ಕೆಜಿಎಫ್ ಸಿನಿಮಾ ಬಳಿಕ ಯಶ್ ಮಾರ್ಕೆಟ್ ಹಾಗೂ ಜನಪ್ರಿಯತೆ ಕನ್ನಡ ಸಿನಿಮಾ ಉದ್ಯಮವನ್ನು ಮೀರಿದೆ. ಈಗೆನಿದ್ದರೂ ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್. ಅವರ ಸಿನಿಮಾಗಳಿಗೆ ಜನರು ಕಾಯುವಂತಾಗಿದೆ, ಅವರ ಕಾಲ್‌ಶೀಟ್‌ಗೆ ಸಿನಿಮಾ ನಿರ್ಮಾಪಕರು ಕ್ಯೂ ನಿಲ್ಲುವಂತಾಗಿದೆ. ಆದರೆ,,

ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರು ಯಾವತ್ತೋ ಒಮ್ಮೆ ಮೈಕ್-ಕ್ಯಾಮೆರಾ ಮುಂದೆ ಆಡಿರೋ ಮಾತು ಸಕತ್ ವೈರಲ್ ಆಗ್ತಿದೆ. ನಟ ಯಶ್ ಕೆಜಿಎಫ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋದು, ಅವ್ರು ನಿಂತ್ರೆ ಅಥವಾ ಕುಂತ್ರೆ ಸುದ್ದಿ ಆಗೋದು ಈಗ ಹೊಸ ಸಂಗತಿಯೇನಲ್ಲ. ಆದ್ರೆ, ಇದೀಗ ವೈರಲ್ ಆಗ್ತಿರೋ ಸುದ್ದಿ ತುಂಬಾ ಮಹತ್ವದ್ದು, ಯುವ ಜನಾಂಗಕ್ಕೆ ದಾರಿ ತೋರಿಸುವ ಬೆಳಕು ಎಂಬಂಥದ್ದು. ಹಾಗಿದ್ರೆ ಅದೇನು? ರಾಕಿಂಗ್ ಸ್ಟಾರ್ ಯಶ್ ಅದೇನು ಹೇಳಿದ್ದಾರೆ ನೋಡೋಣ ಬನ್ನಿ..

'ಡ್ರಗ್ಸ್' ತಗೊಳ್ಳೋರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ, ಅಪ್ಪ-ಅಮ್ಮ ಕೊಟ್ಟಿರೋದು.. ನೀವು ಕೆಳಗೆ ಬಿದ್ರೆ ಸಾಕು, ನಿಮ್ ಅಪ್ಪ-ಅಮ್ಮ ತುಂಬಾ ಗಾಬರಿ ಆಗ್ತಾರೆ.. ಅಂಬೆಗಾಲು ಇಡುವಾಗ ಜಸ್ಟ್ ಕೆಳಗೆ ಬಿದ್ರೆ ಸಾಕು, ಹೆಂಗಪ್ಪ ಏನ್ ಆಗ್ಬಿಡುತ್ತೋ ಅಂತ ಸಾಯ್ತಾ ಇರ್ತಾರೆ.. ಏನಾದ್ರೂ ತಿನ್ನಬೇಕಾದ್ರೆ, ಒಳ್ಳೇದನ್ನ ಮಕ್ಕಳಿಗೆ ಕೊಡ್ತಾರೆ, ತಮ್ಗೆ ಇದ್ಯೋ ಇಲ್ವೋ ಅಂತ ಕೂಡ ಯೋಚ್ನೆ ಮಾಡಲ್ಲ..

ಇರೋದ್ರಲ್ಲಿ ಅಥವಾ ತಮ್ಗೆ ಆಗೋದ್ರಲ್ಲಿ ಬೆಸ್ಟ್ ಊಟ ಕೊಟ್ಟು ಮಕ್ಕಳನ್ನ ಬೆಳೆಸಿರ್ತಾರೆ.. ಅಷ್ಟು ಚೆನ್ನಾಗಿ ಬೆಳೆಸಿರೋ ಮಕ್ಕಳು ಮುಂದೆ ಏನೋ ಆಗ್ತಾರೆ ಅಂತ ಕನಸು ಕಾಣ್ತಾರೆ.. ಯಾವ್ದೋ ಈ ದರಿದ್ರ ಡ್ರಗ್ಸ್‌ಗಳು, ಮತ್ತೊಂದು ಏನೋ ತಗೊಂಡು ನೀವು ಹಾಳಾದ್ರೆ, ನಿಮ್ ರೈಟ್ಸ್‌ ಅಲ್ಲ ಅದು, ನಿಮ್ಮ ದೇಹ ಅಲ್ಲ ಅದು.. ಅಪ್ಪ-ಅಮ್ಮ ಕೊಟ್ಟಿರೋ ಭಿಕ್ಷೆ ಅದು.. ಮರ್ಯಾದೆಯಿಂದ ಇದ್ದು, ಅಪ್ಪ-ಅಮ್ಮನಿಗೋಸ್ಕರ ಗೌರವ ತರೋ ಕೆಲಸ ಮಾಡಿ.. ಇಂಥ ದುಶ್ಚಟಗಳನ್ನೆಲ್ಲಾ ಬಿಡಿ.. ಯಾರೇ ಆಗ್ಲಿ, ಯಂಗ್‌ಸ್ಟರ್ಸ್ಗೆ ಈಗ ಇದೊಂದು ಮೆಸೇಜ್ ಕೊಡ್ತೀನಿ' ಅಂತ ನಟ ಯಶ್ ಒಮ್ಮೆ ಕ್ಯಾಮೆರಾ ಮುಂದೆ ಹೇಳಿದ್ದಾರೆ.

ಸದ್ಯ ನಟ ಯಶ್ ಅವರು ಬಾಲಿವುಡ್ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸುತ್ತಿದ್ದು, ಆ ಝಲಕ್ ಫೋಟೋ ಇರುವ ಟೀಸರ್ ಬಿಡುಗಡೆ ಆಗಿ ಭಾರೀ ಜನಮೆಚ್ಚುಗೆ ಗಳಿಸಿದೆ. ರಾಮಾಯಣ ಮಾತ್ರವಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ, ಹಾಲಿವುಡ್‌ ರೇಂಜ್‌ನಲ್ಲಿ ಸಿದ್ಧವಾಗುತ್ತಿರುವ 'ಟಾಕ್ಸಿಕ್' ಸಿನಿಮಾದಲ್ಲಿ ಕೂಡ ನಟ ಯಶ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಇವರೆಡೂ ಸಿನಿಮಾಗಳ ಮೇಲೆ ಭಾರೀ ನಿರೀಕ್ಷೆ ಮನೆಮಾಡಿದೆ.

ಕೆಜಿಎಫ್ ಸಿನಿಮಾ ಬಳಿಕ ಯಶ್ ಮಾರ್ಕೆಟ್ ಹಾಗೂ ಜನಪ್ರಿಯತೆ ಕನ್ನಡ ಸಿನಿಮಾ ಉದ್ಯಮವನ್ನು ಮೀರಿದೆ. ಈಗೆನಿದ್ದರೂ ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್. ಅವರ ಸಿನಿಮಾಗಳಿಗೆ ಜನರು ಕಾಯುವಂತಾಗಿದೆ, ಅವರ ಕಾಲ್‌ಶೀಟ್‌ಗೆ ಸಿನಿಮಾ ನಿರ್ಮಾಪಕರು ಕ್ಯೂ ನಿಲ್ಲುವಂತಾಗಿದೆ. ಆದರೆ, ಈ ಮೊದಲಿನಂತೆ ಅವರ ಸಿನಿಮಾಗಳು ವರ್ಷಕ್ಕೆ ಒಂದು, ಎರಡು ಬರಲು ಸಾಧ್ಯವಾಗುತ್ತಿಲ್ಲ. ಕಾರಣ, ನಟ ಯಶ್ ಅವರು ಈಗ ಮಾಡುತ್ತಿರುವ ಸಿನಿಮಾ ಬಿಗ್ ಬಜೆಟ್ ಹಾಗೂ ಅದ್ದೂರಿ ಮೇಕಿಂಗ್ ಆಗುತ್ತಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಅವರ ನಟನೆಯ ಸಿನಿಮಾಗಳು 2-3 ವರ್ಷಗಳಿಗೆ ಒಂದು ತೆರೆಗೆ ಬರಬಹುದು ಅಷ್ಟೇ.

ಒಟ್ಟಿನಲ್ಲಿ, ನಟ ಯಶ್ ಅವರು ಹಿಂದೊಮ್ಮೆ ಮಾತನ್ನಾಡಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗ್ತಿದೆ. ಡ್ರಗ್ಸ್‌ ಅಡಿಕ್ಟ್‌ಗೆ ಒಳಗಾಗುತ್ತಿರುವ ಯುವ ಜನರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಆಡಿರುವ ಮಾತುಗಳು ತುಂಬಾ ಪ್ರಾಮುಖ್ಯತೆ ಗಳಿಸಿವೆ. ಹಲವರು ನಟ ಯಶ್ ಮಾತು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ. ಯಶ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಈ ಮಾತುಗಳನ್ನು ಸ್ವಾಗತಿಸಿದ್ದಾರೆ.