ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರ ಅಂತ್ಯಗೊಂಡಂತೆ ತೋರುತ್ತಿದೆ. ನಯನತಾರಾ ಕಳುಹಿಸಿದ ರೌಡಿಗಳಿಂದ ದಾಳಿಗೊಳಗಾದ ನಿತ್ಯಾ, ತನ್ನ ಮಗುವನ್ನು ಕರ್ಣನಿಗೆ ಒಪ್ಪಿಸಿ ಉಸಿರು ಚೆಲ್ಲುವ ದೃಶ್ಯವಿದೆ. ನಟಿ ನಮ್ರತಾ ಗೌಡ ಈ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಕರ್ಣ ಸೀರಿಯಲ್ (Karna Serial)ನಲ್ಲಿ ಇದೀಗ ಯಾರೂ ಊಹಿಸದ ಹಾಗೂ ಯಾರಿಗೂ ಬೇಡವಾಗಿರುವ ಟ್ವಿಸ್ಟ್ ಸಿಕ್ಕಿದೆ.ಅದು ನಿತ್ಯಾ ಸಾಯುವಂತೆ ತೋರಿಸಲಾಗಿದೆ. ಕರ್ಣನ ಅಮ್ಮನ ರಹಸ್ಯ ಹಾಗೂ ತನ್ನ ತಂದೆ-ತಾಯಿಯನ್ನು ಕೊಂದವರ ರಹಸ್ಯ ಆಕೆಗೆ ತಿಳಿದಿತ್ತು. ಆದರೆ ಇದಕ್ಕೆಲ್ಲಾ ಕಾರಣ ಆಗಿರೋ ನಯನತಾರಾಗೆ ಆಕೆ ಕಾಲ್ ಮಾಡಿ, ವಿಷಯ ತಿಳಿಸಿ ಬಿಟ್ಟಿದ್ದಳು.ಅಲ್ಲಿಗೆ ನಿತ್ಯಾ ತನ್ನ ಸಾವನ್ನು ತಾನೇ ತಂದುಕೊಂಡಿದ್ದಳು. ಈ ವಿಷ್ಯ ಕರ್ಣ, ನಿಧಿ ಸೇರಿ ಉಳಿದವರಿಗೆ ತಿಳಿಯುವಮೊದಲೇ ರೌಡಿಗಳನ್ನು ಬಿಟ್ಟು ನಯನತಾರಾ ಎಲ್ಲರನ್ನೂ ಮುಗಿಸಲು ಹೊಂಚು ಹಾಕಿದಳು.
ಅದೃಷ್ಟಕ್ಕೆ ಎಲ್ಲರೂ ಪ್ರಾಣಾಪಾಯದಿಂದ ಪಾರಾದರು. ತುಂಬು ಗರ್ಭಿಣಿಯಾಗಿರುವ ನಿತ್ಯಾ, ಮಗುವನ್ನು ಕರ್ಣನ ಕೈಗೆ ಇತ್ತು ಸಾಯುವ ದೃಶ್ಯದಂತೆ ತೋರಿಸಲಾಗಿದೆ. ಅಷ್ಟಕ್ಕೂ ಇದಕ್ಕೂ ಮೊದಲೇ ನಿತ್ಯಾ, ತನಗೇನಾದರೂ ಆದರೆ ನನ್ನ ಕಂದನ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಎಂದು ಕರ್ಣನಿಂದ ಭಾಷೆಯನ್ನೂ ತೆಗೆದುಕೊಂಡಿದ್ದಳು. ಆದರೆ, ಆಕೆ ಸಾಯುವುದಿಲ್ಲ ಎಂದೇ ಹೇಳಲಾಗಿತ್ತು. ಆದರೆ ಸದ್ಯ ಬಿಡುಗಡೆಯಾಗಿರುವ ಪ್ರೊಮೋದ ಪ್ರಕಾರ, ನಿತ್ಯಾ ಸಾಯುವ ಹಾದಿಯಲ್ಲಿ ಇದ್ದಾಳೆ. ಆಸ್ಪತ್ರೆಯಲ್ಲಿ ಹಾಕಿರುವ ಭುವನೇಶ್ವರಿಯ ಫೋಟೋ ತೋರಿಸಿ, ಅವಳೇ ನಿನ್ನ ಅಮ್ಮ ಅರ್ಥಾತ್ ಭುವನೇಶ್ವರಿಯೇ ನಿನ್ನ ಅಮ್ಮ ಎಂದು ಹೇಳಲು ಟ್ರೈ ಮಾಡಿದ್ದಾಳೆ ನಿತ್ಯಾ. ಆದರೆ ಅಲ್ಲಿಗೆ ಆಕೆ ಕೊನೆಯುಸಿರು ಎಳೆದಂತೆ ತೋರಿಸಲಾಗಿದೆ.
ನಟಿ ನಮ್ರತಾ ಗೌಡ ಅಸಮಾಧಾನ
ಅಸಲಿಗೆ ನಿತ್ಯಾ ಪಾತ್ರಧಾರಿಯಾಗಿರುವ ನಮ್ರತಾ ಗೌಡ (Namratha Gowda) ಈಚೆಗೆ ಸಂದರ್ಶನವೊಂದರಲ್ಲಿ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ಹೇಳಿಕೊಂಡಿದ್ದರು. ಕರ್ಣ ಸೀರಿಯಲ್ ಹೆಸರನ್ನು ನೇರವಾಗಿ ಎಲ್ಲಿಯೂ ನಮ್ರತಾ ಗೌಡ ಅವರು ತೆಗೆದುಕೊಂಡಿರಲಿಲ್ಲ. ಆದರೆ ನಿತ್ಯಾ ಪಾತ್ರ ಈ ರೀತಿ ಇರುತ್ತದೆ ಎಂದು ಅಂದುಕೊಂಡಿರಲಿಲ್ಲ. ನನಗೆ ಕಥೆ ಹೇಳಿದಾಗ ಅದು ಬೇರೆಯ ರೀತಿ ಇತ್ತು. ಅದು ಸ್ಟ್ರಾಂಗ್ ಪಾರ್ಟ್ ಆಗಿತ್ತು. ಅದಕ್ಕೇ ನಾನು ಒಪ್ಪಿಕೊಂಡಿದ್ದೆ. ಆದರೆ ಜನರಿಗೆ ಬೇಕಾದ ರೀತಿಯಲ್ಲಿ ಕಥೆ ಬದಲಾಗುತ್ತಾ ಹೋಗುತ್ತದೆ. ನನಗೆ ಹೇಳಿದ್ದೇ ಒಂದು, ಆ ಬಳಿಕ ಆಗಿದ್ದೇ ಇನ್ನೊಂದು ರೀತಿ ಪಾತ್ರವಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದರು.
ಬೇರೆ ನಟಿ ಬರ್ತಾರಾ?
ಇದೇ ವಿಡಿಯೋದಲ್ಲಿ ನಟಿ, ಕರ್ಣ ಸೀರಿಯಲ್ ಹೆಸರು ಹೇಳದೇ, ನಾನು ಆ ಪ್ರಾಜೆಕ್ಟ್ನಿಂದ ಹೊರಕ್ಕೆ ಬರುತ್ತಿದ್ದೇನೆ. ಸೀರಿಯಲ್ ತಂಡಕ್ಕೆ ತೊಂದರೆ ಆಗದ ರೀತಿಯಲ್ಲಿ, ಎಲ್ಲ ರೀತಿಯಲ್ಲಿ ಸರಿಯಾಗಿ ತಿಳಿಸಿಯೇ ಹೊರಕ್ಕೆ ಬರುತ್ತಿದ್ದೇನೆ ಎಂದಿದ್ದರು. ಅಲ್ಲಿಗೆ ನಿತ್ಯಾ ಪಾತ್ರಕ್ಕೆ ಬೇರೆ ನಟಿ ಎಂಟ್ರಿ ಆಗುವುದು ಖಚಿತ ಎಂದೇ ಎಂದುಕೊಳ್ಳಲಾಗಿತ್ತು. ಆದರೆ, ಇದೀಗ ನಿತ್ಯಾ ಸತ್ತಂತೆ ತೋರಿಸಲಾಗಿದೆ. ಈಗ ಆಕೆಯ ಜಾಗಕ್ಕೆ ಬೇರೆ ನಟಿ ಎಂಟ್ರಿ ಆಗುತ್ತಾರೋ ಅಥವಾ ನಮ್ರತಾ ಗೌಡ ಸೀರಿಯಲ್ ಬಿಟ್ಟು ಹೋಗುತ್ತಿರುವ ಕಾರಣ, ಆ ಪಾತ್ರವನ್ನೇ ಮುಗಿಸುತ್ತಿದ್ದಾರಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.














