ಇದು ಹಳ್ಳಿ ಘಮಲಿನ ಕಥಾನಕ. ಬೇರೆಲ್ಲ ಅಂಶಗಳ ಜೊತೆ ಇದರಲ್ಲಿ ನವಿರಾದೊಂದು ಪ್ರೇಮ ಕಥಾನಕವಿದೆ. ಅದು ಚಿತ್ರದುದ್ದಕ್ಕೂ ಹರಡಿಕೊಂಡಿರುತ್ತೆ. ದಶಕಗಳ ಹಿಂದೆ ಹಳ್ಳಿ ಸೀಮೆಯಲ್ಲಿ ಪ್ರೀತಿ ಅರಳಿಕೊಳ್ಳುತ್ತಿತ್ತಲ್ಲಾ? ಅದನ್ನೇ ಇಲ್ಲಿ ಫ್ರಶ್ ಆಗಿ ಕಟ್ಟಿ ಕೊಡಲಾಗಿದೆಯಂತೆ.

ಇಲ್ಲಿನ ನಾಯಕ ಅಪ್ಪಿ ತಪ್ಪಿಯೂ ನಾಯಕಿಯ ಮೈ ಸೋಕೋದಿಲ್ಲ. ಖುದ್ದು ನಾಯಕಿಯೇ ಮುಟ್ಟಲು ಬಂದರೂ ಕೊಸರಿಕೊಂಡು ಓಡೋ ಕ್ಯಾರೆಕ್ಟರ್ ನಾಯಕನದ್ದು. ಆದರೆ ಇಂಥಾದ್ದರ ನಡುವೆಯೂ ನಾಯಕ ನಾಯಕಿಯನ್ನ ಮುಟ್ಟಲೇ ಬೇಕಾದ ಸಂದಿಗ್ಧ ಸನ್ನಿವೇಶವೊಂದು ಬಂದೊದಗುತ್ತದೆಯಂತೆ. ಆಗೇನಾಗುತ್ತದೆ ಎಂಬುದೂ ಗಿಣಿ ಹೇಳಿದ ಕಥೆಯ ಆಕರ್ಷಣೆಗಳಲ್ಲೊಂದು. ಅಂಥಾ ಹತ್ತಾರು ನವಿರು ಭಾವಗಳು ಈ ವಾರ ಪ್ರೇಕ್ಷಕರಿಗೆ ಕಚಗುಳಿ ಇಡಲಿವೆ.

ಇದರಲ್ಲಿ ಬಹುಪಾಲು ರಂಗಭೂಮಿ ಕಲಾವಿದರೇ ನಟಿಸಿದ್ದಾರೆ. ಗಿಣಿ ಹೇಳಿದ ಕಥೆಯಲ್ಲಿ ಒಟ್ಟು ಎಂಬತ್ತೇಳು ಪಾತ್ರಗಳಿವೆ. ಅದರಲ್ಲಿ ಎಂಬತ್ನಾಲಕ್ಕು ಪಾರತ್ರಗಳಿಗೆ ರಂಗಭೂಮಿ ಕಲಾವಿದರೇ ಜೀವ ತುಂಬಿದ್ದಾರೆ.

’ಗಿಣಿ ಹೇಳಿದ ಕಥೆ’ ಹಾಡಿಗೆ ವ್ಯಾಪಕ ಮೆಚ್ಚುಗೆ