ಅನುಶ್ರೀ ಫ್ರೆಶ್ ಆಗಿ ಪರ್ಪಲ್‌ ಕಲರ್ ಡ್ರೆಸ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಇದರಲ್ಲಿ ಅವರು ಧರಿಸಿರೋ ವಿ ಶೇಪ್‌ ಉಂಗುರ ಗಮನ ಸೆಳೀತಿದೆ. ಇದು ತುಳುನಾಡಿನ ಮಂದಿ ಮದುವೆ ವೇಳೆ ಹಾಕೋ ರಿಂಗ್‌. 

ಆಂಕರ್ ಅನುಶ್ರೀ ಇನ್ನೇನು ಒಂದು ವಾರ ಮಾತ್ರ ಸಿಂಗಲ್ ಲೇಡಿ. ಆಮೇಲೆ ಅವರ ಸ್ಟೇಟಸ್ ಬದಲಾಗುತ್ತೆ. ಅನುಶ್ರೀ ಮದುವೆ ಆಗಸ್ಟ್ 28ರಂದು ರೋಷನ್ ಎಂಬುವವರ ಜೊತೆ ನಡೆಯಲಿದೆ ಎನ್ನಲಾಗಿದೆ. ಆದರೆ ಈ ಲೆವೆಲ್‌ಗೆ ಸುದ್ದಿ ಆಗ್ತಿದ್ರೂ ಅನುಶ್ರೀ ಕಮಕ್ ಕಿಮಕ್ ಅಂದಿಲ್ಲ. ಅದರ ಬದಲು ಯಾರಿಗೋ ಟಾಂಗ್‌ ಕೊಡುವ ಹಾಗೆ ಅಣ್ಣಾವ್ರ ಹಾಡಿನ ಸಾಲನ್ನು ಕೋಟ್ ಮಾಡಿದ್ದಾರೆ. ಮದ್ವೆ ಟೈಮಲ್ಲಿ ಅನುಶ್ರೀ ಈ ವೀಡಿಯೋ ಯಾಕೆ ಹಾಕಿದ್ರು ಅನ್ನೋದು ಸದ್ಯ ಹಲವು ಸಂದೇಹಗಳನ್ನು ಹುಟ್ಟುಹಾಕಿದೆ. 'ಈ ಆಡಿಕೊಳ್ಳುವವರ ಬಾಯಿಗೆ ಬೀಗ ಹಾಕೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಒಳ್ಳಯವರಾಗಿದ್ರೂ ಆಡ್ಕೋತಾರೆ, ಕೆಟ್ಟವರಾಗಿದ್ರೂ ಆಡ್ಕೋತಾರೆ. ಈ ಆಡ್ಕೋಳೋದು, ಅನ್ನೋದು ಮನುಷ್ಯನಿಗೆ ಒಂಥರಾ ಕಾಯಿಲೆ ಇದ್ದಹಾಗೆ. ಇದಕ್ಕೆ ಔಷಧಿನೇ ಇಲ್ಲ"- ಸಂಭಾಷಣೆ ಇರುವ ವಿಡಿಯೋವನ್ನು ಶೇರ್ ಅನುಶ್ರೀ ಮಾಡಿದ್ದಾರೆ. ಈ ಕೋಟ್‌ ಅನ್ನು ಹಾಕೋ ಜೊತೆಗೆ 'ಅಷ್ಟೇ' ಎಂದು ಕ್ಯಾಪ್ಷನ್ ಕೊಟ್ಟು ಕೈಮುಗಿಯುತ್ತಿರುವ ಎಮೋಜಿ ಪೋಸ್ಟ್‌ ಮಾಡಿದ್ದಾರೆ. ಇದರ ಜೊತೆಗೆ #Spreadlove #positivity ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಕೂಡ ಬರೆದುಕೊಂಡಿದ್ದಾರೆ ಅನುಶ್ರೀ. ಈ ವಿಡಿಯೋಗೆ ನಾನಾ ಥರದ ಕಾಮೆಂಟ್‌ಗಳು ಹರಿದುಬರುತ್ತಿವೆ. ಅಷ್ಟಕ್ಕೂ ಅನುಶ್ರೀ ಅವರು ಈ ರೀತಿಯ ವಿಡಿಯೋವನ್ನು ಏಕೆ ಹಂಚಿಕೊಂಡರು? ಆ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇಲ್ಲ.

ಇನ್ನೊಂದೆಡೆ ಅನುಶ್ರೀ ಮದುವೆ ಬಗ್ಗೆ ನಾನಾ ಬಗೆಯ ಸುದ್ದಿ ಹರಿದು ಬರ್ತಾನೇ ಇದೆ. ಅನುಶ್ರೀ ಅವರು ರೋಷನ್ ಅವರ ಜೊತೆಗೆ ವಿವಾಹವಾಗುತ್ತಿದ್ದು, ಇದೊಂದು ಲವ್ ಕಮ್ ಅರೇಂಜ್ಡ್‌ ಮ್ಯಾರೇಜ್ ಅಂತೆ. ಆಗಸ್ಟ್ 28ರಂದು ಅದ್ದೂರಿಯಾಗಿ ಮದುವೆ ಆಗ್ತಿದ್ದಾರೆ. ಅವರನ್ನು ಕೈ ಹಿಡಿಯುತ್ತಿರುವ ರೋಷನ್‌ ಇವರು ಕೂರ್ಗ್ ಮೂಲದ ಉದ್ಯಮಿಯಾಗಿದ್ದು ಪುನೀತ್ ರಾಜ್‌ಕುಮಾರ್ ಅವರ ಮನೆಯಲ್ಲೇ ಅನುಶ್ರೀಗೆ ರೋಷನ್‌ ಅವರ ಪರಿಚಯವಾಗಿತ್ತಂತೆ. ಪುನೀತ್‌ ರಾಜ್‌ಕುಮಾರ್‌ ಅವರ ‘ಗಂಧದ ಗುಡಿ’ ಪ್ರೀ - ರಿಲೀಸ್ ಈವೆಂಟ್ ವೇಳೆಗೇ ಇವರಿಬ್ಬರ ನಡುವೆ ಪ್ರೇಮ್‌ ಕಹಾನಿ ಶುರುವಾಯ್ತು ಎಂಬ ಮಾತೂ ಕೇಳಿ ಬರುತ್ತಿದೆ.

ಇನ್ನೊಂದೆಡೆ ಅನುಶ್ರೀ ಪೋಸ್ಟ್ ಮಾಡಿರೋ ಫೋಟೋದಲ್ಲಿ ಅವರ ಕೈಯಲ್ಲಿರುವ ಉಂಗುರ ಗಮನ ಸೆಳೆಯುತ್ತಿದೆ. ಇದು ತುಳುನಾಡಿನಲ್ಲಿ ಚಾಲ್ತಿಯಲ್ಲಿರುವ ಸಂಪ್ರದಾಯ. ಮದುವೆಗೂ ಮುನ್ನ ಈ ಉಂಗುರವನ್ನು ಮದುಮಗಳ ಕೈಗೆ ಹಾಕುವ ಸಂಪ್ರದಾಯವಿದೆ. ಈ ಉಂಗುರಕ್ಕೆ ಮಾಂಗಲ್ಯದಷ್ಟೇ ಮಹತ್ವವಿದೆ. ತುಳುನಾಡಿನ ನಾಗಾರಾಧನೆಯನ್ನು ಈ ಉಂಗುರ ಪ್ರತಿನಿಧಿಸುತ್ತದೆ. ನೀವು ಐಶ್ವರ್ಯಾ ರೈ ಕೈ ಬೆರಳನ್ನು ನೋಡಿದರೆ ಅವರ ಬೆರಳಿನಲ್ಲೂ ಇಂಥಾದ್ದೇ ಉಂಗುರ ಇರೋದನ್ನು ನೋಡಬಹುದು. ಅವರು ಇವತ್ತಿಗೂ ಯಾವ ಸಂದರ್ಭದಲ್ಲೂ ಅದನ್ನು ತೆಗೆದಿಡೋದಿಲ್ಲ. ಆದರೆ ಆ ಉಂಗುರ ಮದುವೆಗೂ ಮೊದಲೇ ಅನುಶ್ರೀ ಕೈಗೆ ಹೇಗೆ ಬಂತು ಅನ್ನೋದು ಪ್ರಶ್ನೆ. ಕೆಲವರು ಹೇಳುವ ಪ್ರಕಾರ ಕೆಲವೆಡೆ ಅನಿವಾರ್ಯ ಸಂದರ್ಭಗಳಲ್ಲಿ ಇದನ್ನು ಮದುವೆಗೂ ಮೊದಲೇ ಹುಡುಗಿಯ ಆಪ್ತ ಸಂಬಂಧಿಗಳು ಹಾಕುತ್ತಾರಂತೆ. ಹಾಗೇನಾದರೂ ಅನುಶ್ರೀ ಕೈಗೆ ಈ ಉಂಗುರ ಬಿದ್ದಿರಬಹುದು. ಇಲ್ಲವಾದರೆ ಅದೇ ಮಾದರಿಯ ಉಂಗುರವನ್ನು ಅವರು ಹಾಕ್ಕೊಂಡಿರಬಹುದು. ವಿವಾಹ ನಡೆದರೆ ಗೊತ್ತಾಗದೇ ಇರುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಬುದ್ಧಿಮಾತು ಹೇಳಿದ ರಾಕಿಂಗ್ ಸ್ಟಾರ್ ಯಶ್... ಹಳೆಯ ವಿಡಿಯೋ ಈಗ್ಯಾಕೆ ವೈರಲ್..?

ಸತ್ಯ ಏನು ಅನ್ನೋದನ್ನು ಅನುಶ್ರೀ ಅವರೇ ಹೇಳಬೇಕಿದೆ.

ಆದರೂ ಮದುವೆ ದಿನ ಇಷ್ಟು ಹತ್ತಿರವಿದ್ದರೂ ಅನುಶ್ರೀ ಯಾಕೆ ಇನ್ನೂ ಮದುವೆ ವಿಚಾರ ಮುಚ್ಚಿಟ್ಟಿದ್ದಾರೆ ಅನ್ನೋದು ಹಲವರಿಗೆ ಮಿಲಿಯನ್‌ ಡಾಲರ್‌ ಪ್ರಶ್ನೆ. ಇದಕ್ಕೆ ಉತ್ತರಿಸೋ ಬದಲು ಟಾಂಗ್‌ ನೀಡುವಂಥಾ ಉತ್ತರವನ್ನು ಅನುಶ್ರೀ ಕೊಡುತ್ತಿರುವುದೂ ಅವರ ಅಭಿಮಾನಿಗಳಿಗೆ ತಲೆಗೆ ಹುಳ ಬಿಟ್ಟ ಹಾಗಾಗಿದೆ.

ಈ ಡ್ಯಾನ್ಸ್‌ ನಿಮ್ಮೊಂದಿಗೆ ಮಾತ್ರ ಮಾಡೋದಕ್ಕೆ ಸಾಧ್ಯ: ರಶ್ಮಿಕಾ ಹೊಗಳಿದ್ದು ಯಾರನ್ನ?