲಾಯಿತು. ಕರ್ಣನ ಅಸಲಿಯತ್ತು ತಿಳಿದು ನಿತ್ಯಾ ಒಳ್ಳೆಯವಳಾದ ಎಲ್ಲರೂ ನಿತ್ಯಾಳನ್ನು ಪ್ರೀತಿಸುತ್ತಿದ್ದರು. ಆದರೆ ಬರಬರುತ್ತಾ ಈ ಪಾತ್ರವನ್ನು ಡಮ್ಮಿ ಮಾಡಿದ್ದು, ಖುದ್ದು ನಮ್ರತಾ ಗೌಡ ಅವರ ಫ್ಯಾನ್ಸ್ಗೂ ಬೇಸರ ತರಿಸಿತ್ತು. ಒಟ್ಟಿನಲ್ಲಿ ಈಗ ಕಥೆಯನ್ನೇ ಬದಲು ಮಾಡಲಾಗಿದೆ ಎನ್ನಲಾಗಿದೆ.














