1999ರಲ್ಲಿ ಮದುವೆಯಾದ ಬಾಲಿವುಡ್‌ನ ಜನಪ್ರಿಯ ಜೋಡಿ ಕಾಜೋಲ್ ಮತ್ತು ಅಜಯ್ ದೇವಗನ್. ಆದರೆ, ಈಗ ನಟಿ ಕಾಜೋಲ್ ತಮ್ಮ ಮಗಳು ನೈಸಾ ಜೊತೆಗಿನ ಸಂಬಂಧದ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ಕಾಜೋಲ್, ಮಗಳು ನೈಸಾ ದೇವಗನ್ ಜೊತೆಗಿನ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಗಳ ಜೊತೆ ಮೂರು ವರ್ಷಗಳ ಕಾಲ ಮಾತುಕತೆ ಇರಲಿಲ್ಲ, ಕೋಪದಲ್ಲಿ ಆಕೆಯ ಹೊಸ ಫೋನ್‌ ಅನ್ನು ಒಡೆದು ಹಾಕಿದ್ದೆ ಎಂದೂ ಹೇಳಿಕೊಂಡಿದ್ದಾರೆ. ಬಾಲಿವುಡ್‌ನ ಜನಪ್ರಿಯ ಜೋಡಿ ಕಾಜೋಲ್ ಮತ್ತು ಅಜಯ್ ದೇವಗನ್. 1999ರಲ್ಲಿ ಮದುವೆಯಾದ ಈ ದಂಪತಿಗೆ ನೈಸಾ ಎಂಬ ಮಗಳು ಮತ್ತು ಯುಗ್ ಎಂಬ ಮಗನಿದ್ದಾನೆ.

Add Asianetnews Kannada as a Preferred SourcegooglePreferred

ಆದರೆ, ಈಗ ನಟಿ ಕಾಜೋಲ್ ತಮ್ಮ ಮಗಳು ನೈಸಾ ಜೊತೆಗಿನ ಸಂಬಂಧದ ಬಗ್ಗೆ ಆಘಾತಕಾರಿ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಒಂದು ಹಂತದಲ್ಲಿ ಮಗಳ ಜೊತೆ ಸುಮಾರು ಮೂರು ವರ್ಷಗಳ ಕಾಲ ಮಾತು ಬಿಟ್ಟಿದ್ದೆ, ಅಷ್ಟೇ ಅಲ್ಲ, ಆಕೆಯ ಹೊಸ ಫೋನ್‌ ಅನ್ನು ಕೂಡ ಒಡೆದು ಹಾಕಿದ್ದೆ ಎಂದು ಹೇಳಿದ್ದಾರೆ. ನೈಸಾಗೆ 12 ವರ್ಷ ಇದ್ದಾಗ ಆಕೆಯ ದೇಹ ಮತ್ತು ನಡವಳಿಕೆಯಲ್ಲಿ ಆದ ಬದಲಾವಣೆಗಳಿಂದ ನಮ್ಮಿಬ್ಬರ ನಡುವೆ ದೊಡ್ಡ ಜಗಳ ಶುರುವಾಯ್ತು.

ಸುಮಾರು ಮೂರು ವರ್ಷಗಳ ಕಾಲ ನಾವಿಬ್ಬರೂ ಸರಿ-ತಪ್ಪು ಯೋಚಿಸದೆ ವರ್ತಿಸುತ್ತಿದ್ದೆವು. ಒಬ್ಬರನ್ನೊಬ್ಬರು ನೋಡಿದರೂ ಮಾತನಾಡದಷ್ಟು ದೂರ ಆಗಿದ್ವಿ. ಒಂದು ಹಂತದಲ್ಲಿ ಕೋಪ ತಡೆಯೋಕೆ ಆಗದೆ ಮಗಳ ಹೊಸ ಫೋನ್‌ ಅನ್ನು ಎಸೆದು ಒಡೆದು ಹಾಕಿದ್ದೆ. ಆದರೆ ಅದು ಅವಳ ಮೇಲಿನ ದ್ವೇಷದಿಂದಲ್ಲ. ಬದಲಿಗೆ, ಅವಳನ್ನು ಸರಿ ದಾರಿಗೆ ತರಲು ತೋರಿಸಿದ ಒಂದು ಕಠಿಣ ಪ್ರೀತಿ ಅಷ್ಟೇ ಎಂದು ಕಾಜೋಲ್ ವಿವರಿಸಿದ್ದಾರೆ.

ತಾಳ್ಮೆಯಿಂದ ಕೇಳಲು ಶುರು ಮಾಡಿದೆ

ನಂತರ, ಒಬ್ಬ ತಾಯಿಯಾಗಿ ನನ್ನಲ್ಲೇ ಬದಲಾವಣೆ ಮಾಡಿಕೊಳ್ಳಲು ನಾನೇ ನಿರ್ಧರಿಸಿದೆ. ಅದೇ ನಮ್ಮ ಸಂಬಂಧದಲ್ಲಿ ದೊಡ್ಡ ಬದಲಾವಣೆ ತಂತು. ಯಾವಾಗಲೂ ಬುದ್ಧಿವಾದ ಹೇಳೋದು, ಸಲಹೆ ಕೊಡೋದು ಬಿಟ್ಟು, ಮಗಳು ಹೇಳೋದನ್ನು ತಾಳ್ಮೆಯಿಂದ ಕೇಳಲು ಶುರು ಮಾಡಿದೆ. ಇದೇ ನಮ್ಮ ನಡುವಿನ ಮುನಿಸು ಕರಗಿಸಿತು. ಮಕ್ಕಳನ್ನು ಬೆಳೆಸುವಾಗ ನಾವು ಕಲಿಯಬೇಕಾದ ದೊಡ್ಡ ಪಾಠ ಅಂದ್ರೆ, ಅವರು ಹೇಳೋದನ್ನು ಕೇಳಿಸಿಕೊಳ್ಳೋದು ಎಂದು ಕಾಜೋಲ್ ಸೇರಿಸಿದರು. ಯೂಟ್ಯೂಬರ್ ಲಿಲ್ಲಿ ಸಿಂಗ್ ಅವರೊಂದಿಗಿನ ಸಂದರ್ಶನದಲ್ಲಿ ಕಾಜೋಲ್ ಈ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.