ಹೃತಿಕ್ ರೋಷನ್ ತಮ್ಮ ಚಿಕ್ಕ ಮಗ ಹೃದಾನ್ 18ನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಈ ವಿಶೇಷ ದಿನದಂದು, 2021ರಲ್ಲಿ ಬರೆದಿದ್ದ ಒಂದು ಕವಿತೆಯನ್ನು ಶೇರ್ ಮಾಡಿ, ಮಗನನ್ನು 'ಶಾಂತ ಯೋಧ' ಎಂದು ಕರೆದಿದ್ದಾರೆ.

ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ಚಿಕ್ಕ ಮಗ ಹೃದಾನ್ 18ನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಈ ವಿಶೇಷ ದಿನದಂದು, 2021ರಲ್ಲಿ ಬರೆದಿದ್ದ ಒಂದು ಕವಿತೆಯನ್ನು ಶೇರ್ ಮಾಡಿ, ಮಗನನ್ನು 'ಶಾಂತ ಯೋಧ' ಎಂದು ಕರೆದಿದ್ದಾರೆ. ಮಾಜಿ ಪತ್ನಿ ಸುಸೇನ್ ಖಾನ್ ಮತ್ತು ಗೆಳತಿ ಸಬಾ ಆಜಾದ್ ಕೂಡಾ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ ತಮ್ಮ ಚಿಕ್ಕ ಮಗ ಹೃದಾನ್‌ಗೆ 18 ವರ್ಷ ತುಂಬಿದ ಹಿನ್ನೆಲೆಯಲ್ಲಿ ಒಂದು ಸ್ಪೆಷಲ್ ಕವಿತೆ ಬರೆದು ಪೋಸ್ಟ್ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗನ ಹಳೆ ಫೋಟೋ ಒಂದನ್ನು ಶೇರ್ ಮಾಡಿಕೊಂಡಿರುವ ಹೃತಿಕ್, "ಹೃದಾನ್, 18ನೇ ಹುಟ್ಟುಹಬ್ಬದ ಶುಭಾಶಯಗಳು. ನಾನೇನು ಕವಿಯಲ್ಲ, ಆದರೆ 2021ರಲ್ಲಿ ನಿನಗಾಗಿ ಬರೆದಿದ್ದ ಕವಿತೆಯನ್ನು ಮತ್ತೆ ಶೇರ್ ಮಾಡ್ತಿದ್ದೀನಿ. ಯಾಕಂದ್ರೆ ಕೆಲವು ವಿಷಯಗಳು ಮತ್ತೆ ಮತ್ತೆ ಹೇಳೋಕೆ ಯೋಗ್ಯವಾಗಿರುತ್ತವೆ" ಅಂತ ಬರೆದುಕೊಂಡಿದ್ದಾರೆ.

ಹೃತಿಕ್ ಬರೆದ ಭಾವುಕ ಕವಿತೆ

2021ರಲ್ಲಿ ಬರೆದಿದ್ದ ಆ ಕವಿತೆಯನ್ನು ಹಂಚಿಕೊಂಡ ಹೃತಿಕ್, "ನಿನ್ನ ಮುಗ್ಧತೆಯನ್ನು ನೀನು ಮುಕ್ತವಾಗಿ ತೋರಿಸುವುದನ್ನು ನೋಡಿ ನನಗೆ ಹೆಮ್ಮೆ. ಆದರೆ ಅದರ ಹಿಂದೆ ಅಲುಗಾಡದ ಒಂದು ಗಟ್ಟಿತನ ಇದೆ. ಇದನ್ನ ಬೇರೆಯವರು ಸುಲಭವಾಗಿ ಗುರುತಿಸದೇ ಇರಬಹುದು, ಆದರೆ ನಾನು ಅದನ್ನ ಮತ್ತೆ ಮತ್ತೆ ನೋಡಿದ್ದೇನೆ. ನಿನ್ನ ಶಾಂತ ಕಣ್ಣುಗಳ ಹಿಂದೆ ಉರಿಯೋ ಬೆಂಕಿ ಇದೆ. ನೀನೊಬ್ಬ ವಿಭಿನ್ನ ಯೋಧ. ಗಲಾಟೆ ಮಾಡೋಲ್ಲ, ಚಂಚಲನಲ್ಲ, ಆದರೆ ಸ್ಥಿರ, ಜಾಗೃತ ಮತ್ತು ತುಂಬಾ ಬಲಶಾಲಿ. ಇಂಥ ಅಪರೂಪದ ಗುಣ ನೋಡಿ ನನಗೇ ಕೆಲವೊಮ್ಮೆ ಆಶ್ಚರ್ಯ ಆಗುತ್ತೆ. ನೀನೊಬ್ಬ ಶಾಂತ ಯೋಧ. ಈ ಜಗತ್ತಿಗೆ ಇಂಥವರ ಅವಶ್ಯಕತೆ ಹೆಚ್ಚಿದೆ.

ಜಗತ್ತು ನಿನ್ನನ್ನು ಪರೀಕ್ಷೆಗೆ ಒಡ್ಡುತ್ತದೆ. ಆದರೆ ನೀನು ಅದನ್ನು ಹೇಗೆ ಎದುರಿಸುತ್ತೀಯಾ ಎಂದು ನನಗೆ ಈಗಾಗಲೇ ತಿಳಿದಿದೆ. ಹ್ಯಾಪಿ 18ನೇ ಬರ್ತ್‌ಡೇ ಮಗನೇ. ಐ ಲವ್ ಯೂ" ಎಂದು ಬರೆದಿದ್ದಾರೆ. ಹೃತಿಕ್ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಮಾಜಿ ಪತ್ನಿ ಸುಸೇನ್ ಖಾನ್, "ಕ್ಲಾಸಿಕ್ ಎಪಿಕ್ ಕವಿತೆ" ಎಂದು ಬರೆದಿದ್ದಾರೆ. ಹೃತಿಕ್ ಗೆಳತಿ ಸಬಾ ಆಜಾದ್ "ರಿಡ್ಜಾ" ಎಂದು ಪ್ರೀತಿಯಿಂದ ಕರೆದಿದ್ದಾರೆ. ಹೃತಿಕ್ ತಾಯಿ ಪಿಂಕಿ ರೋಷನ್, "ಡಗ್ಗು, ಎಷ್ಟು ಸುಂದರವಾದ ಹುಟ್ಟುಹಬ್ಬದ ಸಂದೇಶ. ಒಬ್ಬ ಶ್ರೇಷ್ಠ ಕವಿಯಿಂದ ಬಂದ ಶ್ರೇಷ್ಠ ಮಾತುಗಳು" ಎಂದು ಕಾಮೆಂಟ್ ಮಾಡಿದ್ದಾರೆ.

View post on Instagram

ಸುಸೇನ್ ಖಾನ್ ಹುಟ್ಟುಹಬ್ಬದ ವಿಶ್

ಇದಕ್ಕೂ ಮುನ್ನ, ಸುಸೇನ್ ಖಾನ್ ಕೂಡ ತಮ್ಮ ಮಗ ಹೃದಾನ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದರು. ಮಗನ ಬಾಲ್ಯದಿಂದ ಇಲ್ಲಿಯವರೆಗಿನ ಫೋಟೋಗಳನ್ನು ಸೇರಿಸಿ ಒಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದರು. "ನಾನು ನೋಡಿದ್ರಲ್ಲೇ ಅತ್ಯಂತ ಅದ್ಭುತವಾದ, ಪ್ರಕಾಶಮಾನವಾದ ಹೃದಯ ನಿನ್ನದು. ನಿನ್ನ ದೃಷ್ಟಿಕೋನ ತುಂಬಾ ವಿಶಿಷ್ಟ. ನನ್ನ ಹೃದಾನ್, 18ನೇ ಹುಟ್ಟುಹಬ್ಬದ ಶುಭಾಶಯಗಳು. ನಿನ್ನದೇ ದೃಷ್ಟಿಯಲ್ಲಿ ಜಗತ್ತನ್ನು ನೋಡು. ನೀನು ಹೋದಲ್ಲೆಲ್ಲಾ ನಿನ್ನ ಮ್ಯಾಜಿಕ್ ಸೇರಿಸುತ್ತೀಯಾ ಅಂತ ನನಗೆ ಗೊತ್ತು" ಎಂದು ಬರೆದಿದ್ದರು.

ಮಗನಿಗೆ ಧೈರ್ಯ ತುಂಬಿದ ಸುಸೇನ್, "ವಯಸ್ಕರ ಜಗತ್ತಿಗೆ ಸ್ವಾಗತ. ಇಂದಿನಿಂದ ಮುಂದಕ್ಕೆ, ನಿನ್ನ ಒಳ್ಳೆಯತನ ಮತ್ತು ವ್ಯಕ್ತಿತ್ವವನ್ನು ಎಲ್ಲೆಡೆ ಪಸರಿಸು. ಹತ್ತಿರ ಇರಲಿ, ದೂರ ಇರಲಿ, ನಾನು ಯಾವಾಗಲೂ ನಿನ್ನ ಜೊತೆ ಇರುತ್ತೇನೆ. ಪದಗಳಿಗೆ ಮೀರಿದ ಪ್ರೀತಿ ನನಗೆ. ನಿನ್ನ ಅಮ್ಮನಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ" ಎಂದು ಬರೆದುಕೊಂಡಿದ್ದಾರೆ.

ಜಂಟಿ ಪೋಷಕರಾಗಿ ಹೃತಿಕ್-ಸುಸೇನ್

ಹೃತಿಕ್ ಮತ್ತು ಸುಸೇನ್ 2000ನೇ ಇಸವಿಯಲ್ಲಿ ಮದುವೆಯಾಗಿದ್ದರು. 2006ರಲ್ಲಿ ಹಿರಿಯ ಮಗ ಹ್ರೇಹಾನ್ ಮತ್ತು 2008ರಲ್ಲಿ ಹೃದಾನ್ ಜನಿಸಿದರು. ಈ ಜೋಡಿ 2013ರಲ್ಲಿ ಬೇರೆಯಾಗಿ, 2014ರಲ್ಲಿ ವಿಚ್ಛೇದನ ಪಡೆಯಿತು. ಅಂದಿನಿಂದ ಇಬ್ಬರೂ ಉತ್ತಮ ಸ್ನೇಹ ಸಂಬಂಧ ಉಳಿಸಿಕೊಂಡಿದ್ದು, ಮಕ್ಕಳನ್ನು ಜಂಟಿಯಾಗಿ ಪೋಷಿಸುತ್ತಿದ್ದಾರೆ.