- Home
- Entertainment
- TV Talk
- ಮಂಜ ಮನೆಗೆ ಕಾಲಿಟ್ಟ ಮೊದಲ ಟಾಸ್ಕ್ನ್ನೇ ರದ್ದುಗೊಳಿಸಿದ ಬಿಗ್ ಬಾಸ್; ಕಳಿಸಿ ಕರೆಸಿಕೊಳ್ಳೋದು ಬೇಕಿತ್ತಾ?
ಮಂಜ ಮನೆಗೆ ಕಾಲಿಟ್ಟ ಮೊದಲ ಟಾಸ್ಕ್ನ್ನೇ ರದ್ದುಗೊಳಿಸಿದ ಬಿಗ್ ಬಾಸ್; ಕಳಿಸಿ ಕರೆಸಿಕೊಳ್ಳೋದು ಬೇಕಿತ್ತಾ?
ಮಾಡ್ರನ್ ಮಹಾಕವಿ ಮಂಜ ಬಿಗ್ ಬಾಸ್ ಮನೆಗೆ ಸೆಕೆಂಡ್ ಚಾನ್ಸ್ ಮೂಲಕ ವಾಪಸ್ಸಾಗಿದ್ದಾರೆ. ಆದರೆ, ಅವರು ಬಂದ ಮೊದಲ ದಿನವೇ ಯಶಸ್ ಮತ್ತು ಅವರ ನಡುವಿನ ಬಿಗ್ ಬಾಸ್ ಪರಿಷತ್ ಟಾಸ್ಕ್ ರದ್ದಾಗಿದೆ. ನಾಯಕರ ನಡುವೆ ಒಮ್ಮತದ ತೀರ್ಮಾನ ಕೈಗೊಳ್ಳಲು ವಿಫಲರಾದ ಕಾರಣ ಬಿಗ್ ಬಾಸ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಾಡ್ರನ್ ಮಹಾಕವಿ ಮಂಜ ಅವರು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಮನೆಯ ವಾತಾವರಣವನ್ನು ಹಾಳು ಮಾಡಿ, ಬಾಯಿಗೆ ಬಂದಂತೆ ಸಹ ಸ್ಪರ್ಧಿಗಳನ್ನು ಬೈದು ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ಹಾಳೂರಿಗೆ ಉಳಿದೋನೆ ಒಡೆಯ ಎನ್ನುವಂತೆ ಕಲರ್ಸ್ ಕನ್ನಡ ವಾಹಿನಿಯಿಂದ ಪುನಃ ಸೆಕೆಂಡ್ ಚಾನ್ಸ್ ಆಗಿ ಮಂಜನನ್ನು ಮನೆಗೆ ವಾಪಸ್ ಕರೆಸಿಕೊಂಡಿದ್ದಾರೆ. ಮಂಜು 10ಮೇ ವಾರದಲ್ಲಿ ಮನೆಗೆ ಕಾಲಿಡುತ್ತಿದ್ದಂತೆ ಆಡಿದ ಮೊದಲನೇ ಟಾಸ್ಕ್ ರದ್ದುಗೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರದಲ್ಲಿ ಬಿಗ್ ಬಾಸ್ ಪರಿಷತ್ ಚಟುವಟಿಕೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಹಲವು ಟಾಸ್ಕ್ಗಳು ಬರುತ್ತವೆ. ಇದರಲ್ಲಿ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದಿರುವ ಮಾಡ್ರನ್ ಮಹಾಕವಿ ಮಂಜು ಹಾಗೂ ಮನೆಯ ಕ್ಯಾಪ್ಟನ್ ಯಶಸ್ ಕೃಷ್ಣ ಅವರ ನೇತೃತ್ವದಲ್ಲಿ 2 ತಂಡಗಳನ್ನು ರಚನೆ ಮಾಡಲಾಗಿದೆ. ಈ ಪೈಕಿ ಎರಡೂ ತಂಡಳಿಗೆ ಮೊದಲನೆಯ ಟಾಸ್ಕ್ ಆಗಿ ಇಬ್ಬರೂ ನಾಯಕರ (ಮಂಜ ಹಾಗೂ ಯಶಸ್) ದೊಡ್ಡ ಬ್ಯಾನರ್ಗಳನ್ನು ನಿಲ್ಲಿಸಿ ಅದಕ್ಕೆ ಕೆಂಪು ಬಣ್ಣವನ್ನು ಬಳಿಯುವ ಟಾಸ್ಕ್ ಕೊಡಲಾಗುತ್ತದೆ.
ಎದುರಾಳಿ ತಂಡ ತಮ್ಮ ಎದುರಾಳಿ ನಾಯಕನ ಬ್ಯಾನರ್ಗೆ ಕೆಂಪು ಬಣ್ಣವನ್ನು ಬಳಿಯಬೇಕು. ಇದರಲ್ಲಿ ಯಶಸ್ ಮತ್ತು ಮಂಜ ಇಬ್ಬರೂ ಕಟೌಟ್ಗಳಿಗೆ ಮುಖ ಸೇರಿ ಯಾವುದೇ ಭಾಗವೂ ಕಾಣದಂತೆ ಬಣ್ಣವನ್ನು ಬಳೆಯಲಾಗಿದೆ. ಇದರಲ್ಲಿ ಮಂಜನ ಭಾವಚಿತ್ರಕ್ಕೆ ತುಸು ಹೆಚ್ಚಾಗಿಯೇ ಅಂದರೆ ಮುಖ ಹಾಗೂ ದೇಹದ ಭಾಗದಲ್ಲಿ ಎರಡು ಕೋಟಿಂಗ್ ಬಣ್ಣ ಬಳಿಯಲಾಗಿತ್ತು. ಇದರಿಂದ ಮಂಜು ಅವರ ತಂಡ ಸೋಲು ಒಪ್ಪಿಕೊಳ್ಳಬೇಕಿತ್ತು. ಇನ್ನು ಬಿಗ್ ಬಾಸ್ ಈ ಟಾಸ್ಕ್ನ ಫಲಿತಾಂಶವನ್ನು ಘೋಷಣೆ ಮಾಡುವಂತೆ ಟಾಸ್ಕ್ ಉಸ್ತುವಾರಿಗಳಾದ ಮಂಜ ಹಾಗೂ ಯಶಸ್ಗೆ ಸೂಚನೆ ನೀಡುತ್ತಾರೆ.
ಒಮ್ಮತ ಮೂಡದೇ ಟಾಸ್ಕ್ ರದ್ದು
ಈ ಟಾಸ್ಕ್ಗೆ ಉಸ್ತುವಾರಿ ಆಗಿದ್ದ ಯಶಸ್ ಹಾಗೂ ಮಂಜ ಅವರ ಯಾರು ಗೆಲುವು ಸಾಧಿಸಿದ್ದಾರೆ ಎಂಬುದಕ್ಕೆ ಯಾವುದೇ ಒಮ್ಮತ ಮೂಡಲಿಲ್ಲ. ಇಬ್ಬರೂ ವಾದ, ವಾಗ್ವಾದಗಳನ್ನು ಮಾಡುತ್ತಾ ಹೋದರೇ ಹೊರತು ಒಂದು ತೀರ್ಮಾನ ಕೈಗೊಳ್ಳಲಿಲ್ಲ. ಇನ್ನು ಕೂಡಲೇ ಫಲಿತಾಂಶ ಘೋಷಣೆ ಮಾಡುವಂತೆ ಬಿಗ್ ಬಾಸ್ ಕೇಳಿದಾಗ ಇಬ್ಬರೂ ಉಸ್ತುವಾರಿಗಳು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಹೇಳುತ್ತಾರೆ. ಇದರಿಂದ ಕೋಪಗೊಂಡ ಬಿಗ್ ಬಾಸ್ ಆಟವಾಡಿದ ಟಾಸ್ಕ್ ಅನ್ನು ರದ್ದು ಮಾಡಲಾಗಿದೆ ಎಂದು ಘೋಷಣೆ ಮಾಡುತ್ತಾರೆ.
ಒಟ್ಟಾರೆಯಾಗಿ ಮಾಡ್ರನ್ ಮಹಾಕವಿ ಮಂಜನ ಉಸ್ತುವಾರಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಬಹುತೇಕ ಟಾಸ್ಕ್ಗಳಿಗೆ ಸೂಕ್ತ ಫಲಿತಾಂಶವೇ ಸಿಗುವುದಿಲ್ಲ. ಕಾರಣ ಉಸ್ತುವಾರಿಯಾಗಿ ಯಾವುದೇ ತೀರ್ಮಾನ ಕೈಗೊಳ್ಳುವುದಕ್ಕೆ ಸಾಧ್ಯವಾಗದೇ ರದ್ದಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತವೆ. ಈ ಹಿಂದೆ ಲಿಖಿತ್ ಜೊತೆಗೆ ಉಸ್ತುವಾರಿ ಮಾಡಿದ್ದ ಪಂದ್ಯವೂ ರದ್ದಾಗಿತ್ತು. ಈ ಒಂದೇ ಸೀಸನ್ನಲ್ಲಿ ಮಂಜ ಆಟವಾಡಿದ ಎರಡ್ಮೂರು ಟಾಸ್ಕ್ಗಳು ರದ್ದಾಗಿವೆ. ಇದೀಗ 10ನೇ ವಾರದಲ್ಲಿ ಮನೆಗೆ ವಾಪಸ್ ಬಂದ ನಂತರ ಆಡಿಸಲಾದ ಮೊದಲನೇ ಟಾಸ್ಕ್ ಕೂಡ ರದ್ದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













