’ಗಿಣಿ ಹೇಳಿದ ಕಥೆ’ ಹಾಡಿಗೆ ವ್ಯಾಪಕ ಮೆಚ್ಚುಗೆ

ಹೊಸಬರೇ ಸೇರಿ ಮಾಡಿರುವ ‘ಗಿಣಿ ಹೇಳಿದ ಕಥೆ’ ಎನ್ನುವ ಚಿತ್ರದ ಬಗ್ಗೆ ವೀಕ್ಷಕರು ಭರವಸೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಹಾಡಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 

Sandalwood movie Gini Helida Kathe song viral on social media

ಬೆಂಗಳೂರು (ಜ. 08): ಕಥೆ ಹೇಳಲು ಬಂದ ಗಿಣಿ ಮಾಧುರ್ಯದಿಂದಲೇ ಹಾರಾಡುತ್ತಾ ಪ್ರೇಕ್ಷಕರ ಮನಸಿಗೆ ಬಂದು ಸೇರಿಕೊಂಡಿದ್ದೇ ಹಾಡುಗಳ ಮೂಲಕ. ಗಿಣಿ ಹೇಳಿದ ಕಥೆಯ ಹಾಡುಗಳು ಬಿಡುಗಡೆಯಾಗಿ ದಿನ ಕಳೆಯುವುದರೊಳಗೆ ವ್ಯಾಪಕ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದು ಸಾಧ್ಯವಾಗಿದ್ದು ಹಿತನ್ ಹಾಸನ್ ಅವರ ಸಂಗೀತದಿಂದ.

ಈ ಸಿನಿಮಾ ಸಂಗೀತ ನಿರ್ದೇಶನ ಮಾಡಿರುವವರು ಹಿತನ್ ಹಾಸನ್. ಅವರ ಮೂರನೇ ಚಿತ್ರವಿದು. ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

ಈ ಚಿತ್ರದ ಭಿನ್ನವಾದ ಕಥೆಗೆ ಪೂರಕವಾದ ಸಂಗೀತ ಸಂಯೋಜನೆ ಮಾಡುವುದೇ ಸವಾಲಾಗಿತ್ತು. ಅದನ್ನು ಹಿತನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಸೀಮಿತ ಬಜೆಟ್ಟಿನಲ್ಲಿ, ಸೀಮಿತವಾದ ಪರಿಕರಗಳೊಂದಿಗೆ ಹಿತನ್ ಹಾಡುಗಳನ್ನು ರೂಪಿಸಿದ್ದಾರೆ. ಈ ಮೂಲಕ ಹಾಡುಗಳೂ ಕೂಡಾ ಗಿಣಿ ಹೇಳಿದ ಕಥೆಯ ಪ್ರಧಾನ ಆಕರ್ಷಣೆಯಾಗುವಂತೆ ನೋಡಿಕೊಂಡಿದ್ದಾರೆ.

ಗಿಣಿ ಹೇಳಿದ ಕಥೆ ಟೀಸರ್ ಒಮ್ಮೆ ನೋಡಿ. 


 

Latest Videos
Follow Us:
Download App:
  • android
  • ios