ಧ್ರುವ ಮೆಚ್ಚಿದ ಗಿಣಿ ಹೇಳಿದ ಕತೆ ಜ.11ಕ್ಕೆ
ಹೊಸಬರೇ ಸೇರಿ ಮಾಡಿರುವ ‘ಗಿಣಿ ಹೇಳಿದ ಕಥೆ’ ಎನ್ನುವ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.
‘ಆಂಗ್ಲ ಭಾಷೆಗಳಲ್ಲೇ ಚಿತ್ರದ ಹೆಸರುಗಳು ಹೆಚ್ಚಾಗಿರುವಾಗ ಅಪ್ಪಟ ಕನ್ನಡದ ಹೆಸನ್ನಿಟ್ಟುಕೊಂಡಿದ್ದು, ಎಲ್ಲ ಕನ್ನಡಿಗರು ಈ ಸಿನಿಮಾ ನೋಡುವಂತಾಗಲಿ. ಹೆಸರೇ ವಿಭಿನ್ನವಾಗಿದ್ದು, ಸಿನಿಮಾ ಕೂಡ ಇಷ್ಟೇ ಭಿನ್ನವಾಗಿ ಪ್ರೇಕ್ಷಕರಿಗೆ ತಲುಪಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದು ನಟ ಧ್ರುವ ಸರ್ಜಾ.
ಈ ಸಿನಿಮಾ ಇದೇ ತಿಂಗಳು 11ರಂದು ತೆರೆಗೆ ಬರುತ್ತಿದೆ. ರಂಗಭೂಮಿಯಲ್ಲಿ ನಟರಾಗಿ ಗುರುತಿಸಿಕೊಂಡಿದ್ದ ದೇವ್ ರಂಗಭೂಮಿ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ಮಿಸಿರುವ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ನಾಗರಾಜ್ ಉಪ್ಪುಂದ ಈ ಚಿತ್ರದ ನಿರ್ದೇಶಕರು. ಸ್ಟಾರ್ ನಟನ ಪ್ರೋತ್ಸಾಹದ ಮಾತುಗಳಿಂದ ಖುಷಿಯಾಗಿದೆ.