ಕನ್ನಡದ ನಂ 1 ನಿರೂಪಕಿ ಅನುಶ್ರೀ ಯಾರನ್ನು ಮದುವೆ ಆಗ್ತಾರೆ? ಹುಡುಗ ಯಾರು ಎನ್ನುವ ವಿಷಯ ರಿವೀಲ್‌ ಆಗಿದೆ. ಅನುಶ್ರೀ, ರೋಶನ್‌ ಇರುವ ಫೋಟೋ, ವಿಡಿಯೋ ವೈರಲ್‌ ಆಗ್ತಿದೆ. 

ನಿರೂಪಕಿ ಅನುಶ್ರೀ ಮದುವೆ ಆಗ್ತಾರಾ? ಅನುಶ್ರೀ ಮದುವೆ ಯಾವಾಗ ಎಂಬ ಪ್ರಶ್ನೆಗಳು ಸದಾ ಕೇಳಿ ಬರುತ್ತಿದ್ದವು. ಅಷ್ಟೇ ಅಲ್ಲದೆ ಕೆಲ ನಟರ ಜೊತೆ ಅನುಶ್ರೀ ಮದುವೆ ಆಗತ್ತೆ ಅಂತ ಅಂತೆ-ಕಂತೆಗಳು ಕೇಳಿ ಬರುತ್ತಿದ್ದವು. ಈಗ ಅಂತೆ ಕಂತೆಗಳು ಮುಗಿದಿದ್ದು, ಈಗ ನಿರೂಪಕಿ ಅನುಶ್ರೀ ಮದುವೆ ಆಗೋದು ಪಕ್ಕಾ ಫಿಕ್ಸ್‌ ಆಗಿದೆ. ಮುಂಬರುವ ಆಗಸ್ಟ್‌ 28ಕ್ಕೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಅನುಶ್ರೀ ಮದುವೆ ನಡೆಯಲಿದೆ ಎನ್ನಲಾಗಿದೆ.

ಅನುಶ್ರೀ ಗೃಹ ಪ್ರವೇಶದಲ್ಲಿ ರೋಶನ್‌ ಭಾಗಿ!

ಕೊಡಗು ಮೂಲದ ರೋಶನ್‌ ಜೊತೆ ಅನುಶ್ರೀ ಮದುವೆ ನಡೆಯಲಿದೆಯಂತೆ. ಈಗಾಗಲೇ ಎರಡು ಕುಟುಂಬಸ್ಥರು ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಅನುಶ್ರೀ ಅವರಾಗಲೀ, ಕುಟುಂಬಸ್ಥರಾಗಲೀ ಯಾವುದೇ ಮಾಹಿತಿ ನೀಡಿಲ್ಲ. ಇದು ಅರೇಂಜ್‌ ಮ್ಯಾರೇಜ್‌ ಅಂತೆ. ಅನುಶ್ರೀ ಮನೆಯ ಗೃಹ ಪ್ರವೇಶದಲ್ಲಿ ರೋಶನ್‌ ಭಾಗಿಯಾಗಿದ್ದರು ಎನ್ನಲಾಗಿದೆ.‌ ದೇವರಿಗೆ ಆರತಿ ಮಾಡುವಾಗ ಅನುಶ್ರೀ ಪಕ್ಕದಲ್ಲಿರೋ ಹುಡುಗನೇ ರೋಶನ್ ಎನ್ನಲಾಗಿದೆ. 

ಒಟ್ಟಿಗೆ ಪೂಜೆ ಮಾಡಿರೋ ರೋಶನ್-ಅನುಶ್ರೀ

ಅನುಶ್ರೀ ಮದುವೆಯಾಗುವ ರೋಶನ್‌ ಸೋಶಿಯಲ್‌ ಮೀಡಿಯಾ ಅಕೌಂಟ್‌ ಕೂಡ ಪ್ರೈವೇಟ್‌ ಅಲ್ಲಿದೆ. ಹೀಗಾಗಿ ಅವರು ಯಾರಿರಬಹುದು ಎಂದು ಅನೇಕರಿಗೆ ಪ್ರಶ್ನೆ ಕಾಡಿತ್ತು. ಆದರೆ ಈಗ ಅನುಶ್ರೀ, ರೋಶನ್ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್‌ ಆಗ್ತಿದೆ.

ಯಾವಾಗ ಭೇಟಿಯಾಗಿತ್ತು?

ಪುನೀತ್ ರಾಜಕುಮಾರ್ ಅವರ ʼಗಂಧದಗುಡಿʼ ಡಾಕ್ಯುಮೆಂಟರಿಯ ಇವೆಂಟ್‌ನಲ್ಲಿ ಅನುಶ್ರೀ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಶನ್ ಪರಿಚಯ ಆಗಿತ್ತು. ಇವರಿಬ್ಬರು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು‌. ರೋಶನ್‌ ಅವರು ರಿಯಲ್ ಎಸ್ಟೇಟ್ ಉದ್ಯಮಿ ಎಂದು ಕೂಡ ಹೇಳಲಾಗುತ್ತಿದೆ. ಕಳೆದು ಎರಡು ವರ್ಷಗಳಿಂದ ಈ ಜೋಡಿ ಲವ್ ಮಾಡ್ತಿದೆಯಂತೆ. ಎರಡು ಕುಟುಂಬಗಳು ಈ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ರೆಡಿಯಾಗಿವೆ. ಅನುಶ್ರೀ ಅವರ ತಮ್ಮ ಹೊಸ ಹೋಟೆಲ್ ಆರಂಭಿಸಿದ್ದರು. ಆ ಪೂಜೆಯಲ್ಲಿ ಅನುಶ್ರೀ ಹಾಗೂ ರೋಷನ್ ಭಾಗಿಯಾಗಿದ್ದರು. ಈ ವಿಡಿಯೋ ಈಗ ವೈರಲ್‌ ಆಗ್ತಿದೆ.

ಇತ್ತೀಚೆಗೆ ಅನುಶ್ರೀ ಅವರು ಕೆಲ ರಿಯಾಲಿಟಿ ಶೋ, ಇವೆಂಟ್‌ಗಳಲ್ಲಿ “ಈ ವರ್ಷ ನಾನು ಪಕ್ಕಾ ಮದುವೆ ಆಗ್ತೀನಿ, ಈ ವರ್ಷವೇ ನನ್ನ ಮದುವೆ ಆಗುತ್ತದೆ” ಎಂದು ಕಾನ್ಫಿಡೆಂಟ್‌ ಆಗಿ ಅನುಶ್ರೀ ಹೇಳಿದ್ದರು. ಈಗ ಮದುವೆ ಫಿಕ್ಸ್‌ ಆಗಿರೋ ಬಗ್ಗೆ ಅನುಶ್ರೀ ಅಧಿಕೃತ ಹೇಳಿಕೆ ನೀಡಬೇಕಿದೆ. ಅನುಶ್ರೀ ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ತಂದೆ ಮನೆ ಬಿಟ್ಟು ಹೋಗಿದ್ದರು. ಆ ನಂತರ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿ ಬೆಳೆಸಿದ್ದರು. ಅನುಶ್ರೀ ಅವರು ಮಂಗಳೂರಿನವರು. ಇಂದು ಕನ್ನಡದ ನಂ 1 ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. 

View post on Instagram