ಬ್ಯಾಡ್ ಮ್ಯಾನರ್ಸ್‌ನಲ್ಲಿ ಕಾಣ್ತಿದೆ ಸುಕ್ಕ ಸೂರಿ ಕಿಕ್: ಅಭಿಷೇಕ್ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ
ನಿರ್ದೇಶಕ ಸೂರಿ ರೆಬಲ್ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ಗೂ ಸಾರಥಿ. ಇಷ್ಟು ದಿನ ಸಿನಿಮಾ ಬಗ್ಗೆ ಯಾವ್ದೆ ಅಪ್ಡೇಟ್ ಕೊಡದ ಸೂರಿ ಈಗ ಸಿನಿಮಾದ ಹಾಡೊಂದನ್ನ ರಿಲೀಸ್ ಮಾಡಿದ್ದಾರೆ.

ರೌಡಿಸಂ ಸಿನಿಮಾಗಳಿಗೆ ಹೊಸ ಟ್ರೆಂಡ್ ಡೈರೆಕ್ಟರ್ ಸೂರಿ. ಪಕ್ಕಾ ಲೋಕಲ್ ಸ್ಟೋರಿ ದುನಿಯಾ ಸಿನಿಮಾದಿಂದ ಶುರುವಾದ ಸೂರಿ ಸಿನಿ ಜರ್ನಿ, ಇಂತಿ ನಿನ್ನ ಪ್ರೀತಿಯ, ಜಾಕಿ, ಅಣ್ಣಾಬಾಂಡ್, ಕಡ್ಡಿಪುಡಿ, ಕೆಂಡಸಂಪಗೆ, ಟಗರು ಹೀಗೆ ಸಾಲು ಸಾಲು ಬಿಗ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಇದೀಗ ಸೂರಿ ರೆಬಲ್ ಸ್ಟಾರ್ ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ಗೂ ಸಾರಥಿ. ಇಷ್ಟು ದಿನ ಸಿನಿಮಾ ಬಗ್ಗೆ ಯಾವ್ದೆ ಅಪ್ಡೇಟ್ ಕೊಡದ ಸೂರಿ ಈಗ ಸಿನಿಮಾದ ಹಾಡೊಂದನ್ನ ರಿಲೀಸ್ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ ಬರೆದ ಈ ಹಾಡಿಗೆ ಚರಣ್ ರಾಜ್ ಟ್ಯೂನ್ ಕೂರಿಸಿದ್ದು, ಬ್ಯಾಡ್ ಮ್ಯಾನರ್ಸ್‌ನ ಮಾಸ್ ಸಾಂಗ್ ಗಮನ ಸೆಳೆಯುತ್ತಿದೆ.
ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ. ಸೂರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಮತ್ತು ಸೂರಿ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ. ಈ ಹಿಂದೆ ಯುಗಾದಿ ದಿನದಂದು ಪೆಪ್ಪಿ ಸಾಂಗ್‌ಗೆ ರಿಲೀಸ್ ಆಗಿತ್ತು. ಆ ಹಾಡಿಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದರು. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿತ್ತು. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ. ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ.
ಬ್ಯಾಡ್ ಮ್ಯಾನರ್ಸ್ ರುದ್ರಾಭಿಷೇಕ ಟೈಟಲ್ ಟ್ರ್ಯಾಕ್ ಹವಾ: ಲೈಫ್ ಅಂದ್ರೆ ಗೇಮು ಟೋಟಲ್ ಧಮಾಕಾ!
ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ. ಅಮರ್ ಸಿನಿಮಾದಲ್ಲಿ 10 ಪರ್ಸೆಂಟ್ ಅಭಿಷೇಕ್‌ನ ನೋಡಿದ್ರೆ ಇನ್ನುಳಿದ 90 ಪರ್ಸೆಂಟ್ ಈ ಸಿನಿಮಾದಲ್ಲಿ ನೋಡುತ್ತೀರಿ ಎನ್ನುತ್ತಿದ್ದಾರೆ ಅಭಿಷೇಕ್. ಸ್ಯಾಂಡಲ್ವುಡ್ನಲ್ಲಿ ಡೈರೆಕ್ಟರ್ ಮೇಲೆ ನಂಬಿಕೆ ಇಟ್ಟು ಸಿನಿಮಾ ಹೋಗುತ್ತೇವೆ ಎಂದರೆ ಅದರಲ್ಲಿ ಸೂರಿ ಹೆಸರು ಅಗ್ರಪಂಕ್ತಿಯಲ್ಲಿ ಬರುತ್ತದೆ. ಸೂರಿ ಸದ್ಯ ನಟ ಅಭಿಷೇಕ್ ಅಂಬರೀಶ್ಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನಿರ್ದೇಶನ ಮಾಡಿದ್ದು, ಅದರ ಚಿತ್ರೀಕರಣ ಮುಗಿದಿದೆ.
'ಬ್ಯಾಡ್ ಮ್ಯಾನರ್ಸ್'ನಿಂದ ಬಿಗ್ ಅನೌನ್ಸ್‌ಮೆಂಟ್: ಮಾ.22ಕ್ಕೆ ಸ್ಪೆಷಲ್ ಸಾಂಗ್ ರಿಲೀಸ್!
ಈ ಸಿನಿಮಾದ ಫಸ್ಟ್ ಲುಕ್, ಟೀಸರ್ಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾಗೆ ಸುಮಾರು ನೂರಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಇನ್ನು ನಟ ಅಭಿಷೇಕ್ ಅಂಬರೀಷ್ ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರಕ್ಕೆ ನಾಗಶೇಖರ್ ನಿರ್ದೇಶನ ಮಾಡಿದ್ದರು. ಆ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈಗ ಬ್ಯಾಡ್ ಮ್ಯಾನರ್ಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಜೊತೆಗೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರವನ್ನು ಕೂಡ ಅಭಿಷೇಕ್ ಒಪ್ಪಿಕೊಂಡಿದ್ದಾರೆ. ಇನ್ನು ಕೃಷ್ಣ ನಿರ್ದೇಶನದ ಕಾಳಿ ಚಿತ್ರಕ್ಕೂ ಅಭಿಷೇಕ್ ಹೀರೋ ಆಗಿದ್ದಾರೆ.