ಬಾಲಿವುಡ್ ನಟ ಸುಶಾಂತ್ ಸಿಂಗ್‌ ರಜಪೂತ್ ಆತ್ಮಹತ್ಯೆ ಘಟನೆ ನಡೆದು ಬಹುತೇಕ 50 ದಿನಗಳಾಗುತ್ತಾ ಬಂದಿದೆ. ಪ್ರಕರಣದ ತನಿಖೆ ನಡೆಸಲು ತನಿಖಾ ತಂಡಕ್ಕೆ ಸೇರಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಇದೀಗ ಕ್ವಾರೆಂಟೈನ್ ಆಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಮುಂಬೈ ಫ್ಲಾಟ್‌ನಲ್ಲಿ ನಟ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಘಟನೆ ಬಗ್ಗೆ ಯಾವುದೇ ಪ್ರಮುಖ ವಿಚಾರ ಬಯಲಿಗೆಳೆಯುವ ಮುನ್ನವೇ ಬಿಹಾರ ಪೊಲೀಸ್ ಐಪಿಎಸ್‌ ವಿನಯ್ ತಿವಾರಿ ಅವರನ್ನು ತನಿಖೆಗಾಗಿ ನಿಯೋಜಿಸಿತ್ತು.

ನಟ ಸುಶಾಂತ್‌ ಸಿಂಗ್ ರಜಪೂತ್ ಸಾವು: ಈಗ ಇ.ಡಿ. ಎಂಟ್ರಿ, ಪ್ರೇಯಸಿಗೆ ಸಂಕಷ್ಟ

ಆದರೆ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮಾತ್ರ ಅಧಿಕಾರಿಯನ್ನು 14 ದಿನ ಕ್ವಾರೆಂಟೈನ್‌ನಲ್ಲಿರುವಂತೆ ಒತ್ತಾಯಿಸಿ ಸೀಲ್ ಹಾಕಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಹಾರ ಪೊಲೀಸರು ಮುಂಬೈ ಅಧಿಕಾರಿಗಳು ಬಲವಂತವಾಗಿ ಅಧಿಕಾರಿಯನ್ನು ಕ್ವಾರೆಂಟೈನ್ ಮಾಡಿರುವುದಾಗಿ ಆರೋಪಿಸಿದ್ದಾರೆ.

ಬಿಹಾರ್ ಡಿಜಿಪಿ ಗುಪ್ತೇಶ್ವರ ಪಾಂಡೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ವಿನಯ್ ಅವರಿಗೆ ಐಪಿಎಸ್‌ ಮೆಸ್‌ನಲ್ಲಿ ವಸತಿ ವ್ಯವಸ್ಥೆ ಮಾಡಿಲ್ಲ. ಬದಲಾಗಿ ಗೋರ್‌ಗಾಂವ್‌ನ ಅತಿಥಿಗೃಹದಲ್ಲಿ ಅವರಿಗೆ ವಾಸಕ್ಕೆ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಕರುನಾಡಿನಲ್ಲಿ ನೆಲೆಸಲು ಬಯಸಿದ್ದ ನಟ ಸುಶಾಂತ್‌!

ಇದೀಗ ಮುಂಬೈ ಕಾರ್ಪೊರೇಷನ್ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವವರಿಗೆ ವಿಧಿಸಲಾದ ಸ್ಥಳೀಯ ನಿರ್ಬಂಧಗಳ ಪ್ರಕಾರ ವಿನಯ್ ಅವರಿಗೆ 14 ದಿನ ಕ್ವಾರೆಂಟೈನ್ ನಿಗದಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಅಮೆರಿಕದಲ್ಲಿರುವ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೃತಿ ಸುಶಾಂತ್ ಸಾವಿನ ಬಗ್ಗೆ ತನಿಖೆ ಬಗ್ಗೆ ಗಮನ ನೀಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡಿದ್ದರು. 4 ಜನ ಬಿಹಾರ ಪೊಲೀಸರ ತಂಡ ಮುಂಬೈ ಪೊಲೀಸರು ಸುಶಾಂತ್ ಸಾವಿನ ಪ್ರಕರಣ ತನಿಖೆಯಲ್ಲಿ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.