ಸ್ಯಾಂಡಲ್‌ವುಡ್‌ನ ನವರಸ ನಾಯಕ, ರಾಜಕಾರಣಿ ಜಗ್ಗೇಶ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಕಾಲಿಗೆ ಏಟಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆಯಲಾಗದ ಕಾರಣ, ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. 

ಸ್ಯಾಂಡಲ್‌ವುಡ್‌ನ ನವರಸ ನಾಯಕ, ರಾಜಕಾರಣಿ ಜಗ್ಗೇಶ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಕಾಲಿಗೆ ಏಟಾಗಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆಯಲಾಗದ ಕಾರಣ, ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಿಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ. ನಟ ಜಗ್ಗೇಶ್ ಅವರು ಸಿನಿಮಾ- ರಾಜಕೀಯ ಕ್ಷೇತದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂದಿನ ಕಾವೇರಿ ಹೋರಾಟದಲ್ಲಿ ತಾವ್ಯಾಕೆ ಭಾಗಿಯಾಗಿಲ್ಲ ಎಂಬುದರ ಅಸಲಿ ಸಂಗತಿಯನ್ನ ನಟ ಬಿಚ್ಚಿಟ್ಟಿದ್ದಾರೆ. 

L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಿಲ್ಲ. 2 ವಾರಗಳ ಫಿಸಿಯೋ ಚಿಕಿತ್ಸೆ ಮತ್ತು ಬೆಡ್‌ರೆಸ್ಟ್ ಕಡ್ಡಾಯ ಎಂದು ಡಾಕ್ಟರ್ ಸಲಹೆ ನೀಡಿದ್ದಾರೆ ಎಂದು ಚಿಕಿತ್ಸೆ ಫೋಟೋ ಶೇರ್ ಮಾಡಿ ಅನಾರೋಗ್ಯದ ಬಗ್ಗೆ ಜಗ್ಗೇಶ್ ತಿಳಿಸಿದ್ದಾರೆ. ಇತ್ತೀಚೆಗೆ ನಟ ಜಗ್ಗೇಶ್‌ಗೆ ಕಾಲುಮುರಿದುಕೊಂಡಿರುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. 

ಈರೇಗೌಡನ ಪ್ರೀತಿಯಲ್ಲಿ ಶಕೀಲಾ ಬಾನು: ಬಿಡುಗಡೆಗೆ ರೆಡಿ ಆಗಿದೆ 'ತೋತಾಪುರಿ-2'

ಪಾದದ ಮೂಳೆ ಮುರಿದಿರುವ ವಿಚಾರ ತಿಳಿಸಿದ್ದರು. ಅವರಿನ್ನೂ ಗುಣಮುಖರಾಗಿಲ್ಲ. ಅದಕ್ಕಾಗಿ ಚಿಕಿತ್ಸೆಯಲ್ಲಿರುವ ಸಂಗತಿಯನ್ನ ಇದೀಗ ಮತ್ತೆ ಹಂಚಿಕೊಂಡಿದ್ದಾರೆ. ಕಾವೇರಿ ನೀರಿನ ಹೋರಾಟದಲ್ಲಿ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ, ಸುಂದರ್ ರಾಜ್ ದಂಪತಿ, ಪದ್ಮ ವಾಸಂತಿ, ಶ್ರೀನಾಥ್, ಶೃತಿ, ಸೃಜನ್ ಲೋಕೇಶ್, ತರುಣ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

Scroll to load tweet…


ಜಗ್ಗೇಶ್‌ ಹೀಗೆ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ ಅವರ ಅಪಾರ ಅಭಿಮಾನಿ ಬಳಗ ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸುತ್ತಿದ್ದಾರೆ. ಇನ್ನು ಕೆಲವರು ಆರೋಗ್ಯದಿಂದರಲು ಒಂದಷ್ಟು ಸಲಹೆಗಳನ್ನೂ ನೀಡುತ್ತಿದ್ದಾರೆ. ಸರ್ ನನ್ನದೊಂದು ಸಲಹೆ.. ದಯವಿಟ್ಟು ಕೇಳಿ... ಮೊದಲು.. ಹಾಲು /ಕಾಫಿ / ಟಿ ಕುಡಿಯೋದು ಬಿಟ್ಟು ಬಿಡಿ... ಉಪ್ಪು.. ಸಕ್ಕರೆ.. ಬೆಲ್ಲ ತಿನ್ನೋದು ಬಿಡಿ... ರೈಸ್ ತಿನ್ನೋದು ಬಿಡಿ.. ನಿಮ್ಮ ಆರೋಗ್ಯ ಸುಧಾರಿಸಿ ಅದ್ಬುತವಾದ ಜೀವನ ನಿಮ್ಮದಾಗುತ್ತೆ ಎಂದು ಒಬ್ಬ ನೆಟ್ಟಿಗ ತಿಳಿಸಿದ್ದಾರೆ.

ಯುಗ ಸೃಷ್ಟಿಯ ಸಮಯದಿಂದ ನಮ್ಮ ದೇಶದ ಹೆಸರು ಭಾರತ: ಇಂಡಿಯಾ ಹೆಸರು ಬದಲಾವಣೆಗೆ ಜಗ್ಗೇಶ್​ ಹೇಳಿದಿಷ್ಟು..

ಇನ್ನು ಬಹು ನಿರೀಕ್ಷೆ ಮೂಡಿಸಿದ್ದ ತೋತಾಪುರಿ 2 ಸಿನಿಮಾ ಸೆ. 28ರಂದು ಬಿಡುಗಡೆ ಆಗಿದೆ. ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಜಗ್ಗೇಶ್‌ ನಟಿಸಿದ್ದರೂ, ಸಿನಿಮಾ ಪ್ರಚಾರದಲ್ಲಿ ಅವರು ಭಾಗವಹಿಸಿಲ್ಲ. ವಿಜಯ್‌ ಪ್ರಸಾದ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಧನಂಜಯ್‌, ಅದಿತಿ ಪ್ರಭುದೇವ ಸೇರಿ ಬಹುತಾರಾಗಣವಿದೆ.