ಗಣೇಶ್ ಆಪ್ತರ ಪಾಲಿಗೆ ಗಿಣಿ. ವೃತ್ತಿಯಿಂದ ಈತ ಕ್ಯಾಬ್ ಡ್ರೈವರ್. ತನ್ನ ವೃತ್ತಿ ಮತ್ತು ಗೆಳೆಯರ ಸಾಂಗತ್ಯದ ಪರಿಣಾಮ ಗಿಣಿಯ ಜೀವನ ಆನಂದಮಯವಾಗಿತ್ತು.

ಇದಿಷ್ಟೇ ಆಗಿದ್ದರೆ ಗಿಣಿಯ ಜೀವನ ತುಂಬ ಸಿಂಪಲ್ ಆಗಿರುತ್ತಿತ್ತೇನೋ?. ಆದರೆ ಯೌವನದಲ್ಲಿ ಪ್ರೀತಿ ಮಾಡದಿದ್ದರೆ ಹೇಗೆ?. ಅದರಂತೆ ಗಿಣಿ ಕೂಡ ಪ್ರೇಮದ ಬಲೆಯಲ್ಲಿ ಬೀಳುತ್ತಾನೆ.

ಇದೇ ಕತೆಯ ಟ್ವಿಸ್ಟ್. ಗಿಣಿ ಪ್ರೀತಿಸಿದ ಹುಡುಗಿ ಯಾರು?. ಗಿಣಿಯ ಪ್ರೇಮ ಕಹಾನಿ ಏನು?. ಗಿಣಿ ಪ್ರೇಮ ಸೆಕ್ಸಸ್ ಆಗುತ್ತಾ ಅಥವಾ ಫೇಲ್ ಆಗುತ್ತಾ?. ಇದೆಲ್ಲವನ್ನು ಗಿಣಿ ಕೊಡಗು ಹೋಗುತ್ತಿದ್ದ ತನ್ನ ಪ್ರಯಾಣಿಕನಿಗೆ ಇದೆಲ್ಲವನ್ನೂ ಹೇಳುತ್ತಾ ಹೋಗುತ್ತಾನೆ.

ಈ ಮಧ್ಯೆ ನಿರ್ದೇಶಕ ಕತೆಗೊಂದು ಟ್ವಿಸ್ಟ್ ಇರಲಿ ಅಂತಾ ಫೈಟ್ ಸೀನ್ ಗಳನ್ನು ಒತ್ತಾಯವಾಗಿ ಸೇರಿಸಿರುವುದು ಕಂಡು ಬರುತ್ತದೆ. ಇದು ಪ್ರೇಕ್ಷಕನಿಗೆ ತುಸು ಕಸಿವಿಸಿ ಉಂಟು ಮಾಡಿದರೂ  ಕತೆಯ ಅಂತ ತಿಳಿಯಲಾದರೂ ನೋಡಲೇಬೇಕಾಧ ಅನಿವಾರ್ಯತೆಗೆ ಸಿಲುಕುತ್ತಾನೆ.

ಧ್ರುವ ಮೆಚ್ಚಿದ ಗಿಣಿ ಹೇಳಿದ ಕತೆ ಜ.11ಕ್ಕೆ

ದೇಸಿ ಕಥೆಗೆ ಕ್ರಿಯೇಟಿವ್ ಝಲಕ್ ನೀಡಿದ ’ಗಿಣಿ ಹೇಳಿದ ಕಥೆ’

’ಗಿಣಿ ಹೇಳಿದ ಕಥೆ’ ಹಾಡಿಗೆ ವ್ಯಾಪಕ ಮೆಚ್ಚುಗೆ

ಎಂಬತ್ನಾಲ್ಕು ಪಾತ್ರಗಳು ರಂಗಭೂಮಿ ಪಾಲಾದ ‘ಗಿಣಿ ಹೇಳಿದ ಕಥೆ’ !

ಗಿಣಿ ಹೇಳಿದ ಕಥೆ: ನಾಯಕಿಯನ್ನೂ ಮುಟ್ಟದ ಹೀರೋ!

ಗಿಣಿ ಹೇಳಿದ ಕಥೆಯ ಗುಟ್ಟುಗಳು!


ಅಸಲಿಗೆ ಗಿಣಿಗೆ ಜ್ಯೋತಿಷಿಯೋರ್ವ ಪ್ರೀತಿಯಲ್ಲಿ ಬೀಳಬೇಡ ಎಂದು ಸಲಹೆ ನೀಡಿರುತ್ತಾನೆ. ಆದರೂ ಗಿಣಿ ಪ್ರೀತಿಯಲ್ಲಿ ತನ್ನ ಭವಿಷ್ಯ ಏನಾಗಲಿದೆ ಎಂಬುದನ್ನು ತಿಳಿಯಲು ಪ್ರೀತಿ ಮಾಡಿಯೇ ಬಿಡುತ್ತಾನೆ. 

  
ಗಿಣಿಯ ಪ್ರೇಮ ಕಹಾನಿ ಏನು?. ಗಿಣಿ ಪ್ರೇಮ ಸೆಕ್ಸಸ್ ಆಗುತ್ತಾ ಅಥವಾ ಫೆಲ್ ಆಗುತ್ತಾ?. ಇದೆಲ್ಲವನ್ನು ನೋಡಲು ನೀವು ಚಿತ್ರ ವೀಕ್ಷಣೆ ಮಾಡಬೇಕು.