Ishq Kameena Remake: ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸೂಪರ್‌ಹಿಟ್ 'ಇಷ್ಕ್ ಕಮೀನಾ' ಹಾಡನ್ನು ಹುಮಾ ಖುರೇಷಿ ಅವರ 'ಬೇಬಿ ಡು ಡೈ ಡು' ಚಿತ್ರಕ್ಕಾಗಿ ರೀಮೇಕ್ ಮಾಡಲಾಗಿದೆ. ಈ ಹೊಸ ವರ್ಷನ್‌ಗೆ..

ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸೂಪರ್‌ಹಿಟ್ 'ಇಷ್ಕ್ ಕಮೀನಾ' ಹಾಡನ್ನು ಹುಮಾ ಖುರೇಷಿ ಅವರ 'ಬೇಬಿ ಡು ಡೈ ಡು' ಚಿತ್ರಕ್ಕಾಗಿ ರೀಮೇಕ್ ಮಾಡಲಾಗಿದೆ. ಈ ಹೊಸ ವರ್ಷನ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೂಲ ಹಾಡಿನ ಅಭಿಮಾನಿಗಳು ರೀಮೇಕ್ ಅಗತ್ಯವಿತ್ತೇ ಎಂದು ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಇಷ್ಕ್ ಕಮೀನಾ 2.0' ಬಗ್ಗೆ ಫ್ಯಾನ್ಸ್ ನಡುವೆ ಚರ್ಚೆ

2002ರಲ್ಲಿ ಬಂದ 'ಶಕ್ತಿ: ದಿ ಪವರ್' ಸಿನಿಮಾದಲ್ಲಿ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಕಾಣಿಸಿಕೊಂಡಿದ್ದ 'ಇಷ್ಕ್ ಕಮೀನಾ' ಹಾಡು ನೆನಪಿದೆಯಾ? ಆ ಬ್ಲಾಕ್‌ಬಸ್ಟರ್ ಹಾಡನ್ನು ಈಗ ಹುಮಾ ಖುರೇಷಿ ಅವರ ಮುಂಬರುವ 'ಬೇಬಿ ಡು ಡೈ ಡು' ಚಿತ್ರಕ್ಕಾಗಿ ರೀಕ್ರಿಯೇಟ್ ಮಾಡಲಾಗಿದೆ. ಕೆಲವರು ಈ ಹೊಸ ಹಾಡನ್ನು ಇಷ್ಟಪಟ್ಟರೂ, ಮೂಲ ಹಾಡಿನ ಅಪ್ಪಟ ಅಭಿಮಾನಿಗಳು ಮಾತ್ರ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.

ಈ ರೀಮೇಕ್‌ನ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ. "ಯಾಕ್ ಗುರು ಹೀಗೆ ಮಾಡಿದ್ರಿ," ಎಂದು ಒಬ್ಬ ಅಭಿಮಾನಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. "ಐಶ್ವರ್ಯಾ ಜಾಗವನ್ನು ಯಾರೂ ತುಂಬಲು ಸಾಧ್ಯವಿಲ್ಲ," ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಬಾಲಿವುಡ್‌ನವರಿಗೆ ರೀಮಿಕ್ಸ್ ಬಿಟ್ಟು ಬೇರೆ ಆಯ್ಕೆಯೇ ಇಲ್ಲ. ಮೂಲ ಹಾಡುಗಳನ್ನೂ ಬಿಡಲ್ಲ, ಏನಾದ್ರೂ ಹೊಸದಾಗಿ ಯೋಚನೆ ಮಾಡಿ," ಎಂದು ನೆಟ್ಟಿಗರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶಾರುಖ್ ಮತ್ತು ಐಶ್ವರ್ಯಾಗೆ ಧನ್ಯವಾದ ಹೇಳಿದ ಹುಮಾ ಖುರೇಷಿ

'ಇಷ್ಕ್ ಕಮೀನಾ 2.0' ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಹುಮಾ ಖುರೇಷಿ ಜೊತೆ ನಟ ರಚಿತ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಲಿಂಕ್ ಅನ್ನು X (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡ ಹುಮಾ, ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್‌ಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. "ದೆಹಲಿಯ ಮಕ್ಕಳಾಗಿ ನಾವು 90ರ ದಶಕದ ಈ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾ ಬೆಳೆದವರು. ಈಗ ಇದೇ ಹಾಡನ್ನು ನಾನು ರೀಕ್ರಿಯೇಟ್ ಮಾಡುತ್ತಿದ್ದೇನೆ ಎಂದರೆ ನಂಬಲಾಗುತ್ತಿಲ್ಲ. ಶಾರುಖ್ ಖಾನ್ ಮತ್ತು ಐಶ್ವರ್ಯಾ ಮ್ಯಾಮ್, ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ #IshqKameena," ಎಂದು ಅವರು ಬರೆದುಕೊಂಡಿದ್ದಾರೆ.

'ಬೇಬಿ ಡು ಡೈ ಡು' ಸಿನಿಮಾ ಬಗ್ಗೆ

'ಬೇಬಿ ಡು ಡೈ ಡು' ಚಿತ್ರವು ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಚಿಕೇತ್ ಸಮಂತ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಸಾಕೀಬ್ ಸಲೀಮ್ ನಿರ್ಮಾಣ ಮಾಡಿದ್ದಾರೆ. ಚಂಕಿ ಪಾಂಡೆ, ಸಿಕಂದರ್ ಖೇರ್ ಮತ್ತು ಸೀಮಾ ಪಹ್ವಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.