Asianet Suvarna News Asianet Suvarna News

ಈರೇಗೌಡನ ಪ್ರೀತಿಯಲ್ಲಿ ಶಕೀಲಾ ಬಾನು: ಬಿಡುಗಡೆಗೆ ರೆಡಿ ಆಗಿದೆ 'ತೋತಾಪುರಿ-2'

ನವರಸ ನಾಯಕ ಜಗ್ಗೇಶ್ ಹಾಗು ಅಧಿತಿ ಪ್ರಭುದೇವ ನಟನೆಯ ತೋರಾಪುರಿ ಸಿನಿಮಾ ನೀವೆಲ್ಲಾ ನೋಡಿದ್ರಿ. ಭಾವೈಕ್ಯತೆಯ ಸಂದೇಶ ಸಾರೋ ಸಿನಿಮಾದಲ್ಲಿ ತೊಟ್ ಮುರಿಯೋದು ಹೇಗೆ ಅಂತ ಹೇಳ್ಕೊಟ್ಟಿದ್ದ ಜಗ್ಗೇಶ್‌ಗೆ ಬಾಗ್ಲು ತೆಗಿ ಮೇರಿ ಜಾನ್ ಅಂತ ಬಾಗ್ಲು ಓಪನ್ ಮಾಡೋ ಆಫರ್ ಕೊಟ್ಟಿದ್ರು ಅದಿತಿ ಪ್ರಭುದೇವ. 

jaggesh dolly dhananjay combinations totapuri 2 trailer release on sep 18 gvd
Author
First Published Sep 16, 2023, 9:43 PM IST

ನವರಸ ನಾಯಕ ಜಗ್ಗೇಶ್ ಹಾಗು ಅಧಿತಿ ಪ್ರಭುದೇವ ನಟನೆಯ ತೋರಾಪುರಿ ಸಿನಿಮಾ ನೀವೆಲ್ಲಾ ನೋಡಿದ್ರಿ. ಭಾವೈಕ್ಯತೆಯ ಸಂದೇಶ ಸಾರೋ ಸಿನಿಮಾದಲ್ಲಿ ತೊಟ್ ಮುರಿಯೋದು ಹೇಗೆ ಅಂತ ಹೇಳ್ಕೊಟ್ಟಿದ್ದ ಜಗ್ಗೇಶ್‌ಗೆ ಬಾಗ್ಲು ತೆಗಿ ಮೇರಿ ಜಾನ್ ಅಂತ ಬಾಗ್ಲು ಓಪನ್ ಮಾಡೋ ಆಫರ್ ಕೊಟ್ಟಿದ್ರು ಅದಿತಿ ಪ್ರಭುದೇವ. ಶಕಿಲಾ ಬಾನು ಆಗಿ ನಟಿಸಿದ್ದ ಅದಿತಿ, ಈರೇಗೌಡನಾಗಿದ್ದ ಜಗ್ಗೇಶ್ರ ಡಬ್ಬಲ್ ಮೀನಿಂಗ್ ತೋತಾಪುರಿ ಎಂಟರ್ಟೈನ್ಮೆಂಟ್ ಕಿಕ್ ಕೊಟ್ಟಿತ್ತು.  ಈಗ ತೋತಾಪುರಿ 2 ರಿಲೀಸ್ಗೆ ರೆಡಿಯಾಗಿದೆ. ನಿರ್ದೇಶಕ ವಿಜಯ್ ಪ್ರಸಾದ್ ಮತ್ತೊಮ್ಮೆ ಡಬಲ್ ಮೀನಿಂಗ್ ಕಿಕ್ ಜೊತೆ ಈರೇಗೌಡ- ಶಕಿಲಾ ಬಾನು ಲವ್ ಸ್ಟೋರಿ ಸಕ್ಸಸ್ ಆಗುತ್ತಾ ಅಂತ ಹೇಳೋಕೆ ಹೊರಟಿದ್ದಾರೆ.

ಹೀಗಾಗಿ ತೋತಾಪುರಿ 2 ಸಿನಿಮಾದ ಈರೇಗೌಡ ಶಕಿಲಾ ಬಾಬು ಲವ್ ಸಾಂಗ್ ರಿಲೀಸ್ ಆಗಿದೆ. ಗಜಲ್ ಶೈಲಿಯಲ್ಲಿ ಸಾಂಗ್ ಮೂಡಿ ಬಂದಿದ್ದು. ಬಾಗ್ಲು ತೆಗಿ ಮೇರಿ ಜಾನ್ ಹಾಡಿನಂತೆ ಈ ಹಾಡು ಕೂಡ ಹಿಟ್ ಲೀಸ್ಟ್ ಸೇರೋ ಎಲ್ಲಾ ಸಾಧ್ಯತೆ ಇದೆ. ‘ತೋತಾಪುರಿ 2’ ಸಿನಿಮಾದ ಟ್ರೈಲರ್ ಇದೇ ಸೆಪ್ಟೆಂಬರ್ 18ರಂದು ರಿಲೀಸ್ ಆಗಲಿದೆ. ನಟ ಶಿವರಾಜ್ ಕುಮಾರ್ ಈ ಟ್ರೈಲರ್ ರಿಲೀಸ್ ಮಾಡಲಿದ್ದು, ಗಣೇಶ್ ಹಬ್ಬಕ್ಕೆ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಲಿದೆ. ಸಿದ್ಲಿಂಗು ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈಗಾಗಲೇ ಒಂದು ತೋತಾಪುರಿಯನ್ನು ಪ್ರೇಕ್ಷಕರಿಗೆ ತಿನ್ನಿಸಿದ್ದಾರೆ.

ಮತ್ತೊಂದು ತೋತಾಪುರಿ ತಿನ್ನಿಸಲು ರೆಡಿ ಮಾಡಿಕೊಂಡಿದ್ದಾರೆ. ಜಗ್ಗೇಶ್ ಮತ್ತು ಡಾಲಿ ಧನಂಜಯ್ ಕಾಂಬಿನೇಷನ್ ನ ‘ತೋತಾಪುರಿ’ ಸಿನಿಮಾ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ತೋತಾಪುರಿ ಸಿನಿಮಾವನ್ನು ಜನರು ಮೆಚ್ಚಿಕೊಂಡ ಬೆನ್ನಲ್ಲೇ ತೋತಾಪುರಿ 2 ಸಿನಿಮಾವನ್ನು ಟ್ರೈಲರ್ ರಿಲೀಸ್ ಮಾಡಲು ನಿರ್ಮಾಪಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಚಾರದ ಮೊದಲ ಭಾಗವಾಗಿ ಮೊದಲ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಕೆ.ಎ.ಸುರೇಶ್  ಆರ್ಟ್ಸ್ ಬ್ಯಾನರ್ ಅಡಿಯಲ್ಲಿ  ಈ ಸಿನಿಮಾ ನಿರ್ಮಾಣಗೊಂಡಿದ್ದು, ನೀರ್ ದೋಸೆ ಚಿತ್ರದ ಯಶಸ್ವೀ ತಂಡ ಮತ್ತೊಮ್ಮೆ `ತೋತಾಪುರಿ’ಯ ಮೂಲಕ ಒಂದಾಗಿರೋದು ವಿಶೇಷ. 

ಈಗ ಶುರುವಾಗ್ತಿದೆ 'ಭೀಮ' ದರ್ಬಾರ್: ಗಣೇಶ ಹಬ್ಬಕ್ಕೆ ದುನಿಯಾ ವಿಜಯ್ ಬಾಯ್ಸ್ ಭರ್ಜರಿ ಸ್ಟೆಪ್!

ನಿರ್ದೇಶಕ ವಿಜಯಪ್ರಸಾದ್ ಅವರ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ದತ್ತಣ್ಣ, ಸುಮನ್ ರಂಗನಾಥ್ ಮತ್ತೆ ಒಂದಾಗಿದ್ದಾರೆ. ಇದಲ್ಲದೆ ಉದ್ಯಮಿಯ ಪಾತ್ರದಲ್ಲಿ ಡಾಲಿ ಧನಂಜಯ ಮತ್ತು ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ನಿರ್ಮಾಪಕ ಕೆ ಎ ಸುರೇಶ್ ಅವರ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ಭರವಸೆ ಈ ಚಿತ್ರ ಮೂಡಿಸಿದೆ. ಮಾರುಕಟ್ಟೆಯಲ್ಲಿ ಈ ತಂಡದ ಬಗ್ಗೆಯೇ ದೊಡ್ಡ ನಿರೀಕ್ಷೆ ಉದ್ಭವವಾಗಿದೆ. ಕನ್ನಡ ಚಿತ್ರ ರಂಗದಲ್ಲಿ ಯಶಸ್ಸನ್ನು ಬೆನ್ನಿಗೆ ಕಟ್ಟಿಕೊಂಡಿರುವ ನಿರ್ಮಾಪಕ ಕೆ ಎ ಸುರೇಶ್ `ತೋತಾಪುರಿ’. ಚಿತ್ರದಲ್ಲಿ ಮೊದಲ ಬಾರಿಗೆ ಡಾಲಿ ಧನಂಜಯ್ ,  ಜಗ್ಗೇಶ್ ಜೊತೆಯಾಗಿದ್ದಾರೆ. ನಾಯಕಿ ಅದಿತಿ ಪ್ರಭುದೇವ ಮುಸ್ಲಿಂ ಹುಡುಗಿ, ಸುಮನ್ ರಂಗನಾಥ್ ಕ್ರಿಶ್ಚಿಯನ್ ಹೆಣ್ಣುಮಗಳಾಗಿ ಅಭಿನಯಿಸಿದ್ದಾರೆ.

Follow Us:
Download App:
  • android
  • ios