ಟೀಂ ಇಂಡಿಯಾ ಆಲ್‌ರೌಂಡರ್ ವಿಶ್ವಕಪ್ ಹಿರೋ ಹಾರ್ದಿಕ್ ಪಾಂಡ್ಯ ಉದ್ಯಮಿ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದ್ವೆಯಲ್ಲಿ ಟಕೀಲಾ ಶಾಟ್ ಕೇಳ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. 

ಟೀಂ ಇಂಡಿಯಾ ಆಲ್‌ರೌಂಡರ್ ವಿಶ್ವಕಪ್ ಹಿರೋ ಹಾರ್ದಿಕ್ ಪಾಂಡ್ಯ ಉದ್ಯಮಿ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದ್ವೆಯಲ್ಲಿ ಟಕೀಲಾ ಶಾಟ್ ಕೇಳ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಜೊತೆಗೆ ಈ ವಿಡಿಯೋಗೆ ನೆಟ್ಟಿಗರು ಕೂಡ ಸಖತ್ ಕಾಮೆಂಟ್ ಮಾಡ್ತಿದ್ದಾರೆ. 

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಮುಂಬೈನ ಜಿಯೋ ಕನ್‌ವೆನ್ಶನ್‌ ಹಾಲ್‌ನಲ್ಲಿ ಅದ್ದೂರಿಯಾಗಿ ನಡೆದಿದ್ದು, ವಿಶ್ವದ ಮೂಲೆ ಮೂಲೆಗಳಿಂದ ಗಣ್ಯಾತಿಗಣ್ಯ ಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಉದ್ಯಮ ಲೋಕದ ದಿಗ್ಗಜರು, ವಿವಿಧ ದೇಶಗಳ ರಾಜಕಾರಣಿಗಳು, ಕ್ರೀಡಾಪಟುಗಳು, ಹಾಲಿವುಡ್ ಬಾಲಿವುಡ್, ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರು ಹೀಗೆ ಯಾರೊಬ್ಬ ಗಣ್ಯರನ್ನು ಬಿಡದೇ ಮುಖೇಶ್ ಅಂಬಾನಿ ತಮ್ಮ ಮನೆಯ ಮದುವೆಗೆ ಕರೆದಿದ್ದು, ಜಿಯೋ ಕನ್ವೆನ್ಶನ್ ಹಾಲ್‌ನಲ್ಲಿ ವಿವಿಐಪಿಗಳ ಸಮಾಗಮವಾಗಿತ್ತು. ಇದೇ ಸಮಾರಂಭದಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಟಕೀಲಾ ಕೇಳ್ತಿರುವ ವೀಡಿಯೋ ಈಗ ವೈರಲ್ ಆಗಿದೆ.

Scroll to load tweet…

ಈ ಮದ್ವೆ ಸಮಾರಂಭದಲ್ಲಿ ಇತರ ಕ್ರಿಕೆಟಿಗರಾದ ಎಂಎಸ್ ಧೋನಿ, ಜಸ್ಪ್ರೀತ್ ಬೂಮ್ರ, ಗೌತಮ್ ಗಂಭೀರ್, ಕೃನಾಲ್ ಪಾಂಡ್ಯ, ಇಶಾನ್ ಕಿಶಾನ್, ಯಜುವೇಂದ್ರ ಚಹಾಲ್, ಅಜಿಂಕ್ಯಾ ರಹಾನೆ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇನ್ನು ಟಕೀಲಾ ಏರಿಸಿದ ಹಾರ್ದಿಕ್ ಪಾಂಡ್ಯಾ ಬಾಲಿವುಡ್ ನಟಿ ಅನನ್ಯಾ ಪಾಂಡೆ ಜೊತೆಗೂ ಬಿಂದಾಸ್ ಆಗಿ ಕುಣಿಯುತ್ತಿರುವ ವೀಡಿಯೋ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾರ್ದಿಕ್ ಟಕೀಲಾ ಕೇಳ್ತಿರುವ ವೀಡಿಯೋದಲ್ಲಿ ದಕ್ಷಿಣದ ತಾರೆ ತೆಲುಗು ನಟ ಮಹೇಶ್ ಬಾಬು, ಬಾಲಿವುಡ್ ನಟ ರಣ್‌ಬೀರ್ ಕಪೂರ್ ಕೂಡ ಕೂಡ ಇರುವುದನ್ನು ಕಾಣಬಹುದಾಗಿದೆ. 

Scroll to load tweet…

ಆದರೆ ಸಾಮಾನ್ಯರೆಲ್ಲಾ ಪಾರ್ಟಿಗಳಲ್ಲಿ ಟಕೀಲಾ ಕೇಳುವುದು ಸಾಮಾನ್ಯ, ಆದರೆ ಯಾವುದಕ್ಕೂ ಕಡಿಮೆ ಇಲ್ಲದ ಹಾರ್ದಿಕ್ ಪಾಂಡ್ಯಾ ಈ ರೀತಿ ಟಕೀಲಾಗೆ ರಿಕ್ವೆಸ್ಟ್ ಮಾಡ್ತಿರೋದು ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಅನೇಕರು ಹಾರ್ದಿಕ್ ಪಾಂಡ್ಯ ಟಕೀಲಾ ಕೇಳ್ತಿರುವ ವೀಡಿಯೋಗೆ ಸಖತ್ ಆಗಿ ರಿಯಾಕ್ಟ್ ಮಾಡಿದ್ದಾರೆ.

ಅಂಬಾನಿ ಮಗನ ಮದುವೆಯಲ್ಲಿ ಪಾಂಡ್ಯ ಜತೆ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿದ ಫಿಫಾ ಅಧ್ಯಕ್ಷ..! ವಿಡಿಯೋ ವೈರಲ್

ಎರಡೇಕೆ ನಾಲ್ಕು ಟಕೀಲಾ ಶಾಟ್ ಕುಡಿ, ಹಾರ್ದಿಕ್ ಭಾಯ್, ನೀನು ಹೇಗಿದ್ದರೂ ವಿಶ್ವಚಾಂಪಿಯನ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎರಡು ಟಕೀಲಾ ಶಾಟ್ ಕೇಳಿದ್ರು ಇನ್ನೊಂದು ಯಾರಿಗೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ವಿಶ್ವಕಪ್ ನಂತರ ಹಾರ್ದಿಕ್ ಪಾಂಡ್ಯಾ 2 ಟಕೀಲಾ ಶಾಟ್‌ಗೆ ಅರ್ಹರಾಗಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

2024 ರ ಟಿ 20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲ್ಲುವಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯದ ವೇಳೆ ತಂಡದಲ್ಲಿದ್ದ ಹೀರೋಗಳಲ್ಲಿ ಒಬ್ಬರಾಗಿದ್ದರು. ಡೇವಿಡ್ ಮಿಲ್ಲರ್ ಮತ್ತು ಕಗಿಸೊ ರಬಾಡ ಅವರ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಅಂದಂಗೆ ಟಕೀಲಾ ಬಗ್ಗೆ ಯಾರಿಗೂ ವಿವರಿಸಬೇಕಿಲ್ಲ, ಅದೊಂದು ಅಮಲು ನೀಡುವ ಪಾನೀಯ.

ಮಗನೊಂದಿಗೆ ವಿಶ್ವಕಪ್‌ ಗೆಲುವು ಆಚರಿಸಿಕೊಂಡ ಹಾರ್ದಿಕ್‌ ಪಾಂಡ್ಯ, ಪತ್ನಿ ನತಾಶಾ ಮಿಸ್‌!